Bank Holidays: ಡಿಸೆಂಬರ್ ತಿಂಗಳಲ್ಲಿ 18 ದಿನ ಬ್ಯಾಂಕ್ ರಜೆ; 6 ದಿನ ದೇಶವ್ಯಾಪಿ ಮುಷ್ಕರ
ಡಿಸೆಂಬರ್ ತಿಂಗಳಲ್ಲಿ ವಿವಿಧ ಹಬ್ಬಗಳು ಹಾಗೂ ವಿಶೇಷ ಆಚರಣೆಗಳ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಒಟ್ಟು 18 ದಿನಗಳ ರಜೆಯಿದೆ. ಹಾಗೆಯೇ ಡಿಸೆಂಬರ್ ಆರಂಭದಲ್ಲಿ 6 ದಿನಗಳ ಬ್ಯಾಂಕ್ ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಕರೆ ನೀಡಿದೆ.
Business Desk:ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕ್ ಗಳ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ನವೆಂಬರ್ ತಿಂಗಳು ಮುಕ್ತಾಯವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಡಿಸೆಂಬರ್ ತಿಂಗಳ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಈ ವರ್ಷದ ಕೊನೆಯ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 18 ದಿನಗಳ ಕಾಲ ರಜೆಯಿದೆ. ಡಿಸೆಂಬರ್ ತಿಂಗಳೆಂದ್ರೆ ಕ್ರಿಸ್ಮಸ್ ಸಡಗರ. ಇನ್ನು ಡಿಸೆಂಬರ್ ತಿಂಗಳ ಪ್ರಾರಂಭದಲ್ಲಿ ಬ್ಯಾಂಕ್ ನೌಕರರ ಮುಷ್ಕರ ನಡೆಯುವ ಕಾರಣ ವಿವಿಧ ಬ್ಯಾಂಕುಗಳು ವಿವಿಧ ದಿನ ಬಂದ್ ಆಗಿರಲಿವೆ. ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) 6 ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಇದರ ಜೊತೆಗೆ ವಿವಿಧ ಹಬ್ಬ ಹಾಗೂ ಆಚರಣೆಗಳ ಹಿನ್ನೆಲೆಯಲ್ಲಿ ಕೂಡ ಬ್ಯಾಂಕ್ ಗಳಿಗೆ ರಜೆಯಿದೆ. ಹೀಗಾಗಿ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ಗಳು ಹೆಚ್ಚಿನ ದಿನ ಕಾರ್ಯನಿರ್ವಹಿಸೋದಿಲ್ಲ.
ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡಿ ಮಾಡುವ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ.
ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್‌ಗಳಿಗೆ ಆರ್‌ಬಿಐ ನಿಯಮ ಇನ್ನಷ್ಟು ಬಿಗಿ!
ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು (Accounts Closing Holidays). ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regional banks) ಅನ್ವಯಿಸಲಿವೆ.
ಬ್ಯಾಂಕ್ ಬಂದ್ ಯಾವಾಗ?
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (AIBEA) ಡಿಸೆಂಬರ್ ತಿಂಗಳಲ್ಲಿ 6 ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ದಿನ ನಡೆಯಲಿದೆ.
ಡಿಸೆಂಬರ್ 4: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ)
ಡಿಸೆಂಬರ್ 5: ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ
ಡಿಸೆಂಬರ್ 6: ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಡಿಸೆಂಬರ್ 7: ಇಂಡಿಯನ್ ಬ್ಯಾಂಕ್, ಯುಸಿಒ ಬ್ಯಾಂಕ್
ಡಿಸೆಂಬರ್ 8: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ
ಡಿಸೆಂಬರ್ 11: ಎಲ್ಲ ಖಾಸಗಿ ಬ್ಯಾಂಕ್ ಗಳು
ಗೃಹಸಾಲ ವಿಮೆ ಕಡ್ಡಾಯವೇ? ಗೃಹಸಾಲ ಪಡೆಯೋ ಪ್ರತಿಯೊಬ್ಬರೂ ಈ ಮಾಹಿತಿ ಹೊಂದಿರೋದು ಅಗತ್ಯ
ಆರ್ ಬಿಐ ರಜಾಪಟ್ಟಿ ಹೀಗಿದೆ:
ಡಿಸೆಂಬರ್ 1: ಅರುಣಾಚಲ ಪ್ರದೇಶ ಹಾಗೂ ನಾಗಲ್ಯಾಂಡ್ ನಲ್ಲಿ ರಾಜ್ಯ ರಚನೆ ದಿನದ ಹಿನ್ನೆಲೆಯಲ್ಲಿ ರಜೆ.
ಡಿಸೆಂಬರ್ 3: ಭಾನುವಾರ
ಡಿಸೆಂಬರ್ 4: ಸೇಂಟ್ ಫ್ರಾನ್ಸಿಸ್ ಕ್ಸೆವಿಯರ್ ಹಬ್ಬ (ಗೋವಾದಲ್ಲಿ ರಜೆ)
ಡಿಸೆಂಬರ್ 9: ಎರಡನೇ ಶನಿವಾರ
ಡಿಸೆಂಬರ್ 10: ಭಾನುವಾರ
ಡಿಸೆಂಬರ್ 12: ಪ-ತೋಗನ್ ನೆಂಗ್ಮಿಂಜ ಸಂಗಮ (ಮೇಘಾಲಯದಲ್ಲಿ ರಜೆ)
ಡಿಸೆಂಬರ್ 13: ಲುಸುಂಗ್/ನಮ್ ಸುಂಗ್ (ಸಿಕ್ಕಿಂನಲ್ಲಿ ರಜೆ)
ಡಿಸೆಂಬರ್ 14: ಲುಸುಂಗ್/ನಮ್ ಸುಂಗ್ (ಸಿಕ್ಕಿಂನಲ್ಲಿ ರಜೆ)
ಡಿಸೆಂಬರ್ 17: ಭಾನುವಾರ
ಡಿಸೆಂಬರ್ 18: ಯು ಸೋಸೋ ಥಾಮ್ ಪುಣ್ಯಸ್ಮರಣೆ (ಮೇಘಾಲಯದಲ್ಲಿ ರಜೆ)
ಡಿಸೆಂಬರ್ 19: ಲಿಬರೇಷನ್ ಡೇ (ಗೋವಾದಲ್ಲಿ ರಜೆ)
ಡಿಸೆಂಬರ್ 23: ನಾಲ್ಕನೇ ಶನಿವಾರ
ಡಿಸೆಂಬರ್ 24: ಭಾನುವಾರ
ಡಿಸೆಂಬರ್ 25: ಕ್ರಿಸ್ಮಸ್ (ದೇಶಾದ್ಯಂತ ಬ್ಯಾಂಕುಗಳಿಗೆ ರಜೆ)
ಡಿಸೆಂಬರ್ 26: ಕ್ರಿಸ್ಮಸ್ ಆಚರಣೆ (ಮಿಜೋರಾಂ, ನಾಗಲ್ಯಾಂಡ್ ಹಾಗೂ ಮೇಘಾಲಯದಲ್ಲಿ ರಜೆ)
ಡಿಸೆಂಬರ್ 27: ಕ್ರಿಸ್ಮಸ್ ಹಿನ್ನೆಲೆಯಲ್ಲಿ ನಾಗಲ್ಯಾಂಡ್ ನಲ್ಲಿ ರಜೆ
ಡಿಸೆಂಬರ್ 30: ಯು ಕಿಯಾಂಗ್ ನಂಗ್ಬಾ (ಮೇಘಾಲಯದಲ್ಲಿ ರಜೆ)
ಡಿಸೆಂಬರ್ 31: ಭಾನುವಾರ