ಪ್ರಮುಖ ಟೆಕ್ ಕಂಪನಿಗಳಲ್ಲಿ ಒಂದಾಗಿರುವ ಎನ್ ಮಿಡಿಯಾ ಸಿಇಒ ಜೆನ್ಸನ್ ಹುವಾಂಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿವೆ. ಟೆಕ್ ಜಗತ್ತಿನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಜೆನ್ಸನ್ ಹುವಾಂಗ್ ಹೋರಾಟದ ಜೀವನ ಹೇಗಿತ್ತು ಗೊತ್ತಾ?
ಜಗತ್ತಿನ ಪ್ರಮುಖ ಟೆಕ್ ಕಂಪನಿಗಳಲ್ಲಿ ಒಂದಾದ ಎನ್ವಿಡಿಯಾ (Nvidia) ಕಂಪನಿಯ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಈಗ ಭಾರಿ ಸುದ್ದಿಯಲ್ಲಿದ್ದಾರೆ. ಎನ್ ಮಿಡಿಯಾ ಹೆಲ್ತ್ ಕೇರ್ ಉಪಾಧ್ಯಕ್ಷೆ ಜೊತೆಗಿನ ಸಂಬಂಧ ಮತ್ತು ಹನಿಟ್ರ್ಯಾಪ್ ವಿವಾದದ ಹಿನ್ನೆಲೆಯಲ್ಲಿ ಅವರು ಕಂಪನಿಯ ಸಿಇಒ, ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಒಂದು ಕಾಲದಲ್ಲಿ ತಮ್ಮ ಸರಳ ಜೀವನ ಮತ್ತು ಸುಂದರ ಕುಟುಂಬವೇ ತಮ್ಮ ದೊಡ್ಡ ಸಂಪತ್ತು ಎಂದು ಹೇಳಿಕೊಳ್ಳುತ್ತಿದ್ದ ಹುವಾಂಗ್ ಅವರ ವೈಯಕ್ತಿಕ ಬದುಕು ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ.
ಸಾಧನೆ ಸುಲಭವಾಗಿರಲಿಲ್ಲ
ಎಐ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡುವುದಕ್ಕೂ, ಎನ್ವಿಡಿಯಾದಂತಹ ಬೃಹತ್ ಟೆಕ್ ಕಂಪನಿಯನ್ನು ಮುನ್ನಡೆಸುವುದಕ್ಕೂ ಮೊದಲು ಜೆನ್ಸನ್ ಹುವಾಂಗ್ ಅವರ ಜೀವನ ಅಷ್ಟು ಸುಲಭವಾಗಿರಲಿಲ್ಲ. ತಮ್ಮ 15ನೇ ವಯಸ್ಸಿನಲ್ಲೇ ಅಮೆರಿಕದ ರೆಸ್ಟೋರೆಂಟ್ವೊಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ, ಗ್ರಾಹಕರಿಗೆ ಊಟ ಬಡಿಸುವ ವೇಟರ್ ಕೆಲಸವನ್ನೂ ಮಾಡುತ್ತಿದ್ದರು. ಆಗ ಎನ್ವಿಡಿಯಾ ಕಂಪನಿಯೇ ಆರಂಭವಾಗಿರಲಿಲ್ಲ. ಆದರೆ, ಮುಂದೆ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಸಾಧನೆ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಕುಟುಂಬವೇ ದೊಡ್ಡ ಸಂಪತ್ತು ಎಂದಿದ್ದ ಹುವಾಂಗ್
2025ರಲ್ಲಿ 'TIME' ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಜೆನ್ಸನ್ ಹುವಾಂಗ್ ತಮ್ಮ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ ಎಂಬುದನ್ನು ಹಂಚಿಕೊಂಡಿದ್ದರು. ತಮ್ಮ ಸಾಧನೆ, ಕೋಟ್ಯಂತರ ರೂಪಾಯಿ ಸಂಪತ್ತು ಅಥವಾ ವೃತ್ತಿಜೀವನದ ಬಗ್ಗೆ ಮಾತನಾಡುವ ಬದಲು ಪತ್ನಿ ಲೋರಿ ಹುವಾಂಗ್, ಬೆಳೆದು ದೊಡ್ಡವರಾಗಿರುವ ಮಕ್ಕಳು ಮತ್ತು ತಮ್ಮ ಎರಡು ನಾಯಿಗಳ ಬಗ್ಗೆ ಹೇಳಿಕೊಂಡಿದ್ದರು. ನನ್ನ ಜೀವನ ತುಂಬಾ ಸರಳವಾಗಿದೆ, ಅದೇ ನನಗೆ ಇಷ್ಟ. ಇದಕ್ಕಿಂತ ಉತ್ತಮ ಜೀವನವನ್ನು ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು.
ಪಾತ್ರೆ ತೊಳೆಯುವ ಕೆಲಸ
ತಮ್ಮ ಆರಂಭದ ದಿನಗಳ ಬಗ್ಗೆ ಮಾತನಾಡಿದ್ದ ಹುವಾಂಗ್, ತಾವು ಡಿಶ್ವಾಷರ್ ಮತ್ತು ಬಸ್ಬಾಯ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದರು. ಅಂದರೆ, ರೆಸ್ಟೋರೆಂಟ್ನಲ್ಲಿ ಪಾತ್ರೆ ತೊಳೆಯುವುದು, ಟೇಬಲ್ಗಳನ್ನು ಸ್ವಚ್ಛಗೊಳಿಸುವುದು ಮತ್ತು ಗ್ರಾಹಕರಿಗೆ ಬೇಕಾದ ಸಹಾಯ ಮಾಡುವುದು ಅವರ ಕೆಲಸವಾಗಿತ್ತು. ಒಂದೇ ಬಾರಿಗೆ ಹಲವು ಕಾಫಿ ಕಪ್ಗಳನ್ನು ಎತ್ತಿಕೊಂಡು ಹೋಗುವ ತಮ್ಮ ಸಾಮರ್ಥ್ಯದ ಬಗ್ಗೆಯೂ ಅವರು ತಮಾಷೆಯಾಗಿ ಮಾತನಾಡಿದ್ದರು. ನನ್ನಷ್ಟು ಕಾಫಿ ಕಪ್ಗಳನ್ನು ಒಟ್ಟಿಗೆ ಯಾರೂ ನಿಭಾಯಿಸಲು ಸಾಧ್ಯವಿಲ್ಲಎಂದಿದ್ದರು.
ಪತ್ನಿಗೆ ಮೋಸ
ನವೆಂಬರ್ 2026ರಲ್ಲಿ ಜೆನ್ಸನ್ ಹುವಾಂಗ್ ತಮ್ಮ ಪತ್ನಿಗೆ ಮೋಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂಬ ವರದಿಗಳು ಹೊರಬಂದಿವೆ. ನವೆಂಬರ್ 8ರಂದು ಎನ್ವಿಡಿಯಾ ಉದ್ಯೋಗಿಗಳಿಗೆ ಕಳುಹಿಸಿದ್ದ ಸಂದೇಶದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡು ಪತ್ನಿ ಲೋರಿ ಮತ್ತು ಮಕ್ಕಳ ಬಳಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಸಿಂಗಾಪುರದ ಉದ್ಯಮಿ ಆಲಿಸ್ ಹುವಾಂಗ್ ಜೊತೆಗಿನ ಸಂಬಂಧದ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಈ ವಿವಾದ ಮುನ್ನೆಲೆಗೆ ಬಂದಿದೆ. ಮತ್ತೊಂದೆಡೆ, ಆಲಿಸ್ ಹುವಾಂಗ್ ಅವರಿಗೆ ಚೀನಾದ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕವಿರಬಹುದು ಎಂಬ ಅನುಮಾನ ಅಮೆರಿಕದ ಗುಪ್ತಚರ ಸಂಸ್ಥೆಗಳಿಗಿದೆ. ಇದರ ಬೆನ್ನಲ್ಲೇ ಎನ್ವಿಡಿಯಾ ಆಡಳಿತ ಮಂಡಳಿ ತನಿಖೆ ಆರಂಭಿಸಿದೆ. ಕಂಪನಿಯ ಸಿಇಒ ವಿದೇಶಿ ಗುಪ್ತಚರ ಕಾರ್ಯಾಚರಣೆಯ ಗುರಿಯಾಗಿದ್ದರೇ ಎಂಬ ಬಗ್ಗೆಯೂ ಪರಿಶೀಲನೆ ನಡೆದಿದೆ.













