Asianet Suvarna News Asianet Suvarna News

ಪ್ರಧಾನಿ ಮೋದಿಗೆ ಭಾರತಕ್ಕೆ ಗೌರವ : ಬುರ್ಜ್ ಖಲೀಫಾದಲ್ಲಿ ವಿಶೇಷ ಪದಗಳ ಲೈಟಿಂಗ್ಸ್‌ ಅಲಂಕಾರ

ಅಬುಧಾಬಿ: ಅಬುಧಾಬಿಯಲ್ಲಿ ನಿರ್ಮಾಣವಾಗಿರುವ ಬೃಹತ್‌ ಹಿಂದೂ ದೇವಸ್ಥಾನ ದೇವಸ್ಥಾನವನ್ನು ಉದ್ಘಾಟನೆಗಾಗಿ ಅಬುಧಾಬಿಗೆ ಆಗಮಿಸಿರುವ ಪ್ರಧಾನಿ ಮೋದಿ ಹಾಗೂ ಭಾರತದ  ಗೌರವಾರ್ಥ, ದುಬೈನ ಬುರ್ಜ್ ಖಲೀಫಾವನ್ನು ಲೈಟಿಂಗ್ಸ್‌ಗಳಿಂದ ಅಲಂಕರಿಸಲಾಗಿದೆ. 

Dubai s Burj Khalifa lit up with the words Guest of Honor Republic of India ahead of PM Modis address to the World Govt Summit akb
Author
First Published Feb 14, 2024, 8:22 AM IST

ಅಬುಧಾಬಿ: ಅಬುಧಾಬಿಯಲ್ಲಿ ನಿರ್ಮಾಣವಾಗಿರುವ ಬೃಹತ್‌ ಹಿಂದೂ ದೇವಸ್ಥಾನ ದೇವಸ್ಥಾನವನ್ನು ಉದ್ಘಾಟನೆಗಾಗಿ ಅಬುಧಾಬಿಗೆ ಆಗಮಿಸಿರುವ ಪ್ರಧಾನಿ ಮೋದಿ ಹಾಗೂ ಭಾರತದ  ಗೌರವಾರ್ಥ, ದುಬೈನ ಬುರ್ಜ್ ಖಲೀಫಾವನ್ನು ಲೈಟಿಂಗ್ಸ್‌ಗಳಿಂದ ಅಲಂಕರಿಸಲಾಗಿದೆ. 'ಗೆಸ್ಟ್ ಆಫ್ ಹಾನರ್‌ ರಿಪಬ್ಲಿಕ್ ಆಫ್ ಇಂಡಿಯಾ' ಎಂಬ ಪದಗಳಿಂದ ಬುರ್ಜ್ ಖಲೀಫಾವನ್ನು ಲೈಟಿಂಗ್ಸ್‌ಗಳಿಂದ ಅಲಂಕಾರಗೊಳಿಸಲಾಗಿದೆ. ವಿಶ್ವ  ಸರ್ಕಾರದ ಶೃಂಗಸಭೆ (World Govt Summit) ಅನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಮೊದಲು ಈ ಗೌರವ ನೀಡಲಾಗಿದೆ.

ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದ ಅಬುಧಾಬಿಯಲ್ಲಿ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 2 ದಿನಗಳ ಕಾಲ ಯುಎಇ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ  ಯುಎಇ ತಲುಪಿದ ಬಳಿಕ ಮೋದಿ, ಜಾಯೇದ್‌ ಅವರೊಂದಿಗೆ ವ್ಯಾಪಕ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿರುವ ಕುರಿತು ಸಂತಸ ವ್ಯಕ್ತಪಡಿಸಿದರು.

Qatar: ಹೇಗೆ ಕೆಲಸ ಮಾಡಿತ್ತು ಗೊತ್ತಾ ಜೈ ಶಂಕರ್ ಟೀಮ್..? ಭಾರತ ಸಾಬೀತು ಮಾಡಿದ ‘ವಿಶ್ವಗುರು’ ಪವರ್..!

ಇದು  ವಿಶ್ವದ 3ನೇ ಅತಿದೊಡ್ಡ ದೇವಸ್ಥಾನ 

ಇಂದು ಪ್ರಧಾನ ನರೇಂದ್ರ ಮೋದಿ ಉದ್ಘಾಟಿಸುತ್ತಿರುವ ಈ ದೇಗುಲ ಯುಎಇಯ ಮೊದಲ ಹಿಂದೂ ದೇವಾಲಯ ಹಾಗೂ ವಿಶ್ವದ 3ನೇ ದೊಡ್ಡ ಹಿಂದೂ ದೇವಾಲಯವಾಗಿದೆ.

ಕತಾರ್‌ಗೂ ಪ್ರಧಾನಿ ಭೇಟಿ
ಈ ದೇಗುಲ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಅವರು ಇಂದು ನಾಳೆ ಕತಾರ್‌ಗೂ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಅಮೀರ್‌ ಶೇಖ್‌ ತಮೀಂ ಬಿನ್‌ ಹಮದ್‌ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಎರಡೂ ದೇಶಗಳ ಮುಖ್ಯಸ್ಥರ ಜತೆಗಿನ ಭೇಟಿಗೆ ಎದುರು ನೋಡುತ್ತಿರುವುದಾಗಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಯುಎಇಯ ಅಬುಧಾಬಿಯಲ್ಲಿ ನಿರ್ಮಾಣಗೊಂಡಿರುವ ‘ಬಾಪ್ಸ್‌’ ಸ್ವಾಮಿ ನಾರಾಯಣ ಮಂದಿರವು 27 ಎಕರೆ ಪ್ರದೇಶದಲ್ಲಿ ತಲೆಯೆತ್ತಿದೆ . ಇಲ್ಲಿ ಕೃಷ್ಣ- ರಾಧೆ, ಶಿವ- ಪಾರ್ವತಿ ಮತ್ತು ಸೀತೆ, ರಾಮ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದೂ ದೇವರುಗಳನ್ನು ಪೂಜಿಸಲಾಗುತ್ತದೆ. ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ ಮತ್ತು ಮತ್ತು 180 ಅಡಿ ಅಗಲವಿದೆ.

ಪ್ರಧಾನಿ ಮೋದಿ ಆತ್ಮೀಯವಾಗಿ ಸ್ವಾಗತಿಸಿದ UAE ಅಧ್ಯಕ್ಷ , ಗಾರ್ಡ್ ಆಫ್ ಹಾನರ್ ಗೌರವ!

ಯುಎಇ ಅಧ್ಯಕ್ಷರಿಂದ ಮೋದಿ ಗುಣಗಾನ

ಅಬುಧಾಬಿ: ನಿಮ್ಮ ಬೆಂಬಲವಿಲ್ಲದೇ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ)ನಲ್ಲಿ ಸ್ವಾಮಿನಾರಾಯಣ ಹಿಂದೂ ದೇವಸ್ಥಾನ ನಿರ್ಮಾಣ ಮಾಡುವುದು ಅಸಾಧ್ಯವಾಗುತ್ತಿತ್ತು. ಈ ದೇವಾಲಯವು ಭಾರತದೊಂದಿಗಿನ ನಿಮ್ಮ ಬಾಂಧವ್ಯಕ್ಕೆ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌ ಹೊಗಳಿಕೆ ಮಳೆ ಸುರಿಸಿದ್ದಾರೆ.

ಅಬುಧಾಬಿಯಲ್ಲಿ ನಿರ್ಮಾಣವಾಗಿರುವ ಬೃಹತ್‌ ಹಿಂದೂ ದೇವಸ್ಥಾನ ದೇವಸ್ಥಾನವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ, ಈ ಹಿನ್ನೆಲೆಯಲ್ಲಿ 2 ದಿನಗಳ ಕಾಲ ಯುಎಇ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಯುಎಇ ತಲುಪಿದ ಬಳಿಕ ಮೋದಿ, ಜಾಯೇದ್‌ ಅವರೊಂದಿಗೆ ವ್ಯಾಪಕ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿರುವ ಕುರಿತು ಸಂತಸ ವ್ಯಕ್ತಪಡಿಸಿದರು.

ಮುಸ್ಲಿಂ ರಾಷ್ಟ್ರ ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನದ ಅತ್ಯಾಕರ್ಷಕ ಒಳಾಂಗಣ ಚಿತ್ರಗಳು!

ಅದ್ಧೂರಿ ಸ್ವಾಗತ:

ಮೋದಿ ಯುಎಇಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಜಾಯೇದ್‌ ಅವರು ಮೋದಿಯನ್ನು ಬರಮಾಡಿಕೊಂಡರು. ಈ ವೇಳೆ ಜಾಯೇದ್‌ ಹಾಗೂ ಮೋದಿ ಪರಸ್ಪರ ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದರು. ಬಳಿಕ ಮೋದಿಗೆ ಯುಎಇ ಸೇನಾ ಗೌರವ ನೀಡಲಾಯಿತು. ಭಾರತೀಯ ಮೂಲದವರೂ ಭಾರಿ ಸಂಖ್ಯೆಯಲ್ಲಿ ನೆರೆದು ಮೋದಿಗೆ ಸ್ವಾಗತ ಕೋರಿದರು.

ನಂತರ ಜಾಯೇದ್‌ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ವೇಳೆ ಮಾತು ಆರಂಭಿಸಿದ ಮೋದಿ ನನ್ನ ಮತ್ತು ನನ್ನ ತಂಡದ ಈ ಭವ್ಯವಾದ ಸ್ವಾಗತಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನೀವು ಹೇಳಿದಂತೆ, ನಾನು ಇಲ್ಲಿಗೆ ಬಂದಾಗಲೆಲ್ಲಾ ನಾನು ನನ್ನ ಮನೆ ಮತ್ತು ಕುಟುಂಬಕ್ಕೆ ಬಂದಿದ್ದೇನೆ ಎಂದು ಭಾವಿಸುತ್ತೇನೆ. ಕಳೆದ ಏಳು ತಿಂಗಳಲ್ಲಿ ನಾವು ಐದು ಬಾರಿ ಭೇಟಿಯಾಗಿದ್ದೇವೆ. ಇಂದು ಭಾರತ ಮತ್ತು ಯುಎಇ ನಡುವೆ ಪ್ರತಿಯೊಂದು ವಲಯದಲ್ಲಿ ಪರಸ್ಪರ ಸಹಭಾಗಿತ್ವವಿದೆ ಎಂದರು. ಅಲ್ಲದೇ ಭಾರತವು ಯುಎಇ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ತಿಳಿಸಿದರು.

Follow Us:
Download App:
  • android
  • ios