Low Investment Business Idea: ಕಡಿಮೆ ಬಂಡವಾಳದಲ್ಲಿ ಈ ಲಾಭದಾಯಕ ವ್ಯಾಪಾರ ಆರಂಭಿಸಿ ತಿಂಗಳಿಗೆ 40 ರಿಂದ 50 ಸಾವಿರ ರೂಪಾಯಿವರೆಗೆ ಸಂಪಾದಿಸಬಹುದು. ನಿಮ್ಮೂರಿನಲ್ಲಿಯೇ ಇದ್ದುಕೊಂಡು ಈ ವ್ಯವಹಾರ ಆರಂಭಿಸಬಹುದು.
Business Idea: ಊರಿನಲ್ಲಿದ್ದುಕೊಂಡೇ ಬ್ಯುಸಿನೆಸ್ ಶುರು ಮಾಡುವ ಕನಸು ಕಾಣುತ್ತಿರುವ ಯುವ ಸಮುದಾಯಕ್ಕೆ ಇಲ್ಲೊಂದು ಸೂಪರ್ ಐಡಿಯಾ. ಯಾವುದೇ ಬ್ಯುಸಿನೆಸ್ ಆರಂಭ ಮಾಡುವ ಮುನ್ನ ನಾವು ಉತ್ಪಾದಿಸುವ ಉತ್ಪನ್ನ ಮಾರುಕಟ್ಟೆಯಲ್ಲಿ ಹೇಗೆ ಮಾರಾಟವಾಗುತ್ತೆ ಎಂದು ತಿಳಿದುಕೊಳ್ಳಬೇಕು. ಇಂದು ನಾವು ಹೇಳುತ್ತಿರುವ ಬ್ಯುಸಿನೆಸ್, ವರ್ಷದ 12 ತಿಂಗಳು ವ್ಯಾಪಾರವನ್ನು ಹೊಂದಿರುತ್ತದೆ. ವಿಶೇಷ ದಿನಗಳಲ್ಲಿ ನಿಮ್ಮ ವ್ಯಾಪಾರ ಎರಡರಿಂದ ಮೂರುಪಟ್ಟು ಅಧಿಕವಾಗುತ್ತದೆ. ಈ ಬ್ಯುಸಿನೆಸ್‌ನಲ್ಲಿ ಮಾರುಕಟ್ಟೆ ಅಪಾಯವೂ ತುಂಬಾ ಕಡಿಮೆ. ಕಡಿಮೆ ಬಂಡವಾಳದಿಂದ ಆರಂಭಿಸಿ, ಹಂತ ಹಂತವಾಗಿ ವಿಸ್ತರಿಸಿಕೊಳ್ಳುತ್ತಾ ಅಧಿಕ ಹಣ ಸಂಪಾದನೆ ಮಾಡಬಹುದು. ಸದ್ಯ ಈ ಉತ್ಪನ್ನ ಮಾರುಕಟ್ಟೆಯಲ್ಲಿ 5 ರಿಂದ 6 ರೂಪಾಯಿಗೆ ಮಾರಾಟವಾಗುತ್ತಿದೆ.
ಇಂದು ಮೊಟ್ಟೆಯನ್ನು ಬಹುತೇಕ ಸಸ್ಯಹಾರಿಗಳು ಸಹ ಸೇವನೆ ಮಾಡಲು ಆರಂಭಿಸಿದ್ದಾರೆ. ಮೊಟ್ಟೆ ಆಹಾರ ಸದಾ ಬೇಡಿಕೆಯಲ್ಲಿರುತ್ತದೆ. ಆರೋಗ್ಯ ತಜ್ಞರು ಸಹ ಮೊಟ್ಟೆ ಸೇವನೆಗೆ ಸಲಹೆ ನೀಡುತ್ತಿರುತ್ತಾರೆ. ಮೊಟ್ಟೆ ಮಾರಾಟ ಮಾಡುವ ಮೂಲಕ ಎಷ್ಟೋ ಜನರು ಬದುಕು ಸಹ ಕಟ್ಟಿಕೊಂಡಿದ್ದಾರೆ. ನೇರವಾಗಿ ಕೋಳಿ ಫಾರಂ ಮೂಲಕ ಮೊಟ್ಟೆ ಖರೀದಿಸಿ ಮಾರಾಟ ಮಾಡಿದ್ರೆ ಲಾಭದ ಪ್ರಮಾಣ ಅಧಿಕವಾಗಿರುತ್ತದೆ.
ಮಾರಾಟ ಮತ್ತು ಜಾಹೀರಾತು
ಮೊಟ್ಟೆ ಮಾರಾಟ ಮಾಡೋದು ಸಹ ಒಂದು ಕಲೆ. ನೀವು ಮೊಟ್ಟೆ ಮಾರಾಟ ಮಾಡುವ ಮಳಿಗೆ ಆರಂಭಿಸಿದ ಕೂಡಲೇ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಣ್ಣದಾದ ಪ್ರಚಾರ ನಡೆಸಬೇಕು. ಉತ್ತಮ ಗುಣಮಟ್ಟದ ಮೊಟ್ಟೆಗಳು ಕಡಿಮೆ ಬೆಲೆಯಲ್ಲಿ ಸಿಗುತ್ತೆ ಎಂಬ ವಿಷಯವನ್ನು ಗ್ರಾಹಕರಿಗೆ ತಿಳಿಸುವ ಕೆಲಸವನ್ನು ಮಾಡಿ. ಜಾಹೀರಾತಿನಂತೆ ಹೋಲ್‌ಸೇಲ್ ದರದಲ್ಲಿ ಮೊಟ್ಟೆ ಮಾರಾಟ ಮಾಡಲು ಆರಂಭಿಸಬೇಕು. ಇದರಿಂದ ನಿಮಗೆ ವ್ಯವಹಾರದ ಪ್ರಮಾಣ ಅಧಿಕವಾಗುತ್ತದೆ.
ಇದರ ಜೊತೆಯಲ್ಲಿ ಅಧಿಕವಾಗಿ ಮೊಟ್ಟೆ ಬಳಸುವ ಹೋಟೆಲ್, ಡಾಬಾ, ರೆಸ್ಟೋರೆಂಟ್, ಬೇಕರಿ ಅಂತಹ ಸ್ಥಳಗಳಿಗೆ ಭೇಟಿ ನೀಡಿ ನೇರವಾಗಿ ಆರ್ಡರ್ ಪಡೆದುಕೊಳ್ಳಬೇಕು. ಸಮೀಪದ ಪ್ರದೇಶಗಳಿಗೆ ಉಚಿತ ಡೆಲಿವರಿಯನ್ನು ನೀಡುವ ಮೂಲಕ ವ್ಯಾಪಾರ ಹೆಚ್ಚಿಸಿಕೊಳ್ಳಬಹುದು. ಈ ರೀತಿಯ ಮಾರುಕಟ್ಟೆ ತಂತ್ರಗಳಿಂದ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ: ಉತ್ತಮ ಆದಾಯ ನೀಡುವ 5 ಆನ್‌ಲೈನ್ ಬ್ಯುಸಿನೆಸ್ ಐಡಿಯಾ; ಮನೆಯಲ್ಲೇ ಕುಳಿತು ಎಣಿಸಿ ಹಣ
ಕೋಳಿಫಾರಂಗಳಿಂದ ನೇರವಾಗಿ ಮೊಟ್ಟೆ ಖರೀದಿಸಿದ್ರೆ ನಿಮಗೆ 3 ರಿಂದ 4 ರೂಪಾಯಿಗೆ ಸಿಗುತ್ತದೆ. ಅದನ್ನು ನೀವು 6 ರೂಪಾಯಿಗೆ ಮಾರಾಟ ಮಾಡಿದ್ರೆ ಒಂದು ಮೊಟ್ಟೆಯಿಂದ ನಿಮಗೆ 2 ರೂಪಾಯಿ ಲಾಭವಾಗುತ್ತದೆ. ಒಂದು ದಿನಕ್ಕೆ 1,000 ಮೊಟ್ಟೆ ಮಾರಾಟ ಮಾಡಿದ್ರೆ 2,000 ರೂಪಾಯಿ ಲಾಭ ನಿಮ್ಮದಾಗುತ್ತದೆ. ತಿಂಗಳಿಗೆ 60,000 ರೂ.ಗಳವರೆಗೆ ಸಂಪಾದನೆ ಮಾಡಬಹದು. ಸಾರಿಗೆ, ಬಾಡಿಗೆ ಇತರೆ ವೆಚ್ಚಗಳನ್ನು ಕಡಿತಗೊಳಿಸಿದ್ರೆ ತಿಂಗಳಿಗೆ ನಿಮಗೆ 40 ರಿಂದ 50 ಸಾವಿರ ರೂಪಾಯಿ ಉಳಿಯುತ್ತದೆ. ಪ್ರತಿದಿನ ಉಚಿತವಾಗಿ ಮೊಟ್ಟೆ ತಿನ್ನುತ್ತಲೇ ಹಣ ಸಂಪಾದನೆ ಮಾಡಬಹುದು.
ಇದನ್ನೂ ಓದಿ: ಕೇವಲ 5 ಸಾವಿರ ಬಂಡವಾಳ ಹಾಕಿದ್ರೆ, ತಿಂಗಳಿಗೆ 30 ಸಾವಿರ ಸಂಪಾದನೆ; ಸರ್ಕಾರದಿಂದಲೂ ಸಿಗುತ್ತೆ ಹಣ
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
