Asianet Suvarna News Asianet Suvarna News

ಬ್ಯಾಂಕ್ ಲಾಕರ್ ಒಪ್ಪಂದದಿಂದ ಆಧಾರ್ ಉಚಿತ ಅಪ್ಡೇಟ್ ತನಕ 8 ಕೆಲಸಗಳಿಗೆ ಡಿಸೆಂಬರ್ ಅಂತಿಮ ಗಡುವು

ಡಿಸೆಂಬರ್ ವರ್ಷದ ಕೊನೆಯ ತಿಂಗಳಾದ ಕಾರಣ ಅನೇಕ ಹಣಕಾಸು ಕೆಲಸಗಳಿಗೆ ಅಂತಿಮ ಗಡುವಾಗಿದೆ. ಬ್ಯಾಂಕ್ ಲಾಕರ್ ಒಪ್ಪಂದ, ಆಧಾರ್ ಉಚಿತ ಅಪ್ಡೇಟ್, ಯುಪಿಐ ಐಡಿ ಸೇರಿದಂತೆ 8 ಹಣಕಾಸು ಕೆಲಸಗಳಿಗೆ ಡಿಸೆಂಬರ್ ನಲ್ಲಿ ಅಂತಿಮ ಗಡುವಿದೆ. 

Donot miss these 8 money deadlines in December 2023 From bank locker agreement to free Aadhaar update anu
Author
First Published Nov 29, 2023, 4:42 PM IST

Business Desk: ಡಿಸೆಂಬರ್ ತಿಂಗಳ ಪ್ರಾರಂಭಕ್ಕೆ ಒಂದು ದಿನವಷ್ಟೇ ಬಾಕಿ ಉಳಿದಿದೆ. ವರ್ಷದ ಕೊನೆಯ ತಿಂಗಳಾಗಿರುವ ಡಿಸೆಂಬರ್ ಅನೇಕ ಹಣಕಾಸು ಕೆಲಸಗಳಿಗೆ ಅಂತಿಮ ಗಡುವು ಕೂಡ ಆಗಿದೆ. ಬ್ಯಾಂಕ್ ಲಾಕರ್ ಒಪ್ಪಂದ,  ಆಧಾರ್ ಉಚಿತ ಅಪ್ಡೇಟ್, ಎಸ್ ಬಿಐ ಅಮೃತ್ ಕಲಶ್ ಯೋಜನೆ ಸೇರಿದಂತೆ ಅನೇಕ ಪ್ರಮುಖ ಹಣಕಾಸು ಕೆಲಸಗಳಿಗೆ ಡಿಸೆಂಬರ್ ನಲ್ಲಿ ಅಂತಿಮ ಗಡುವಿವೆ. ಹಾಗೆಯೇ ಈ ತನಕ ಬಳಕೆಯಲ್ಲಿರದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಕೂಡ ಡಿಸೆಂಬರ್ ನಲ್ಲಿ ನಡೆಯಲಿದೆ. ಕೆಲವು ಹಣಕಾಸು ಬದಲಾವಣೆಗಳು ನಮ್ಮ ಜೇಬಿನ ಮೇಲೆ ನಢರ ಪರಿಣಾಮ ಬೀರುವ ಕಾರಣ ಅವುಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಇನ್ನು ಅಂತಿಮ ಗಡುವಿನೊಳಗೆ ಮುಖ್ಯ ಹಣಕಾಸು ಕೆಲಸಗಳನ್ನು ಮಾಡಿ ಮುಗಿಸೋದ್ರಿಂದ ದಂಡದಿಂದ ಕೂಡ ತಪ್ಪಿಸಿಕೊಳ್ಳಬಹುದು. ಅಲ್ಲದೆ, ಕೆಲವು ಕೆಲಸಗಳನ್ನು ಪೂರ್ಣಗೊಳಿಸದಿದ್ರೆ ಅದರಿಂದ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಹಾಗಾದ್ರೆ ಡಿಸೆಂಬರ್ ತಿಂಗಳಲ್ಲಿ ಅಂತಿಮ ಗಡುವು ಹೊಂದಿರುವ 8 ಪ್ರಮುಖ ಹಣಕಾಸಿನ ಕೆಲಸಗಳು ಯಾವುವು? ಇಲ್ಲಿದೆ ಮಾಹಿತಿ.

1.ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಅಂತಿಮ ಗಡುವು: 
ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 2023ರ ಡಿಸೆಂಬರ್ 31ರ ಗಡುವು ನೀಡಿದೆ. ಒಂದು ವೇಳೆ ನೀವು ಡಿ.31 ಅಥವಾ ಅದರೊಳಗೆ ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದ ಸಲ್ಲಿಕೆ ಮಾಡಿದ್ದರೆ ಅಪ್ಡೇಟ್ ಆಗಿರುವ ಒಪ್ಪಂದಕ್ಕೆ ಸಹಿ ಮಾಡಿ ಸಲ್ಲಿಕೆ ಮಾಡಬೇಕು.

Bank Holidays: ಡಿಸೆಂಬರ್ ತಿಂಗಳಲ್ಲಿ 18 ದಿನ ಬ್ಯಾಂಕ್ ರಜೆ; 6 ದಿನ ದೇಶವ್ಯಾಪಿ ಮುಷ್ಕರ

2.ಉಚಿತ ಆಧಾರ್ ಅಪ್ಡೇಟ್ ಗೆ ಕೊನೆಯ ದಿನಾಂಕ: 
ಕಳೆದ 10 ವರ್ಷಗಳಲ್ಲಿ ಆಧಾರ ಮಾಹಿತಿಗಳನ್ನು ಅಪ್ಡೇಟ್ ಮಾಡದವರು ಡಿಸೆಂಬರ್ 14ರ ತನಕ ಉಚಿತವಾಗಿ ಮಾಡಬಹುದು ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. ಆಧಾರ್ ಸಂಬಂಧಿ ವಂಚನೆಗಳನ್ನು ತಡೆಯಲು ಮಾಹಿತಿಗಳನ್ನು ಅಪ್ಡೇಟ್ ಮಾಡೋದು ಅಗತ್ಯ. 

3.ಎಸ್ ಬಿಐ ಅಮೃತ್ ಕಲಶ್ ಯೋಜನೆ ಅಂತಿಮ ಗಡುವು: ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಅಮೃತ್ ಕಲರ್ಶ ವಿಶೇಷ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ನೀಡಿದ್ದ ಗಡುವನ್ನು ವಿಸ್ತರಣೆ ಮಾಡಲಾಗಿತ್ತು. ಅದರ ಅನ್ವಯ ಹೂಡಿಕೆದಾರರಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು 2023ರ ಡಿಸೆಂಬರ್ 31ರ ತನಕ ಸಮಯಾವಕಾಶ ನೀಡಲಾಗಿದೆ. ಈ ಎಫ್ ಡಿಯಲ್ಲಿನ ಹೂಡಿಕೆಗೆ ಶೇ.7.10ರಷ್ಟು ಬಡ್ಡಿದರ ನೀಡಲಾಗುತ್ತಿದೆ. 

4.ಮ್ಯೂಚುವಲ್ ಫಂಡ್, ಡಿಮ್ಯಾಟ್ ನಾಮನಿರ್ದೇಶನಕ್ಕೆ ಗಡುವು: ಡಿಮ್ಯಾಟ್ ಖಾತೆದಾರರು ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಸೇರ್ಪಡೆಗೆ ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಸೆಬಿ ಸುತ್ತೋಲೆ ಪ್ರಕಾರ ನಾಮಿನಿ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಅವಕಾಶ ನೀಡಲಾಗಿದೆ. ಆ ಬಳಿಕ ನಾಮಿನಿ ಸೇರ್ಪಡೆಯಾಗದ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

5.ಯುಪಿಐ ಐಡಿಗಳು ನಿಷ್ಕ್ರಿಯ: ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕಾರ್ಯನಿರ್ವಹಿಸದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವಂತೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮುಂತಾದ ಪಾವತಿ ಆಪ್ ಗಳಿಗೆ ಹಾಗೂ ಬ್ಯಾಂಕ್ ಗಳಿಗೆ  ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ) ನಿರ್ದೇಶನ ನೀಡಿದೆ. ಈ ನಿಯಮ ಅನುಷ್ಠಾನಕ್ಕೆ ಥರ್ಡ್ ಪಾರ್ಟಿ ಆಪ್ ಪ್ರಾವೈಡರ್ಸ್ (ಟಿಪಿಎಪಿ) ಹಾಗೂ ಪಾವತಿ ಸೇವೆ ಪೂರೈಕೆದಾರರಿಗೆ (PSP) ಎನ್ ಪಿಸಿಐ ಡಿಸೆಂಬರ್ 31ರ ಗಡುವು ನೀಡಿದೆ. 

ಪಿಂಚಣಿದಾರರೆ ನ.30ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಿ, ತಡೆಯಿಲ್ಲದೆ ಪಿಂಚಣಿ ಪಡೆಯಿರಿ

6.ಎಸ್ ಬಿಐ ಗೃಹಸಾಲ ಆಫರ್: ಗೃಹಸಾಲಗಳಿಗೆ ಎಸ್ ಬಿಐ ಪ್ರಸ್ತುತ ವಿಶೇಷ ಆಂದೋಲನ ನಡೆಸುತ್ತಿದೆ. 65 ಬೇಸಿಸ್ ಪಾಯಿಂಟ್ ಗಳ ಕಡಿತ ಕೂಡ ನೀಡುತ್ತಿದೆ. ಈ ವಿಶೇಷ ಕಡಿತ ಅನೇಕ ವಿಧದ ಗೃಹಸಾಲಗಳಿಗೆ ಅನ್ವಯಿಸಲಿದ್ದು, ಡಿಸೆಂಬರ್ 31ರ ತನಕ ಜಾರಿಯಲ್ಲಿರಲಿದೆ. 

7.ಐಡಿಬಿಐ ವಿಶೇಷ ಎಫ್ ಡಿ: ಎರಡು ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳಿಗೆ ಐಡಿಬಿಐ ಬ್ಯಾಂಕ್ ಬಡ್ಡಿದರ ಪರಿಷ್ಕರಿಸಿದೆ. ಇದರೊಂದಿಗೆ ಅಮೃತ್ ಮಹೋತ್ಸವ ಎಫ್ ಡಿ ಸೇರಿದಂತೆ ವಿಶೇಷ ಎಫ್ ಡಿಗಳ ವ್ಯಾಲಿಡಿಟಿ ಅವಧಿಯನ್ನು ಡಿಸೆಂಬರ್ 31ರ ತನಕ ವಿಸ್ತರಿಸಲಾಗಿದೆ. 

8.ಇಂಡಿಯನ್ ಬ್ಯಾಂಕ್ ವಿಶೇಷ ಎಫ್ ಡಿ: ಇಂಡಿಯನ್ ಬ್ಯಾಂಕ್ 'ಇಂಡ್ ಸೂಪರ್ 400' ಹಾಗೂ ಇಂಡ್ ಸುಪ್ರೀಂ 300 ದಿನಗಳ' ಎಂಬ ವಿಶೇಷ ಸ್ಥಿರ ಠೇವಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಡಿಸೆಂಬರ್ 31ರ ತನಕ ಅವಕಾಶ ನೀಡಿದೆ. 
 

Follow Us:
Download App:
  • android
  • ios