EPF ಖಾತೆಯನ್ನುಹೊಸ ಕಂಪನಿಗೆ ವರ್ಗಾಯಿಸಬೇಕಾ? ಹಾಗಾದ್ರೆ ಯಾವ ಅರ್ಜಿ ನಮೂನೆ ಬಳಸ್ಬೇಕು?
ಉದ್ಯೋಗಿಗಳು ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ, ವರ್ಗಾವಣೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಬಳಸುವ ಅರ್ಜಿ ನಮೂನೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಇದರಿಂದ ಯಾವ ಸಂದರ್ಭದಲ್ಲಿ ಯಾವ ಅರ್ಜಿ ನಮೂನೆ ಬಳಸಬೇಕು ಎಂಬುದು ತಿಳಿಯುತ್ತದೆ.
Business Desk:ತಿಂಗಳ ವೇತನ ಪಡೆಯುವ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಈ ಖಾತೆಗಳನ್ನು ನಿರ್ವಹಣೆ ಮಾಡುತ್ತದೆ. ಇಪಿಎಫ್ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ನೀಡುವ ಯೋಜನೆಯಾಗಿದೆ. ಇದು ಕೇವಲ ಉಳಿತಾಯ ಯೋಜನೆಯಾದ ಇಪಿಎಫ್ ಅನ್ನು ಮಾತ್ರ ಒಳಗೊಂಡಿಲ್ಲ. ಬದಲಿಗೆ ಪಿಂಚಣಿ ಹಾಗೂ ವಿಮಾ ಸೌಲಭ್ಯವನ್ನು ಕೂಡ ಒದಗಿಸುತ್ತದೆ. ಇಪಿಎಫ್ ಯೋಜನೆ 1952, ಪಿಂಚಣಿ ವ್ಯವಸ್ಥೆ1995 (ಇಪಿಎಸ್) ಹಾಗೂ ವಿಮಾ ಯೋಜನೆ 1976 (ಇಡಿಎಲ್ ಐ) ಆಧಾರದಲ್ಲಿ ಈ ಮೂರು ಯೋಜನೆಗಳು ಕಾರ್ಯನಿರ್ವಹಿಸುತ್ತವೆ. ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡುತ್ತದೆ. ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67ಉದ್ಯೋಗಿಗಳ ಭವಿಷ್ಯ ನಿಧಿಗೆ ಹೋಗುತ್ತದೆ. ಇನ್ನು ಇಪಿಎಫ್ ಠೇವಣಿ ಸಂಪರ್ಕಿತ ವಿಮಾ ಯೋಜನೆ (ಇಡಿಎಲ್ಐ) ಅರ್ಹ ಪಿಎಫ್ ಖಾತೆದಾರರಿಗೆ ಗರಿಷ್ಠ 7ಲಕ್ಷ ರೂ. ತನಕ ವಿಮಾ ಸೌಲಭ್ಯ ಕಲ್ಪಿಸುತ್ತದೆ. ಹೀಗಿರುವಾಗ ಇಪಿಎಫ್ ಖಾತೆಗೆ ಸಂಬಂಧಿಸಿದ ಆರು ಮುಖ್ಯ ಕ್ಲೇಮ್ ಅರ್ಜಿಗಳ ಬಗ್ಗೆ ನೀವು ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ಆ ಅರ್ಜಿಗಳು ಯಾವುವು?
1.ಫಾರ್ಮ್ 10ಸಿ: ಈ ಅರ್ಜಿಯನ್ನು ಉದ್ಯೋಗಿಗಳು ಇಪಿಎಫ್ ಖಾತೆಯಿಂದ ಹಣವನ್ನು ವಿತ್ ಡ್ರಾ ಮಾಡಲು ಬಳಸಬೇಕಾಗುತ್ತದೆ.
2.ಫಾರ್ಮ್ 10ಡಿ: ತಿಂಗಳ ಪಿಂಚಣಿ ಪಡೆಯಲು ನೀವು ಈ ಅರ್ಜಿ ಬಳಸಬಹುದು.
3.ಫಾರ್ಮ್ 31: ಇಪಿಎಫ್ ಖಾತೆಯಿಂದ ಸಾಲ ಪಡೆಯಲು ಹಾಗೂ ಹಣ ವಿತ್ ಡ್ರಾ ಮಾಡಲು ಬಳಸಬೇಕಾಗುತ್ತದೆ.
ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಯಾವೆಲ್ಲ ಕಾರಣಗಳಿಗೆ ನೋಟಿಸ್ ನೀಡುತ್ತದೆ?
4.ಫಾರ್ಮ್ 13: ನೀವು ಕಂಪನಿ ಬದಲಾಯಿಸಿದ ಸಂದರ್ಭದಲ್ಲಿ ನಿಮ್ಮ ಇಪಿಎಫ್ ಖಾತೆಯನ್ನು ವರ್ಗಾವಣೆ ಮಾಡಲು ಈ ಅರ್ಜಿ ಬಳಸಬೇಕಾಗುತ್ತದೆ. ಇದು ನಿಮ್ಮ ನಿಧಿ ನಿರ್ದಿಷ್ಟ ಸ್ಥಳದಲ್ಲಿದೆ ಎಂಬ ಬಗ್ಗೆ ಭರವಸೆ ನೀಡುತ್ತದೆ.
5.ಫಾರ್ಮ್ 20: ಒಂದು ವೇಳೆ ಉದ್ಯೋಗಿ ಮರಣ ಹೊಂದಿದ್ರೆ ಈ ಅರ್ಜಿ ನಮೂನೆ ಬಳಸಿ ಆತ ಅಥವಾ ಆಕೆ ಕುಟುಂಬ ಸದಸ್ಯರು ಅಥವಾ ನಾಮಿನಿ ಪಿಎಫ್ ಹಣವನ್ನು ಪಡೆಯಬಹುದು. ಒಂದು ವೇಳೆ ನಿಮ್ಮ ಉದ್ಯೋಗ 10 ವರ್ಷಗಳಿಗಿಂತ ಸಣ್ಣ ಅವಧಿಯದ್ದಾಗಿದ್ದರೂ ಕೂಡ ಈ ಅರ್ಜಿ ಬಳಸಬಹುದಾಗಿದೆ.
6.ಫಾರ್ಮ್ 51ಎಫ್: ಉದ್ಯೋಗಿಯ ಠೇವಣಿ ಸಂಪರ್ಕಿತ ವಿಮೆ ಪ್ರಯೋಜನ ಪಡೆಯಲು ಉದ್ಯೋಗಿಯು ನಾಮಿನಿಯು ಫಾರ್ಮ್ 51ಎಫ್ ಬಳಸಿಕೊಳ್ಳಬಹುದು.
ಬಡ್ಡಿ ದರ ಏರಿಕೆಗೆ ರಿಸರ್ವ್ ಬ್ಯಾಂಕ್ ತಾತ್ಕಾಲಿಕ ತಡೆ: ಸಾಲಗಾರರು ಖುಷ್
ಟಿಡಿಎಸ್ ಕಡಿತ ಇಳಿಕೆ
2023-24ನೇ ಸಾಲಿನ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಲಾಗಿದೆ. ಇದು ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಹೊಂದಿರದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಹೊಸ ತಿದ್ದುಪಡಿ 2023ರ ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ. ಇದರಿಂದ ಇಪಿಎಫ್ಒ ದಾಖಲೆಗಳಲ್ಲಿ ಪ್ಯಾನ್ ಮಾಹಿತಿ ನವೀಕರಿಸದ ವ್ಯಕ್ತಿಗಳಿಗೆ ಪ್ರಯೋಜನವಾಗಲಿದೆ. ಇದಕ್ಕೂ ಮೊದಲು ಆದಾಯ ತೆರಿಗೆ ಕಾನೂನಿನ ಅನ್ವಯ ಇಪಿಎಫ್ ಖಾತೆ ತೆರೆದು ಐದು ವರ್ಷದೊಳಗೆ ಹಣವನ್ನು ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ಕಡಿತ ಮಾಡಲಾಗುತ್ತಿತ್ತು. ವಿತ್ ಡ್ರಾ ಮೊತ್ತ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿದ್ರೆ ಮಾತ್ರ ಟಿಡಿಎಸ್ ಕಡಿತ ಮಾಡಲಾಗುತ್ತಿತ್ತು.