Asianet Suvarna News Asianet Suvarna News

ನಿಷ್ಕ್ರಿಯವಾಗಿದ್ದ ವಾರಸುದಾರರಿಲ್ಲದ ಖಾತೆಗಳಲ್ಲಿದ್ದ 35000 ಕೋಟಿ ಆರ್‌ಬಿಐ ವಶಕ್ಕೆ

10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್‌ ಖಾತೆಗಳಲ್ಲಿ ಕೊಳೆಯುತ್ತಿದ್ದ 35012 ಕೋಟಿ ರು. ಠೇವಣಿ ಮೊತ್ತವನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ಗೆ ವರ್ಗಾವಣೆ ಮಾಡಿವೆ.

RBI takes 35000 crores money from dormant accounts which has without heirs akb
Author
First Published Apr 4, 2023, 10:04 AM IST

ನವದೆಹಲಿ: 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ನಿಷ್ಕ್ರಿಯವಾಗಿರುವ ಬ್ಯಾಂಕ್‌ ಖಾತೆಗಳಲ್ಲಿ ಕೊಳೆಯುತ್ತಿದ್ದ 35012 ಕೋಟಿ ರು. ಠೇವಣಿ ಮೊತ್ತವನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ಗೆ ವರ್ಗಾವಣೆ ಮಾಡಿವೆ. 2023ರ ಫೆಬ್ರವರಿ ಅಂತ್ಯಕ್ಕೆ ಅನುಗುಣವಾಗಿ 10.24 ಕೋಟಿ ಖಾತೆಗಳಲ್ಲಿ ಈ ಹಣ ಇತ್ತು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕಾರಡ್‌ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಆರ್‌ಬಿಐಗೆ ವರ್ಗಾವಣೆಯಾದ 35012 ಕೋಟಿ ರು. ಪೈಕಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)ನದ್ದೇ 8086 ಕೋಟಿ ರು. ಇದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ 5340 ಕೋಟಿ, ಕೆನರಾ ಬ್ಯಾಂಕ್‌ನಿಂದ 4558, ಬ್ಯಾಂಕ್‌ ಆಫ್‌ ಬರೋಡಾದಿಂದ 3904 ಕೋಟಿ ರು. ವರ್ಗಾವಣೆಯಾಗಿದೆ ಎಂದು ಹೇಳಿದ್ದಾರೆ. ಖಾತೆದಾರ ವ್ಯಕ್ತಿ ಸಾವಿಗೀಡಾದಾಗ ಬ್ಯಾಂಕ್‌ ಅಧಿಕಾರಿಗಳು ಕುಟುಂಬ ಸದಸ್ಯರ ಕ್ಲೇಮು ಇತ್ಯರ್ಥಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತಾರೆ ಎಂದು ಸಚಿವರು ತಿಳಿಸಿದರು.

ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ನೋಟುಗಳು ಏಕೆ ಸಿಗುತ್ತಿಲ್ಲ? ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ

ಬ್ಯಾಂಕ್ ನಿಷ್ಕ್ರಿಯ ಖಾತೆಗಳಲ್ಲಿ 26,697 ಕೋಟಿ ರೂ.: ನಿರ್ಮಲಾ ಸೀತಾರಾಮನ್


ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂಪಾಯಿ ಕೊಳೆಯುತ್ತ ಬಿದ್ದಿರೋ ವಿಚಾರ ಎಲ್ಲರಿಗೂ ಗೊತ್ತು. ಆದ್ರೆ ಎಷ್ಟಿದೆ ಎಂಬ ಅಂದಾಜು ಯಾರಿಗೂ ಇಲ್ಲ. ಆದ್ರೆ ಈ ಬಗ್ಗೆ ಸ್ವತಃ ವಿತ್ತ ಸಚಿವೆವರೇ ಮಾಹಿತಿ ನೀಡಿದ್ದು,ಆ ಮೊತ್ತ ಕೇಳಿದ್ರೆ ಒಂದು ಕ್ಷಣ ಎಂಥವರು ಶಾಕ್ ಆಗಲೇಬೇಕು. ಕೋಆಪರೇಟಿವ್ ಬ್ಯಾಂಕ್ಗಳು (cooperative banks) ಸೇರಿದಂತೆ ದೇಶದ ವಿವಿಧ ಬ್ಯಾಂಕ್ಗಳ ನಿಷ್ಕ್ರಿಯ ಖಾತೆಗಳಲ್ಲಿ(dormant accounts) ಒಟ್ಟು 26,697 ಕೋಟಿ ರೂ. ಠೇವಣಿಯಿದೆ ಎಂದು ವಿತ್ತ ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಮಂಗಳವಾರ (ಡಿ.1) ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 2020 ಡಿಸೆಂಬರ್ 31ರ ತನಕದ ಅಂಕಿಅಂಶಗಳ ಪ್ರಕಾರ 10 ವರ್ಷಗಳಿಂದ ನಿಷ್ಕ್ರಿಯವಾಗಿರೋ ಸುಮಾರು 9 ಕೋಟಿ ಖಾತೆಗಳಲ್ಲಿಇಷ್ಟು ಮೊತ್ತದ ಹಣವಿರೋದು ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.  ಭಾರತೀಯ ರಿಸರ್ವ್ ಬ್ಯಾಂಕ್  (RBI) ನೀಡಿರೋ ಮಾಹಿತಿ ಪ್ರಕಾರ ಡಿಸೆಂಬರ್ 31, 2020 ತನಕ ಇಂಥ 8,13,34,849 ಖಾತೆಗಳು ನಿಗದಿತ ವಾಣಿಜ್ಯ ಬ್ಯಾಂಕ್ಗಳಲ್ಲಿವೆ. ಈ ಖಾತೆಗಳಲ್ಲಿ ಒಟ್ಟು 24,356 ಕೋಟಿ ರೂ. ಠೇವಣಿ ಹಣವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸೋ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು. ಅದೇರೀತಿ ಡಿಸೆಂಬರ್ 31, 2020ಕ್ಕೆ ಅನ್ವಯಿಸುವಂತೆ ಪಟ್ಟಣ ಕೋ-ಆಪರೇಟಿವ್ ಬ್ಯಾಂಕ್ ಗಳ (UCBs) 77,03,819 ಖಾತೆಗಳಲ್ಲಿ2,341 ಕೋಟಿ ರೂ.ಠೇವಣಿಯಿದೆ ಎಂಬ ಮಾಹಿತಿ ನೀಡಿದ್ದಾರೆ. 2021ರ ಮಾರ್ಚ್ 31ಕ್ಕೆ ಅನ್ವಯಿಸುವಂತೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ  (NBFCs) ಒಟ್ಟು 64 ಠೇವಣಿ ಖಾತೆಗಳಿದ್ದು(ಇದು ಸಾರ್ವಜನಿಕ ಠೇವಣಿಯಾಗಿದ್ದು,ಅವಧಿ ಪೂರ್ಣಗೊಂಡಿದ್ದರೂ 7 ವರ್ಷಗಳಿಂದ ಹಣ ಹಿಂಪಡೆದಿಲ್ಲ) ಇವುಗಳಲ್ಲಿ 0.71 ಕೋಟಿ ರೂ. ಹಣವಿದೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಂಕ್ಗಳಿಗೆ  RBI ಸೂಚನೆ
RBI 'ಬ್ಯಾಂಕ್‌ಗಳಲ್ಲಿ ಗ್ರಾಹಕರ ಸೇವೆ' ಎಂಬ ಮಾಸ್ಟರ್ ಸುತ್ತೋಲೆ ಹೊರಡಿಸಿದ್ದು, ಅದ್ರಲ್ಲಿ ಬ್ಯಾಂಕ್ಗಳು ಖಾತೆಗಳ ವಾರ್ಷಿಕ ಪರಿಶೀಲನೆ ನಡೆಸಿ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕ್ರಿಯಾಶೀಲರಾಗಿರದ ಗ್ರಾಹಕರನ್ನು ಸಂಪರ್ಕಿಸಿ ಅವರ ಖಾತೆಯಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ ಎಂಬ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡೋ ಜೊತೆ ಕಾರಣವನ್ನೂ ಕೋರುವಂತೆ ಸೂಚನೆ ನೀಡಿದೆ. ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರೋ ಖಾತೆಗಳ ಹಕ್ಕುದಾರರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಪತ್ತೆಹಚ್ಚಲು ವಿಶೇಷ ಕಾರ್ಯಕ್ರಮ ಪ್ರಾರಂಭಿಸುವಂತೆ ಬ್ಯಾಂಕ್ಗಳಿಗೆ ಸಲಹೆ ನೀಡಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ಬ್ಯಾಂಕ್ ಗಳು ತಮ್ಮ ವೆಬ್ ಸೈಟ್ ಗಳಲ್ಲಿ ಠೇವಣಿ ಹಿಂಪಡೆಯದ ಅಥವಾ ಯಾವುದೇ ವ್ಯವಹಾರ ನಡೆಸದ ನಿಷ್ಕ್ರಿಯ ಅಥವಾ 10 ವರ್ಷಗಳಿಂದ ಸಕ್ರಿಯವಾಗಿರದ ಖಾತೆಗಳ ಪಟ್ಟಿಯನ್ನುಪ್ರಕಟಿಸಬೇಕು.ಇದ್ರಲ್ಲಿ ಖಾತೆದಾರರ ಹೆಸರು ಹಾಗೂ ವಿಳಾಸ ಕೂಡ ಇರಬೇಕು. 

ಭಾರತದ 15 ಸ್ವಿಸ್ ಖಾತೆ ನಿಷ್ಕ್ರಿಯ; ವಾರಸ್ಥಾರರೇ ಇಲ್ಲ!

Latest Videos
Follow Us:
Download App:
  • android
  • ios