ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಯಾವೆಲ್ಲ ಕಾರಣಗಳಿಗೆ ನೋಟಿಸ್ ನೀಡುತ್ತದೆ?
ತೆರಿಗೆದಾರರು ಪ್ರತಿ ವರ್ಷ ಐಟಿಆರ್ ಸಲ್ಲಿಕೆ ಮಾಡೋದು ಅಗತ್ಯ. ಆದರೆ, ತೆರಿಗೆದಾರರು ಐಟಿಆರ್ ಸಲ್ಲಿಕೆ ಮಾಡದಿದ್ರೆ ಅಥವಾ ಅದರಲ್ಲಿ ಸರಿಯಾದ ಮಾಹಿತಿಗಳನ್ನು ನೀಡದಿದ್ರೆ ಆದಾಯ ತೆರಿಗೆ ಇಲಾಖೆ ಅವರಿಗೆ ನೋಟಿಸ್ ಜಾರಿ ಮಾಡುತ್ತದೆ. ಇಷ್ಟೇ ಅಲ್ಲ, ಇನ್ನೂ ಕೆಲವು ಕಾರಣಗಳಿಗೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ನೋಟಿಸ್ ನೀಡುತ್ತದೆ. ಹಾಗಾದ್ರೆ ಆ ಕಾರಣಗಳು ಯಾವುವು? ಇಲ್ಲಿದೆ ಮಾಹಿತಿ.
Business Desk:ಆದಾಯ ತೆರಿಗೆ ವ್ಯಾಪ್ತಿಗೊಳಪಡುವವರು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡೋದು ಕಡ್ಡಾಯ. ಆದಾಯ ತೆರಿಗೆ ಇಲಾಖೆ ಯಾವುದೇ ದಂಡ ವಿಧಿಸಬಾರದು ಅಂದ್ರೆ ನಿಗದಿತ ದಿನಾಂಕದೊಳಗೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡೋದು ಅಗತ್ಯ. ಇನ್ನು ಅಂತಿಮ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡಲು ವಿಫಲರಾದ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ. ಅನೇಕ ಪ್ರಕರಣಗಳಲ್ಲಿ ತೆರಿಗೆದಾರರು ಅಂತಿಮ ಗಡುವಿನೊಳಗೆ ಐಟಿಆರ್ ಫೈಲ್ ಮಾಡಿದರೂ ಕೂಡ ಕೆಲವು ತೆರಿಗೆದಾರರಿಗೆ ಆದಾಯ ತೆರಿಗೆ ನೋಟಿಸ್ ನೀಡಲಾಗುತ್ತದೆ. ನೀವು ಆದಾಯ ತೆರಿಗೆ ನೋಟಿಸ್ ಸ್ವೀಕರಿಸಿದ ಮಾತ್ರಕ್ಕೆ ತಪ್ಪು ಮಾಡಿದ್ದೀರಿ ಎಂದು ಅರ್ಥವಲ್ಲ. ನಿಮ್ಮ ಐಟಿಆರ್ ನಲ್ಲಿ ಕೆಲವು ದೋಷಗಳು ಕಾಣಿಸಿರುವ ಕಾರಣದಿಂದ ಕೂಡ ನಿಮಗೆ ನೋಟಿಸ್ ನೀಡಿರಬಹುದು. ಹೀಗಾಗಿ ನೋಟಿಸ್ ಗೆ ನೀವು ಸಮರ್ಪಕವಾದ ಉತ್ತರ ನೀಡಬೇಕು. ಹಾಗೆಯೇ ಇಲಾಖೆಗೆ ಅಗತ್ಯವಿರುವ ಎಲ್ಲ ದಾಖಲೆಗಳು ಹಾಗೂ ಮಾಹಿತಿಯನ್ನು ನೀಡಬೇಕು. ಆಗ ಯಾವುದೇ ಸಮಸ್ಯೆ ಆಗೋದಿಲ್ಲ. ಐಟಿಆರ್ ನಲ್ಲಿ ನಮೂದಿಸಿರುವ ಕೆಲವು ಮಾಹಿತಿಗಳನ್ನು ಖಚಿತಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದು. ಇಷ್ಟೇ ಅಲ್ಲ, ಇನ್ನೂ ಕೆಲವು ಕಾರಣಗಳಿಗೆ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ. ಹಾಗಾದ್ರೆ ಯಾವೆಲ್ಲ ಕಾರಣಗಳಿಗೆ ನೋಟಿಸ್ ನೀಡಲಾಗುತ್ತದೆ? ಇಲ್ಲಿದೆ ಮಾಹಿತಿ.
1.ಘೋಷಿಸಿರುವ ಆದಾಯ ಹಾಗೂ ನೈಜ್ಯ ಆದಾಯದಲ್ಲಿ ವ್ಯತ್ಯಾಸ: ತೆರಿಗೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ತೆರಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ ಸದಾ ಒಂದು ಕಣ್ಣಿಟ್ಟಿರುತ್ತದೆ. ನೀವು ವರದಿಯಲ್ಲಿ ನಮೂದಿಸಿರುವ ಆದಾಯ ಹಾಗೂ ನಿಮ್ಮ ನೈಜ್ಯ ಆದಾಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ನೀಡುತ್ತದೆ.
ಶೀಘ್ರದಲ್ಲಿ ಯುಪಿಐ ಮೂಲಕವೂ ಸಿಗಲಿದೆ ಸಾಲ: ಮಾಹಿತಿ ನೀಡಿದ RBI
2.ಅಧಿಕ ಮೊತ್ತದ ವಹಿವಾಟಿನ ಬಗ್ಗೆ ಮಾಹಿತಿ ನೀಡಲು ವಿಫಲರಾದಾಗ: ಐಟಿಆರ್ ನಲ್ಲಿ ಅಧಿಕ ಮೊತ್ತದ ವಹಿವಾಟುಗಳ ಬಗ್ಗೆ ಮಾಹಿತಿ ನೀಡದಿದ್ದಾಗ ತೆರಿಗೆ ಅಧಿಕಾರಿಗಳು ಅಂಥ ಐಟಿಆರ್ ಪರಿಶೀಲಿಸುತ್ತಾರೆ. ಈ ವಹಿವಾಟುಗಳಲ್ಲಿ ದೊಡ್ಡ ಮೊತ್ತದ ನಗದು ಠೇವಣಿಗಳು, ಆಸ್ತಿ ಖರೀದಿ ಅಥವಾ ದುಬಾರಿ ವಸ್ತುಗಳ ಖರೀದಿ ಸೇರಿದೆ. ಕಪ್ಪು ಹಣ ತಡೆಗೆ ಹಾಗೂ ವರದಿಯಾಗದ ಆದಾಯ ಪತ್ತೆಗೆ ಆದಾಯ ತೆರಿಗೆ ಇಲಾಖೆ ತೆರಿಗೆದಾರರು ಅಧಿಕ ಮೊತ್ತದ ವಹಿವಾಟುಗಳ ವರದಿ ನೀಡುವಂತೆ ಆಗ್ರಹಿಸುತ್ತದೆ.
3.ಅಪೂರ್ಣ ದಾಖಲೆಗಳು: ಐಟಿಆರ್ ಫೈಲ್ ಮಾಡುವಾಗ ನೀವು ಎಲ್ಲ ಅಗತ್ಯ ದಾಖಲೆಗಳನ್ನು ಅದರೊಂದಿಗೆ ಅಟ್ಯಾಚ್ ಮಾಡಬೇಕು. ತೆರಿಗೆ ಕಡಿತದ ಪ್ರಯೋಜನ ಪಡೆದ ಎಲ್ಲ ದಾಖಲೆಗಳು ಹಾಗೂ ಆ ಹಣಕಾಸು ಸಾಲಿನಲ್ಲಿ ನೀವು ಎಲ್ಲ ಮೂಲಗಳಿಂದ ಪಡೆದ ಒಟ್ಟು ಆದಾಯದ ಮಾಹಿತಿ ಒದಗಿಸುವ ಎಲ್ಲ ದಾಖಲೆಗಳನ್ನು ನೀಡಬೇಕು.
4.ತಡವಾಗಿ ಅಥವಾ ಐಟಿಆರ್ ಸಲ್ಲಿಕೆ ಮಾಡದಿರೋದು: ನೀವು ಐಟಿಆರ್ ಸಲ್ಲಿಕೆ ಮಾಡದಿದ್ರೆ ಅಥವಾ ಸಮಯಕ್ಕೆ ಸರಿಯಾಗಿ ಸಲ್ಲಿಸದಿದ್ರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ.
15*15*15 ಹಣಕಾಸು ಸೂತ್ರ :15 ವರ್ಷ ತಿಂಗಳಿಗೆ 15 ಸಾವಿರ ರೂ. ಹೂಡಿಕೆ ಮಾಡಿದ್ರೆ 1ಕೋಟಿ ಗಳಿಸ್ಬಹುದು!
5.ಕೆಲವು ಐಟಿಆರ್ ಪರಿಶೀಲನೆ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಂದಿಷ್ಟು ಐಟಿಆರ್ ಗಳನ್ನು ಹಾಗೇ ಸುಮ್ಮನೆ ಆಯ್ಕೆ ಮಾಡಿ ಪರಿಶೀಲನೆ ನಡೆಸುತ್ತಾರೆ. ಹೀಗೆ ಆಯ್ಕೆಯಾದ ಐಟಿಆರ್ ಗಳಲ್ಲಿ ನಿಮ್ಮದ್ದು ಸೇರಿದ್ದು, ಎಲ್ಲ ಮಾಹಿತಿಗಳು ಸಮರ್ಪಕವಾಗಿದ್ದರೆ ತೊಂದರೆಯಿಲ್ಲ. ಆದರೆ, ಏನಾದ್ರೂ ತಪ್ಪುಗಳಿದ್ದರೆ ನೋಟಿಸ್ ಬರುತ್ತದೆ.
6.ಹೆಚ್ಚುವರಿ ಕಡಿತಗಳು: ಒಂದು ವೇಳೆ ನೀವು ಹೆಚ್ಚುವರಿ ಕಡಿತಗಳನ್ನು ಕ್ಲೇಮ್ ಮಾಡಿದ್ರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ಪರಿಶೀಲನೆಗೆ ನಿಮಗೆ ನೋಟಿಸ್ ನೀಡುತ್ತಾರೆ.