ಬಿಸಿನೆಸ್ ಶುರು ಮಾಡ್ಬೇಕು ಅಂತ ಅನ್ಕೊಂಡ್ರೆ ಆನ್‌ಲೈನ್ ಬಿಸಿನೆಸ್ ಬಗ್ಗೆ ಗೊತ್ತಿರಲೇಬೇಕು. ಕಳೆದ ಒಂದು ದಶಕದಿಂದ ಆನ್‌ಲೈನ್ ಬಿಸಿನೆಸ್ ತುಂಬಾ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಜನರು ಮನೆಯಲ್ಲಿಯೇ ಕುಳಿತು ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದಾರೆ.
ಉಪ್ಪಿನಿಂದ ಹಿಡಿದು ಚಿನ್ನದವರೆಗೂ ಎಲ್ಲಾ ಸಾಮಾನುಗಳು ಇಂದು ಆನ್‌ಲೈನ್ ನಲ್ಲಿಯೇ ಸಿಗುತ್ತಿವೆ. ಬೆಲೆ ಹೆಚ್ಚಾದ್ರೂ ಸಮಯ ಉಳಿತಾಯ ಆಗುತ್ತೆ ಎಂಬ ಕಾರಣಕ್ಕಾಗಿ ಜನರು ಆನ್‌ಲೈನ್ ವಹಿವಾಟುಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ. ಕೊರೊನಾ ಬಳಿಕ ಆನ್‌ಲೈನ್ ಬ್ಯುಸಿನೆಸ್ ತುಂಬಾ ವೇಗವಾಗಿ ಬೆಳೆಯುತ್ತಿದೆ. ಈ ಸಮಯದಲ್ಲಿ ನೀವು ಬ್ಯುಸಿನೆಸ್ ಶುರು ಮಾಡಬೇಕು ಅಂತ ಅನ್ಕೊಂಡಿದ್ದರೆ ಆನ್‌ಲೈನ್ ವ್ಯಾಪಾರದ ಬಗ್ಗೆ ಗೊತ್ತಿರಲೇಬೇಕು. ಎಲ್ಲರ ಬಳಿಯೂ ಬ್ಯುಸಿನೆಸ್ ಐಡಿಯಾಗಳು ತುಂಬಾ ಇರುತ್ತವೆ. ಆದ್ರೆ ಯಾವುದು ಸರಿ ಅಂತ ಗೊತ್ತಾಗಲ್ಲ. ನೀವು ಸಹ ಆನ್‌ಲೈನ್ ಬಿಸಿನೆಸ್ ಶುರು ಮಾಡಬೇಕು ಅಂತಿದ್ರೆ ಈ ಐಡಿಯಾಗಳನ್ನ ನೋಡಿ. ಈ ಬ್ಯುಸಿನೆಸ್‌ಗಳು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುತ್ತವೆ.
1.ಮಧ್ಯವರ್ತಿಯಾಗಿ ಕೆಲಸ ಮಾಡಿ
ಎಲ್ಲಾ ಸಾಮಾನುಗಳು ಈಗ ಮನೆ ಬಾಗಿಲಿಗೆ ಬರುತ್ತೆ. ಅಂಗಡಿ ಇಲ್ದಿದ್ರೂ ಪರವಾಗಿಲ್ಲ, ಬೇರೆಯವರ ಜೊತೆ ಸೇರಿ ಆನ್‌ಲೈನ್‌ನಲ್ಲಿ ಸಾಮಾನುಗಳನ್ನ ಮಾರಾಟ ಮಾಡಬಹುದು. ಬ್ರ್ಯಾಂಡೆಡ್ ಉತ್ಪನ್ನಗಳ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಈ ವ್ಯವಹಾರ ಆರಂಭಿಸಬಹುದು. ಗ್ರಾಹಕರಿಂದ ನೇರವಾಗಿ ಆರ್ಡರ್ ತೆಗೆದುಕೊಂಡು ಅವರ ಮನೆಗಳಿಗೆ ಉತ್ಪನ್ನ ತಲುಪಿಸುವ ವ್ಯಾಪಾರ ಇದಾಗಿರುತ್ತದೆ. ಈ ವಹಿವಾಟು ನಡೆಸಲು ನಿಮಗೆ ಕಮಿಷನ್ ಸಿಗುತ್ತದೆ.
3.SEO ಕನ್ಸಲ್ಟಿಂಗ್
SEO (ಸರ್ಚ್ ಎಂಜಿನ್ ಆಪ್ಟಿಮೈಸೇಶನ್) ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದ್ರೆ, ವೆಬ್‌ಸೈಟ್ ಇರೋ ಕಂಪನಿಗಳಿಗೆ ಕನ್ಸಲ್ಟಿಂಗ್ ಮಾಡಬಹುದು. ಆನ್‌ಲೈನ್ ಬಿಸಿನೆಸ್ ಜಾಸ್ತಿಯಾಗಿರೋದ್ರಿಂದ, SEO ತುಂಬಾ ಮುಖ್ಯ. SEO, ಲಿಂಕ್ ಬಿಲ್ಡಿಂಗ್ ಬಗ್ಗೆ ತುಂಬಾ ಜನಕ್ಕೆ ಗೊತ್ತಿಲ್ಲ. ಒಳ್ಳೆಯ SEO ಕನ್ಸಲ್ಟೆಂಟ್ ವೆಬ್‌ಸೈಟ್ ಚೆನ್ನಾಗಿ ಕೆಲಸ ಮಾಡೋಕೆ ಹೆಲ್ಪ್ ಮಾಡುತ್ತಾರೆ. ಇಂದು SEO ಕನ್ಸಲಟ್ ಮಾಡುವ ಮೂಲಕ ಹಲವರು ಮನೆಗಳಲ್ಲಿಯೇ ಕುಳಿತು ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಿದ್ದಾರೆ.
3.ಸೆಕೆಂಡ್ ಹ್ಯಾಂಡ್ ಸಾಮಾನುಗಳನ್ನ ಆನ್‌ಲೈನ್‌ನಲ್ಲಿ ಮಾರಿ
ಹಳೆಯ ಸಾಮಾನುಗಳನ್ನ ಎಸೆಯೋ ಬದಲು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ತುಂಬಾ ಜನರು ಈಗ ಹಳೆಯ ಸಾಮಾನುಗಳನ್ನ ಕೊಂಡುಕೊಳ್ಳುತ್ತಾರೆ. ಮನೆ ಸಾಮಾನುಗಳಿಂದ ಹಿಡಿದು ಎಲ್ಲವನ್ನೂ ಮಾರಾಟ ಮಾಡಹುದು. ಕಡಿಮೆ ಬೆಲೆಗೆ ತಂದು ಸೋಶಿಯಲ್ ಮೀಡಿಯಾ ಅಕೌಂಟ್ ಅಥವಾ ವೆಬ್‌ಸೈಟ್ ಮಾಡಿಕೊಂಡು ವ್ಯಾಪಾರ ಆರಂಭಿಸಬಹುದು.
ಇದನ್ನೂ ಓದಿ: ಕೇವಲ 5000 ರೂ.ನಿಂದ ಬ್ಯುಸಿನೆಸ್ ಆರಂಭಿಸಿ, ಪ್ರತಿ ತಿಂಗಳು 40-50 ಸಾವಿರ ನಿಮ್ಮದಾಗಿಸಿಕೊಳ್ಳಿ
4.ಟ್ಯೂಷನ್ ಕ್ಲಾಸ್
ನೀವು ಟೀಚಿಂಗ್ ಪ್ರೊಫೆಷನ್ ನಲ್ಲಿದ್ರೆ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಬಹುದು. ಏಕಕಾಲದಲ್ಲಿ ಕನಿಷ್ಠ 10 ರಿಂದ 15 ವಿದ್ಯಾರ್ಥಿಗಳಿಗೆ ಒಳ್ಳೆಯ ರೀತಿಯಲ್ಲಿ ಪಾಠ ಮಾಡಬಹುದು. ಇದು ಸಹ ನಿರಂತರ ಆದಾಯಕ್ಕೆ ಒಳ್ಳೆಯ ಮಾರ್ಗವಿದೆ.
5.ಗ್ರಾಫಿಕ್ಸ್ ಡಿಸೈನರ್ , ವಿಡಿಯೋ ಎಡಿಟಿಂಗ್
ಗ್ರಾಫಿಕ್ಸ್ ಡಿಸೈನಿಂಗ್ ಕೆಲಸ ಗೊತ್ತಿದ್ರೆ ಮನೆಯಲ್ಲಿಯೇ ಕುಳಿತು ಈ ಕೆಲಸ ಮಾಡಬಹುದು. ಹಾಗೆಯೇ ವಿಡಿಯೋ ಎಡಿಟಿಂಗ್ ಮಾಡೋರಿಗೆ ಇಂದು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಈ ಕೆಲಸಗಳು ಉತ್ತಮ ಆದಾಯ ನೀಡುತ್ತವೆ.
ಇದನ್ನೂ ಓದಿ: 1 ಎಕರೆ ಖಾಲಿ ಜಾಗ ಇದೆಯಾ? ಈ ಬೆಳೆ ಬೆಳೆಯಿರಿ, ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆಗಿಂತ ಹೆಚ್ಚು ಲಾಭ!
