Asianet Suvarna News Asianet Suvarna News

Indigo Airlines ಪ್ರಯಾಣಿಕರು -ಗಗನಸಖಿ ನಡುವೆ ವಾಗ್ವಾದ: ವಿಡಿಯೋ ವೈರಲ್‌

ಪ್ರಯಾಣಿಕರು ವಿಮಾನದಲ್ಲಿ ಕೆಟ್ಟ ನಡವಳಿಕೆ ತೋರಿದರು ಮತ್ತು ಗಗನಸಖಿಯೊಬ್ಬರನ್ನು ಅವಮಾನಿಸಿದರು. ಬಳಿಕ, ಸಿಬ್ಬಂದಿ ಮುಖ್ಯಸ್ಥರು ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ. 

indigo crew chides passenger for bad behaviour video viral ash
Author
First Published Dec 21, 2022, 4:34 PM IST

ಇಂಡಿಗೋ ಏರ್‌ಲೈನ್‌ನ (IndiGo Airlines) ಪ್ರಯಾಣಿಕರೊಬ್ಬರು (Passengers) ಮತ್ತು ಸಿಬ್ಬಂದಿಯೊಬ್ಬರ (Crew) ನಡುವಿನ ವಾಗ್ವಾದದ ವಿಡಿಯೋ (Video) ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ (Viral) ಆಗಿದೆ. ಇಂಡಿಗೋ ಏರ್‌ಲೈನ್ಸ್‌ನ ಇಸ್ತಾನ್‌ಬುಲ್ (Istanbul) - ದೆಹಲಿ (Delhi) ವಿಮಾನದಲ್ಲಿ ಆಹಾರದ (Food) ವಿಚಾರಕ್ಕೆ ಈ ಜಗಳ ನಡೆದಿದೆ ಎಂದು ಈ ವಿಡಿಯೋ ಕ್ಲಿಪ್‌ ಅನ್ನು ಚಿತ್ರೀಕರಿಸಿದ ಮತ್ತು ಅದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ಹೇಳಿದ್ದಾರೆ. ಈ ವಿಡಿಯೋಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆಯು, ಪ್ರಯಾಣಿಕರು ವಿಮಾನದಲ್ಲಿ ಕೆಟ್ಟ ನಡವಳಿಕೆ ತೋರಿದರು ಮತ್ತು ಗಗನಸಖಿಯೊಬ್ಬರನ್ನು ಅವಮಾನಿಸಿದರು. ಬಳಿಕ, ಸಿಬ್ಬಂದಿ ಮುಖ್ಯಸ್ಥರು ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕಾಯಿತು. ಹಾಗೂ, ಈ ಘಟನೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಗ್ರಾಹಕರ ಸೌಕರ್ಯವು ಯಾವಾಗಲೂ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಏರ್‌ಲೈನ್ಸ್‌ ಭರವಸೆ ನೀಡಿದೆ.

ಡಿಸೆಂಬರ್ 19 ರಂದು ಮಾಡಿದ ಟ್ವೀಟ್‌ನಲ್ಲಿ, ಬಳಕೆದಾರ ಗುರುಪ್ರೀತ್ ಸಿಂಗ್ ಹನ್ಸ್ "ದುರದೃಷ್ಟವಶಾತ್" ಇಂಡಿಗೋ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಪ್ರತಿ ಅಂತಾರಾಷ್ಟ್ರೀಯ ದೂರದ ವಿಮಾನಗಳ ಆಸನಗಳ ಮುಂದೆ ಆಹಾರ ಆಯ್ಕೆಗಳ ವಿಡಿಯೋವನ್ನು ಹೊಂದಿರುತ್ತದೆ. ಆದರೆ ಕೆಲವರು ಇದನ್ನು ನಿರ್ವಹಿಸಬಹುದು. ಇನ್ನು ಕೆಲವರು ನಿರ್ವಹಿಸಲು ಸಾಧ್ಯವಿಲ್ಲ, ಅವರಿಗೆ ಆಹಾರದ ಆಯ್ಕೆಯ ಅಗತ್ಯವಿದೆ" ಎಂದು ಗುರುಪ್ರೀತ್ ಸಿಂಗ್ ಹನ್ಸ್ ಟ್ವೀಟ್‌ನಲ್ಲಿ ಹೇಳಿದರು. 

ಅಲ್ಲದೆ,  "ಒಬ್ಬ ಪುರುಷ ಪ್ರಯಾಣಿಕನು ಮಹಿಳಾ ಸಿಬ್ಬಂದಿಯೊಂದಿಗೆ ಹೇಗೆ ವರ್ತಿಸುತ್ತಾನೆ ಮತ್ತು ಒಬ್ಬರು ಮಹಿಳಾ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದನ್ನು ನಾನು ನನ್ನ ಕಣ್ಣುಗಳ ಮುಂದೆ ನೋಡುತ್ತೇನೆ" ಎಂದೂ ಅವರು ಹೇಳಿದರು.

ವಿಡಿಯೋ ನೋಡಿ:

ಈ ವಿಡಿಯೋದಲ್ಲಿ ಗಗನಸಖಿ ಮತ್ತು ಪ್ರಯಾಣಿಕ (ಇದರಲ್ಲಿ ಅವರು ಕಾಣಿಸುತ್ತಿಲ್ಲ) ನಡುವೆ ತೀವ್ರ ವಾಗ್ವಾದವನ್ನು ತೋರಿಸುತ್ತದೆ. ಪ್ರಯಾಣಿಕರು ಸಿಬ್ಬಂದಿಯೊಂದಿಗೆ ಕಟುವಾಗಿ ಮಾತನಾಡಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದ್ದು ಈ ಹಿನ್ನೆಲೆ ಅವರಲ್ಲಿ ಒಬ್ಬರು ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.. "ನೀವು ನನ್ನತ್ತ ಬೆರಳು ತೋರಿಸುತ್ತಿದ್ದೀರಿ ಮತ್ತು ನನ್ನ ಮೇಲೆ ಕೂಗಾಡುತ್ತಿದ್ದೀರಿ. ನನ್ನ ಸಿಬ್ಬಂದಿ ನಿಮ್ಮಿಂದ ಅಳುತ್ತಿದ್ದಾರೆ. ದಯವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಕಾರ್ಟ್ ಇದೆ ಮತ್ತು ಎಣಿಕೆ ಮಾಡಿದ ಊಟವನ್ನು (ವಿಮಾನದಲ್ಲಿ) ಅಪ್‌ಲಿಫ್ಟ್‌ ಮಾಡಲಾಗಿದೆ . ನಾವು ನಿಮ್ಮ ಬೋರ್ಡಿಂಗ್‌.. ನಲ್ಲಿರುವುದನ್ನು ಮಾತ್ರ ಸರ್ವ್‌ ಮಾಡಬಹುದು ಎಂದು ಹೇಳಿದ್ದಾರೆ. ಆದರೆ, ಗಗನಸಖಿ ತನ್ನ ಮಾತನ್ನು ಮುಗಿಸುವ ಮೊದಲೇ, ಪ್ರಯಾಣಿಕ ನೀವು ಯಾಕೆ ಕೂಗುತ್ತಿದ್ದೀರಿ? ಎಂದು ಕೇಳಿದ್ದು, ಇದಕ್ಕೆ ತನ್ನ ಧ್ವನಿಯನ್ನು ಹೆಚ್ಚಿಸಿ ಉತ್ತರಿಸಿದ ಗಗನಸಖಿ "ಏಕೆಂದರೆ ನೀವು ನಮ್ಮ ಮೇಲೆ ಕೂಗಾಡುತ್ತಿದ್ದೀರಿ’’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ನಂತರ, ಆಕೆಯ ಸಹೋದ್ಯೋಗಿಯೊಬ್ಬರು ಮಧ್ಯಪ್ರವೇಶಿಸಿ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರೂ, ಪ್ರಯಾಣಿಕ ಮತ್ತು ಗಗನಸಖಿ ಪರಸ್ಪರ ತಮ್ಮ ವಾಗ್ವಾದವನ್ನು ಮುಂದುವರಿಸಿದ್ದಾರೆ. "ನನ್ನನ್ನು ಕ್ಷಮಿಸಿ ಆದರೆ ನೀವು ಸಿಬ್ಬಂದಿಯೊಂದಿಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ. ನಾನು ಶಾಂತಿಯುತವಾಗಿ ಗೌರವಯುತವಾಗಿ ನಿಮ್ಮ ಮಾತನ್ನು ಕೇಳುತ್ತಿದ್ದೇನೆ. ಆದರೆ ನೀವು ಸಹ ಸಿಬ್ಬಂದಿಯನ್ನು ಗೌರವಿಸಬೇಕು" ಎಂದು ಅವರು ಪ್ರಯಾಣಿಕರಿಗೆ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದಕ್ಕೆ ಪ್ರತ್ಯುತ್ತರ ನೀಡಿದ ಪ್ರಯಾಣಿಕ, "ನಾನು ಸಿಬ್ಬಂದಿಯನ್ನು ಎಲ್ಲಿ ಅಗೌರವಿಸಿದೆ?" ಎಂದಿದ್ದಕ್ಕೆ, ಬೆರಳು ತೋರಿಸಿದ್ದನ್ನು ಗಗನಸಖಿ ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಪ್ರಯಾಣಿಕ ಶಟ್‌ ಅಪ್‌ ಎಂದು ಹೇಳಿದ್ದಾರೆ. ಬಳಿಕ ಗಗನಸಖಿ ಸಹ ‘’ಯೂ ಶಟ್‌ ಅಪ್‌ ( ನೀವು ಬಾಯಿ ಮುಚ್ಚಿ) ಎಂದು ಉತ್ತರಿಸಿದ್ದಾರೆ. ಹಾಗೂ, ತಾನು ಕಂಪನಿಯ ಉದ್ಯೋಗಿ ಮತ್ತು ನೀವು ನನ್ನೊಂದಿಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.  

ಇದಕ್ಕೆ ಉತ್ತರಿಸಿದ ಪ್ರಯಾಣಿಕ, ನೀವು ಸೇವಕಿ ಎಂದು ಹೇಳಿದ್ದು, ಇದಕ್ಕೆ ಸ್ಪಷ್ಟನೆ ನಿಡಿದ ಗಗನಸಖಿ, ನಾನು ಉದ್ಯೋಗಿ, ನಿನ್ನ ಸೇವಕಿ ಅಲ್ಲ ಎಂದೂ ಪ್ರತ್ಯುತ್ತರ ನೀಡಿದ್ದಾರೆ. ಬಳಿಕ, ಅವರಿಬ್ಬರ ನಡುವಿನ ಜಗಳವು ಥಟ್ಟನೆ ನಿಂತಿದ್ದು, ಮತ್ತು ಗಗನಸಖಿಯ ಸಹೋದ್ಯೋಗಿ ಆಕೆಯನ್ನು ವಿಮಾನದ ಹಿಂಭಾಗಕ್ಕೆ ಕರೆದೊಯ್ದಿದ್ದಾರೆ. 

ಪ್ರಯಾಣಿಕರು ಸ್ಯಾಂಡ್‌ವಿಚ್ ಕೇಳಿದರು ಮತ್ತು ವಿಮಾನದಲ್ಲಿ ಆಹಾರ ಪದಾರ್ಥ ಲಭ್ಯವಿದೆಯೇ ಎಂದು ಪರಿಶೀಲಿಸುವುದಾಗಿ ಸಿಬ್ಬಂದಿ ಹೇಳಿದರು. ಆದರೆ ಆ ವ್ಯಕ್ತಿ ಗಗನಸಖಿಯ ಮೇಲೆ ಕೂಗಾಡಲು ಆರಂಭಿಸಿದ ಕಾರಣ ಆಕೆ ಅಳಲು ಪ್ರಾರಂಭಿಸಿದ್ದಾರೆ ಎಂದು ಈ ಘಟನೆ ಬಗ್ಗೆ ಏರ್‌ಲೈನ್ಸ್‌ ತಿಳಿಸಿದೆ.

Follow Us:
Download App:
  • android
  • ios