ಯಾರೆಲ್ಲ ಐಟಿಆರ್ -1 ಸಹಜ್ ಸಲ್ಲಿಕೆ ಮಾಡ್ಬೇಕು? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ

ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಸಲ್ಲಿಕೆ ಮಾಡುವ ಸಮಯದಲ್ಲಿ ಕೆಲವರಿಗೆ ಒಂದಿಷ್ಟು ಗೊಂದಗಳು ಕಾಡಬಹುದು. ಐಟಿಆರ್ ಅರ್ಜಿಗಳು 1-6 ನಮೂನೆಗಳನ್ನು ಹೊಂದಿವೆ. ಇದರಲ್ಲಿ ಐಟಿಆರ್ -1 ಸಹಜ್ ಅರ್ಜಿಯನ್ನು ಸಲ್ಲಿಕೆ ಮಾಡುವ ತೆರಿಗೆದಾರರ ಪ್ರಮಾಣ ಹೆಚ್ಚಿದೆ. ಹಾಗಾದ್ರೆ ಐಟಿಆರ್ 1 ಸಹಜ್ ಅರ್ಜಿಯನ್ನು ಯಾರು ಸಲ್ಲಿಕೆ ಮಾಡಬೇಕು? ಹೇಗೆ? ಇಲ್ಲಿದೆ ಮಾಹಿತಿ. 

Income Tax Return Filing who have to file ITR 1 Sahaj Check Details Here anu

Business Desk:ತೆರಿಗೆದಾರರು ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆಗೆ ನೀವು ಸಲ್ಲಿಕೆ ಮಾಡುವ ಆದಾಯ ತೆರಿಗೆ ರಿಟರ್ನ್ ಅಥವಾ ಐಟಿಆರ್ ಆ ಹಣಕಾಸು ಸಾಲಿನಲ್ಲಿ ನಿಮ್ಮ ಆದಾಯ, ಕಡಿತಗಳು ಹಾಗೂ ತೆರಿಗೆ ಪಾವತಿ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಐಟಿಆರ್ ಫೈಲ್ ಮಾಡುವ ಪ್ರಕ್ರಿಯೆಯನ್ನು ಆದಾಯ ತೆರಿಗೆ ಫೈಲಿಂಗ್ ಎಂದು ಕೂಡ ಕರೆಯಲಾಗುತ್ತದೆ. ಐಟಿಆರ್ ಸಲ್ಲಿಕೆ ಮಾಡುವ ಮುಖ್ಯ ಉದ್ದೇಶ ಆ ವರ್ಷದ ನಿಮ್ಮ ತೆರಿಗೆ ಪಾವತಿ ಮೊತ್ತ ಎಷ್ಟು, ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದೀರಾ ಅಥವಾ ಹೆಚ್ಚಿನ ತೆರಿಗೆ ಪಾವತಿಸಿದ್ರೆ ರೀಫಂಡ್ ಕ್ಲೇಮ್ ಸಂಬಂಧಿಸಿದ ಮಾಹಿತಿಗಳನ್ನು ಇದರಲ್ಲಿ ಉಲ್ಲೇಖಿಸಬಹುದು. ಐಟಿಆರ್ ಅರ್ಜಿ (ಫಾರ್ಮ್ ) ನಮೂನೆಗಳಲ್ಲಿ ಕೂಡ ವ್ಯತ್ಯಾಸವಿದೆ. ಅಂದರೆ ಎಲ್ಲರಿಗೂ ಒಂದೇ ಮಾದರಿಯ ಅರ್ಜಿ ನಮೂನೆಗಳಿರೋದಿಲ್ಲ. ವೈಯಕ್ತಿಕ, ವೃತ್ತಿ ಹಾಗೂ ಉದ್ಯಮ ವರ್ಗಗಳ ಆಧಾರದಲ್ಲಿ ಐಟಿಆರ್ ಅರ್ಜಿ ನಮೂನೆ ಕೂಡ ಬದಲಾಗುತ್ತದೆ. ಸದ್ಯ ಆದಾಯ ತೆರಿಗೆ ಇಲಾಖೆ 6 ವಿಧದ ಐಟಿಆರ್ ಅರ್ಜಿ ನಮೂನೆ ನೀಡುತ್ತಿದೆ. 2023-24ನೇ ಆರ್ಥಿಕ ಸಾಲಿಗೆ ಈ ಅರ್ಜಿ ನಮೂನೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಫೆ.10ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. 

ಈ ವರ್ಷ ಸಿಬಿಡಿಟಿ ಐಟಿಆರ್ ಅರ್ಜಿಗಳು 1-6,  ಐಟಿಆರ್ -V (ಪರಿಶೀಲನಾ ಅರ್ಜಿ) ಹಾಗೂ ಐಟಿಆರ್ ಸ್ವೀಕೃತಿ ಅರ್ಜಿಯನ್ನು ಕೂಡ ಫೆಬ್ರವರಿಯಲ್ಲಿ ಬಿಡುಗಡೆಗೊಳಿಸಿದೆ. ಇದು ತೆರಿಗೆದಾರರಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಒದಗಿಸಲು ಸಾಕಷ್ಟು ಸಮಯಾವಕಾಶ ಒದಗಿಸಿದೆ. ಈ ಹಿಂದೆ ಆದಾಯ ತೆರಿಗೆ ಇಲಾಖೆ ಸಂಬಂಧಪಟ್ಟ ಆರ್ಥಿಕ ಸಾಲಿಗೆ ಸಂಬಂಧಿಸಿದ ಐಟಿಆರ್ ಅರ್ಜಿಗಳನ್ನು ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಬಿಡುಗಡೆಗೊಳಿಸುತ್ತಿತ್ತು. ಇನ್ನು ಸಿಬಿಡಿಟಿ ಐಟಿಆರ್ -1 ಅರ್ಜಿಗೆ ಸಂಬಂಧಿಸಿ ಸೆಕ್ಷನ್ 139 (1) ಅಡಿಯಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಿದೆ.  ವಾರ್ಷಿಕ 2.5ಲಕ್ಷ ರೂ.ಗಿಂತ ಕಡಿಮೆ ತೆರಿಗೆ ವಿಧಿಸಬಲ್ಲ ಆದಾಯ ಹೊಂದಿರೋರು  ಐಟಿಆರ್ -1 ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಐಟಿಆರ್ 1 ಸಹಜ್ ಎಂದು ಕೂಡ ಕರೆಯಲಾಗುತ್ತದೆ.

ವಿಮಾ ಕ್ಷೇತ್ರದಲ್ಲಿ ನಿಯಮ ಬದಲಾವಣೆ; ಹೊಸ ವಿಮೆ ಖರೀದಿಸುವ ಮುನ್ನಈ ವಿಷಯ ಗಮನಿಸಿ

ಯಾರು ಐಟಿಆರ್ -1 ಸಹಜ್ ಫೈಲ್ ಮಾಡಬಹುದು?
ಐಟಿಆರ್ -1 (ಸಹಜ್) ಹಾಗೂ ಐಟಿಆರ್ ಅರ್ಜಿ ನಮೂನೆ 4 (ಸುಗಮ್)  ಸರಳ ಅರ್ಜಿಗಳಾಗಿದ್ದು, ಇದು ಸಣ್ಣ ಹಾಗೂ ಮಧ್ಯಮ ತೆರಿಗೆದಾರರಿಗೆ ಸಂಬಂಧಿಸಿದ್ದಾಗಿದೆ. 50 ಲಕ್ಷ ರೂ. ತನಕ ಆದಾಯ ಹೊಂದಿರುವ ವ್ಯಕ್ತಿಗಳು ಈ ಅರ್ಜಿ ಸಲ್ಲಿಕೆ ಮಾಡಬಹುದು.  ವೇತನ, ಗೃಹ ಆಸ್ತಿ, ಇತರ ಮೂಲಗಳು (ಬಡ್ಡಿ ಇತ್ಯಾದಿ) ಹಾಗೂ 5 ಸಾವಿರ ರೂ. ತನಕ ಕೃಷಿ ಆದಾಯ ಹೊಂದಿರೋರು ಸಹಜ್ ಅರ್ಜಿ ಫೈಲ್ ಮಾಡಬಹುದು. ಇನ್ನು ಸುಗಮ್ ಅರ್ಜಿಯನ್ನು ವೈಯಕ್ತಿಕ, ಹಿಂದು ಅವಿಭಕ್ತ ಕುಟುಂಬಗಳು ಹಾಗೂ ಸಂಸ್ಥೆಗಳು (LLPs ಹೊರತುಪಡಿಸಿ) ಸಲ್ಲಿಕೆ ಮಾಡಬಹುದು. ಒಟ್ಟಾರೆ 50ಲಕ್ಷ ರೂ. ತನಕ ಆದಾಯ ಹೊಂದಿರುವ ಹಾಗೂ ಸೆಕ್ಷನ್ 44AD, 44ADA ಅಥವಾ 44AE ಅಡಿಯಲ್ಲಿ ಉದ್ಯಮ ಹಾಗೂ ವೃತ್ತಿಯಿಂದ ಆದಾಯ ಪಡೆಯೋರು ಈ ಅರ್ಜಿ ಸಲ್ಲಿಕೆ ಮಾಡಬಹುದು.

ಯಾವೆಲ್ಲ ದಾಖಲೆಗಳು ಅಗತ್ಯ?
ಅರ್ಜಿ ನಮೂನೆ -16, ಮನೆ ಬಾಡಿಗೆ ಸ್ವೀಕೃತಿ, ಹೂಡಿಕೆ ಪಾವತಿ ಪ್ರೀಮಿಯಂ ಸ್ವೀಕೃತಿಗಳು ಅಗತ್ಯ. ಐಟಿಆರ್ ಯಾವುದೇ ಅನುಬಂಧಗಳನ್ನು ಹೊಂದಿಲ್ಲ. ಹೀಗಾಗಿ ಹೂಡಿಕೆ ಪ್ರೂಫ್, ಟಿಡಿಎಸ್ ಪ್ರಮಾಣಪತ್ರಗಳು ಸೇರಿದಂತೆ ಯಾವುದೇ ದಾಖಲೆಗಳನ್ನು ಐಟಿಆರ್ ಜೊತೆಗೆ ಅಟ್ಯಾಚ್ ಮಾಡಬೇಕಾದ ಅಗತ್ಯವಿಲ್ಲ. ಆದರೆ, ತೆರಿಗೆ ಅಧಿಕಾರಿಗಳು, ತನಿಖೆ, ಮೌಲ್ಯಮಾಪನ ಇತ್ಯಾದಿ ಹೆಸರಿನಲ್ಲಿ ಈ ದಾಖಲೆಗಳ ಬಗ್ಗೆ ಪ್ರಶ್ನಿಸುವ ಸಾಧ್ಯತೆಯಿರುವ ಕಾರಣ ಅವುಗಳನ್ನು ನಿಮ್ಮ ಬಳಿ ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.

ಇನ್ಮುಂದೆ ಸಣ್ಣ ಉಳಿತಾಯ ಯೋಜನೆಗಳಿಗೆ ಪ್ಯಾನ್, ಆಧಾರ್ ಕಡ್ಡಾಯ

ಆನ್ ಲೈನ್ ಸಲ್ಲಿಕೆ ಸಾಧ್ಯ
ಐಟಿಆರ್ -1 ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಸಲ್ಲಿಕೆ ಮಾಡಬಹುದು. ಈ ಸೇವೆ ಬಳಸಿಕೊಂಡು ವೈಯಕ್ತಿಕ ತೆರಿಗೆದಾರರು ಇ-ಫೈಲಿಂಗ್ ಪೋರ್ಟಲ್ ಮೂಲಕ ಅಥವಾ ಆಪ್ ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. 


 

Latest Videos
Follow Us:
Download App:
  • android
  • ios