Trending Business Idea: ಕೇವಲ 5 ಸಾವಿರ ರೂ. ಹೂಡಿಕೆಯಿಂದ ತಿಂಗಳಿಗೆ 30 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಈ ವ್ಯಾಪಾರವನ್ನು ಕೇವಲ 5 ಸಾವಿರ ರೂ.ಗಳಿಂದ ಆರಂಭಿಸಬಹುದು. ಹಂತ ಹಂತವಾಗಿ ಈ ವ್ಯಾಪಾರವನ್ನು ವಿಸ್ತರಿಸಿಕೊಳ್ಳಬಹುದು.

Low Investment Business Idea: ಇಂದು ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಸೇವಿಸುವ ಆಹಾರ ಮಾತ್ರವಲ್ಲ, ಬಳಕೆ ಮಾಡುವ ವಸ್ತುಗಳ ಬಗ್ಗೆಯೂ ಜಾಗರೂಕರಾರುತ್ತಿದ್ದಾರೆ. ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಂದಾಗುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಜನರು ಆರೋಗ್ಯಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಕೋವಿಡ್ ಕಾಲಘಟ್ಟದ ಬಳಿಕ ಹೊಸ ಹೊಸ ಬ್ಯುಸಿನೆಸ್‌ಗಳು ಮುನ್ನಲೆಗೆ ಬಂದಿವೆ. ಪ್ಲಾಸ್ಟಿಕ್ ಸೇರಿದಂತೆ ಅತ್ಯಾಧುನಿಕ ಯಂತ್ರಗಳಿಂದ ಮರೆಯಾಗುತ್ತಿದ್ದ ಉದ್ದಿಮೆಗಳು ಚೇತರಿಕೆ ಕಾಣುತ್ತಿವೆ. ಇಂತಹ ಉದ್ದಿಮೆ ಅಥವಾ ವ್ಯಾಪಾರದ ಕಲ್ಪನೆಗೆ ಸರ್ಕಾರಗಳು ಹಣಕಾಸಿನ ನೆರವು ಒದಗಿಸುತ್ತವೆ. ಕೇವಲ 5 ಸಾವಿರ ರೂ. ಹೂಡಿಕೆಯಿಂದ ತಿಂಗಳಿಗೆ 30 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಯಾವುದು ಈ ಬ್ಯುಸಿನೆಸ್? ಹೇಗೆ ಆರಂಭಿಸಬಹುದು ಎಂಬುದನ್ನು ನೋಡೋಣ ಬನ್ನಿ.

ಮಣ್ಣಿನ ಟೀ ಕಪ್‌ ತಯಾರಿಕೆ ವ್ಯಾಪಾರವನ್ನು ಕೇವಲ 5 ಸಾವಿರ ರೂ.ಗಳಿಂದ ಸಂಪಾದಿಸಬಹುದು. ಮಣ್ಣಿನ ಕಪ್‌ಗಳಲ್ಲಿ ಟೀ ಸೇರಿದಂತೆ ಇತರೆ ಪಾನೀಯ ಕುಡಿಯೋದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ. ಗ್ರಾಹಕರನ್ನು ಸೆಳೆಯಲು ಹೋಟೆಲ್‌ಗಳಲ್ಲಿಯೂ ಮಣ್ಣಿನ ಪಾತ್ರೆಗಳಲ್ಲಿ ಸೇವೆ ನೀಡುತ್ತಿದ್ದಾರೆ. ರೈಲ್ವೆ ನಿಲ್ದಾಣದ ಟೀ ಶಾಪ್‌ಗಳಲ್ಲಿ ಮಣ್ಣಿನ ಟೀ ಕಪ್ ಬಳಕೆಗೆ ಒತ್ತು ನೀಡಲಾಗುತ್ತಿದೆ. 

ನಿಮಗೆ ಮಣ್ಣಿನ ಕಪ್‌ ತಯಾರಿಸುವ ಕಲೆ ಗೊತ್ತಿದ್ರೆ ನೀವೇ ಇವುಗಳನ್ನು ಉತ್ಪಾದನೆ ಮಾಡಬಹುದು. ನೇರವಾಗಿ ತಯಾರಕರಿಂದ ಮಣ್ಣಿನ ಟೀ ಕಪ್ ಖರೀದಿಸಿ ನಗರ ಪ್ರದೇಶದಲ್ಲಿ ಮಾರಾಟ ಮಾಡಬಹುದು. ಮಧ್ಯವರ್ತಿಯಾಗಿ ಕೆಲಸ ಮಾಡುವ ಮೂಲಕ ಈ ವ್ಯವಹಾರದಲ್ಲಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಇತ್ತೀಚೆಗೆ ಐಸ್‌ ಕ್ರೀಂ ಶಾಪ್‌ಗಳಲ್ಲಿ ಮಣ್ಣಿನ ಮಡಿಕೆಗಳನ್ನು ಅಧಿಕವಾಗಿ ಬಳಸುವ ಟ್ರೆಂಡ್ ಸೃಷ್ಟಿಯಾಗಿದೆ.

ಇದನ್ನೂ ಓದಿ: ಸರ್ಕಾರದಿಂದ 50 ಪರ್ಸೆಂಟ್ ಹಣ ಪಡೆದು ಈ ಬ್ಯುಸಿನೆಸ್ ಆರಂಭಿಸಿದ್ರೆ ತಿಂಗಳಿಗೆ 3 ಲಕ್ಷ ರೂ ಸಂಪಾದನೆ

ಮಾರುಕಟ್ಟೆಯಲ್ಲಿ ಒಂದು ಮಡಿಕೆ ಕಪ್ ಬೆಲೆ 10 ರಿಂದ 15 ರೂಪಾಯಿಗೆ ಮಾರಾಟವಾಗುತ್ತದೆ. ಉತ್ಪಾದಕರಿಂದಲೇ ನೇರವಾಗಿ ಖರೀದಿಸುವ ಗ್ರಾಹಕರಿಗೆ ಒಂದು ಮಡಿಕೆ 7 ರಿಂದ 9 ರೂಪಾಯಿವರೆಗೆ ಸಿಗುತ್ತದೆ. ಒಂದು ಮಡಿಕೆಯಿಂದ 5 ರಿಂದ 6 ರೂಪಾಯಿ ಲಾಭ ಸಿಗುತ್ತದೆ. ಭವಿಷ್ಯದಲ್ಲಿ ಹಂತ ಹಂತವಾಗಿ ಇತರೆ ಮಡಿಕೆ ಪಾತ್ರೆಗಳನ್ನು ಮಾರಾಟ ಮಾಡಬಹುದು. 

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ನಿಮಗಾಗಿ ಒಂದು ಒಳ್ಳೆಯ ವ್ಯಾಪಾರ ಐಡಿಯಾ; ₹20,000 ಹೂಡಿಕೆಯಿಂದ ₹50,000 ಗಳಿಕೆ