Asianet Suvarna News Asianet Suvarna News

'ಯುಎಇ ನನ್ನ ಮತ್ತೊಂದು ಮನೆಯ ರೀತಿ..' ದೇವಸ್ಥಾನ ಉದ್ಘಾಟನೆಗೂ ಮುನ್ನ ಮೋದಿ ಮಾತು!

ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನದ ಉದ್ಘಾಟನೆಗೆ ಯುಎಇಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಅರಬ್‌ ರಾಷ್ಟ್ರಕ್ಕೆ ಕಾಲಿಟ್ಟವರೇ, ಇದು ನನ್ನ ಮತ್ತೊಂದು ಮನೆಯ ರೀತಿ ಅನಿಸುತ್ತಿದೆ ಎಂದು ಹೇಳಿದ್ದಾರೆ.

PM Modi ahead of temple inauguration on Feb 14 Feels like home when in UAE san
Author
First Published Feb 13, 2024, 8:06 PM IST | Last Updated Feb 13, 2024, 8:06 PM IST

ನವದೆಹಲಿ (ಫೆ.13): ಅಬುಧಾಬಿಯ ಮೊದಲ ಹಿಂದೂ ದೇವಾಲಯದ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಯುಎಇಗೆ ಆಗಮಿಸಿದರು. ಅರಬ್‌ ರಾಷ್ಟ್ರಕ್ಕೆ ಇಳಿದ ನಂತರ ಅವರು ಯುಎಇಯಲ್ಲಿರುವುದು ನನಗೆ ಮತ್ತೊಂದು ಮನೆಯಲ್ಲಿ ಇದ್ದಂತೆ ಅನಿಸಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 'ಅಹ್ಲಾನ್ ಮೋದಿ' ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ದ್ವಿಪಕ್ಷೀಯ ಸಭೆಯನ್ನು ನಡೆಸಿದರು. ಅಹ್ಲಾನ್‌ ಮೋದಿ ಕಾರ್ಯಕ್ರಮದಲ್ಲಿ 35,000 ರಿಂದ 40,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.ಬಹು ನಿರೀಕ್ಷಿತ ಈವೆಂಟ್ ಅನ್ನು ಪ್ರಧಾನಿ ಮೋದಿಯವರ ಅತಿದೊದ್ದ ಅನಿವಾಸಿ ಭಾರತೀಯರ ಜತೆಗಿನ ಸಂವಾದವೆಂದು ಕರೆಯಲಾಗುತ್ತಿದೆ. ಅಬುಧಾಬಿಯ ಜಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಯುಎಇಯ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವಾದ ಬಿಎಪಿಎಸ್ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. "ಬಾಪ್ಸ್ ದೇವಾಲಯವು ಭಾರತ ಮತ್ತು ಯುಎಇ ಎರಡೂ ಹಂಚಿಕೊಳ್ಳುವ ಸಾಮರಸ್ಯ, ಶಾಂತಿ ಮತ್ತು ಸಹಿಷ್ಣುತೆಯ ಮೌಲ್ಯಗಳಿಗೆ ನಿರಂತರ ಗೌರವವಾಗಿದೆ" ಎಂದು ಹೇಳಿದ್ದಾರೆ. 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನ ಮಂತ್ರಿ ಅವರ 7ನೇ ಯುಎಇ ಪ್ರವಾಸ ಇದಾಗಿದೆ. ಯುಎಇ ಮುಗಿದ ಬಳಿಕ ಕತಾರ್‌ ದೇಶಕ್ಕೆ 2ನೇ ಬಾರಿಗೆ ಭೇಟಿ ನೀಡಲಿದ್ದಾರೆ.

ಯುಎಇಗೆ ಹೊರಡುವ ಮುನ್ನ ನೀಡಿದ ಹೇಳಿಕೆಯಲ್ಲಿ, ಯುಎಇಯೊಂದಿಗೆ ಭಾರತದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಮುಂದುವರಿಸಲು ತಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದರು. "ಕಳೆದ ಒಂಬತ್ತು ವರ್ಷಗಳಲ್ಲಿ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಶಿಕ್ಷಣದಂತಹ ವೈವಿಧ್ಯಮಯ ವಲಯಗಳಲ್ಲಿ ಯುಎಇಯೊಂದಿಗಿನ ನಮ್ಮ ಸಹಕಾರವು ಬಹುಪಟ್ಟು ಬೆಳೆದಿದೆ. ನಮ್ಮ ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಪರ್ಕವು ಎಂದಿಗಿಂತಲೂ ಬಲವಾಗಿದೆ," ಅವರು ಹೇಳಿದರು.

ಮುಸ್ಲಿಂ ರಾಷ್ಟ್ರ ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನದ ಅತ್ಯಾಕರ್ಷಕ ಒಳಾಂಗಣ ಚಿತ್ರಗಳು!

ಯುಪಿಐ ರುಪೇ ಕಾರ್ಡ್‌ಗೆ ಚಾಲನೆ ನೀಡಿದ ಮೋದಿ: ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯಲ್ಲಿ ಯುಪಿಐ ರುಪೇ ಕಾರ್ಡ್ ಸೇವೆಗೆ ಚಾಲನೆ ನೀಡಿದರು. ಪ್ರಧಾನಿ ಮೋದಿ ದೇಶಕ್ಕೆ ಆಗಮಿಸಿದಾಗ ಅವರಿಗೆ ಯುಎಇ ಸೇನೆಯಿಂದ ಗೌರವ ರಕ್ಷೆ ನೀಡಲಾಯಿತು. ನಂತರ ಅವರಿಗೆ ಅಧ್ಯಕ್ಷರ ಅರಮನೆಯಾದ ಖಸ್ರ್ ಅಲ್ ವತನ್ ನಲ್ಲಿ ಔಪಚಾರಿಕ ಸ್ವಾಗತ ನೀಡಲಾಗಿದೆ.

Ahlan Modi: ಯುಎಇಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿರೋ ಪ್ರಧಾನಿ ಮೋದಿ; ನಮೋಗೆ ಭವ್ಯ ಸ್ವಾಗತ ಕೋರಲು ಪ್ಲ್ಯಾನ್!

Latest Videos
Follow Us:
Download App:
  • android
  • ios