ವಿಶ್ವದ ಪ್ರಭಾವಿ ಸ್ತ್ರೀಯರ ಪಟ್ಟಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್

ಅಮೆರಿಕದ ಫೋರ್ಬ್ಸ್ ಮ್ಯಾಗಜಿನ್‌ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (36ನೇ ಸ್ಥಾನ) ಸೇರಿ 6 ಮಹಿಳೆಯರು ಸ್ಥಾನ ಪಡೆದಿದ್ದಾರೆ.

Minister Nirmala Sitharaman in the list of most influential women in the world akb

ನ್ಯೂಯಾರ್ಕ್: ಅಮೆರಿಕದ ಫೋರ್ಬ್ಸ್ ಮ್ಯಾಗಜಿನ್‌ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (36ನೇ ಸ್ಥಾನ) ಸೇರಿ 6 ಮಹಿಳೆಯರು ಸ್ಥಾನ ಪಡೆದಿದ್ದಾರೆ. ಉಳಿದ ಐವರೆಂದರೆ ಎಚ್‌ಸಿಎಲ್‌ನ ರೋಷನಿ ನಾಡಾರ್‌(Roshani Nadar) (53ನೇ ಸ್ಥಾನ), ಸೆಬಿ ಅಧ್ಯಕ್ಷೆ ಮಧಾಬಿ ಪುರಿ (Madhabi Puri) (54ನೇ ರಾರ‍ಯಂಕ್‌), ಸೇಲ್‌ ಅಧ್ಯಕ್ಷೆ ಸೋಮಾ ಮಂಡಲ್‌(Soma Mandal) (67ನೇ ರಾರ‍ಯಂಕ್‌), ಬಯೋಕಾನ್‌ನ ಕಿರಣ್‌ ಮಜುಂದಾರ್‌ ಶಾ (Kiran Majumdar Shah) (77ನೇ ಸ್ಥಾನ), ನಾಯಿಕಾ ಮುಖ್ಯಸ್ಥೆ (NAICA chief) ಫಲ್ಗುಣಿ ನಯ್ಯರ್‌ (Falguni Nayyar) (89ನೇ ಸ್ಥಾನ). ಇನ್ನು ಮೊದಲ 3 ಸ್ಥಾನದಲ್ಲಿ ಕ್ರಮವಾಗಿ ಯುರೋಪಿಯನ್‌ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವೋನ್‌ ಡೇರ್‌ (Ursula von Dare)(ಬೆಲ್ಜಿಯಂ), ಯುರೋಪಿಯನ್‌ ಕೇಂದ್ರೀಯ ಬ್ಯಾಂಕ್‌ ಅಧ್ಯಕ್ಷೆ ಕ್ರಿಸ್ಟಿಯಾನಾ ಲಗಾರ್ಡೆ (Christiana Lagarde), ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ (Kamala Harris) ಇದ್ದಾರೆ.

36ನೇ ಸ್ಥಾನದಲ್ಲಿರುವ ಸೀತಾರಾಮನ್  ಅವರು ಸತತ ನಾಲ್ಕನೇ ಬಾರಿ ಈ ಗೌರವಕ್ಕೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಸತತವಾಗಿ  ನಾಲ್ಕನೇ ಬಾರಿ ಸ್ಥಾನ ಪಡೆದಿದ್ದಾರೆ. 63 ವರ್ಷದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ 2021 ರಲ್ಲಿ ಪೋರ್ಬ್ಸ್ ಪಟ್ಟಿಯಲ್ಲಿ 37ನೇ ಸ್ಥಾನ ಗಳಿಸಿದ್ದರು. ಹಾಗೆಯೇ 2020ರಲ್ಲಿ 41ನೇ ಸ್ಥಾನ ಪಡೆದಿದ್ದ ಅವರು 2019ರಲ್ಲಿ 34ನೇ ಸ್ಥಾನ ಪಡೆದಿದ್ದಾರೆ. ಮಲ್ಹೋತ್ರಾ, ಮಜುಂದಾರ್ ಶಾ ಮತ್ತು ಫಲ್ಗುಣಿ ನಾಯರ್ ಕಳೆದ ವರ್ಷವೂ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಕ್ರಮವಾಗಿ 52, 72 ಮತ್ತು 88 ನೇ ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದರು. ಈ ಪಟ್ಟಿಯಲ್ಲಿ 39 ಸಿಇಒಗಳು 10 ರಾಷ್ಟ್ರಗಳ ಮುಖ್ಯಸ್ಥರು ಮತ್ತು ಒಟ್ಟು USD 115 ಶತಕೋಟಿ ಮೌಲ್ಯವನ್ನು ಹೊಂದಿರುವ ಬಿಲಿಯನೇರ್‌ಗಳು ಇದ್ದಾರೆ.

ಎರಡು ದಶಕಗಳಿಂದ ಉದ್ಯಮಿಯಾಗಿ ಹೂಡಿಕೆದಾರ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸುತ್ತಿರುವ ಫಲ್ಗುಣಿ ನಯ್ಯರ್ ಅವರು 2012ರಲ್ಲಿ 2 ಮಿಲಿಯನ್ ಹೂಡಿಕೆಯೊಂದಿಗೆ ಸೌಂದರ್ಯ ಉತ್ಪನ್ನ  Nykaa ವನ್ನು ಸ್ಥಾಪಿಸಿದರು. 2021ರಲ್ಲಿ ಅದನ್ನು ಸಾರ್ವಜನಿಕಗೊಳಿಸಿದ ಅವರು ಮುಂದೆ ಭಾರತದ ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆ ಎನಿಸಿಕೊಂಡರು.  ಹಾಗೆಯೇ 41 ವರ್ಷದ ರೋಷಿನಿ ನಡಾರ್ ಮಲ್ಹೋತ್ರಾ,  ಅವರು 12 ಬಿಲಿಯನ್ ಮೌಲ್ಯದ ತನ್ನ ತಂದೆ ಶಿವ ನದರ್ ನಿರ್ಮಿಸಿದ ಹೆಚ್‌ಸಿಎಲ್ ಸಂಸ್ಥೆಯ ಪ್ರಮುಖ ನಿರ್ಧಾರಗಳಿಗೆ ಜವಾಬ್ದಾರರಾಗಿದ್ದು, ಹೆಚ್‌ಸಿಎಲ್ ಭಾರತದ ಐಟಿ ವಲಯದಲ್ಲಿ ಉನ್ನತವಾಗಿ ಬೆಳೆಯಲು ರೋಷನಿ ನಡಾರ್ ನಿರ್ಧಾರಗಳು ಕಾರಣವಾಯ್ತು. 


Q2 GDP Data: ಜಾಗತಿಕ ಸವಾಲುಗಳ ನಡುವೆ ರಿಲೀಫ್‌ ನೀಡಿದ ಭಾರತದ ಆರ್ಥಿಕತೆ, ಶೇ.6.3ಗೆ ಏರಿಕೆ!

ಭಾರತದ ಮೊದಲ ಸಾವರಿನ್ ಗ್ರೀನ್ ಬಾಂಡ್ ಯೋಜನೆಗೆ ವಿತ್ತ ಸಚಿವೆ ಅಂಕಿತ; ಏನಿದರ ವಿಶೇಷತೆ?

Invest Karnataka 2022: ದೇಶದ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Latest Videos
Follow Us:
Download App:
  • android
  • ios