Asianet Suvarna News Asianet Suvarna News

ಪಿಂಚಣಿದಾರರೆ ನ.30ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಿ, ತಡೆಯಿಲ್ಲದೆ ಪಿಂಚಣಿ ಪಡೆಯಿರಿ

ಪಿಂಚಣಿದಾರರು ಪ್ರತಿವರ್ಷ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಿದ್ರೆ ಮಾತ್ರ ಪಿಂಚಣಿ ಸಿಗುತ್ತದೆ. ಈ ತಿಂಗಳ 30 ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 

Avoid Pension Delays What Happens If Life Certificate Is Not Submitted In November anu
Author
First Published Nov 27, 2023, 5:13 PM IST

ನವದೆಹಲಿ (ನ.27): ಪಿಂಚಣಿದಾರರು ಪ್ರತಿವರ್ಷ ನವೆಂಬರ್ ನಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡೋದು ಅಗತ್ಯ. ಇದನ್ನು ಮಾಡಿದರೆ ಮಾತ್ರ ಅವರಿಗೆ ಪಿಂಚಣಿ ಪ್ರಯೋಜನಗಳು ಸಿಗುತ್ತವೆ. ಯಾವುದೇ ತಡೆಯಿಲ್ಲದೆ ಪಿಂಚಣಿ ಪಾವತಿಗೆ ವಾರ್ಷಿಕ ದಾಖಲೆ, ಜೀವನ ಪ್ರಮಾಣಪತ್ರ ಅಗತ್ಯ. ಹೀಗಾಗಿ ಎಲ್ಲ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಪಿಂಚಣಿದಾರರು ಯಾವುದೇ ಸಮಸ್ಯೆಯಿಲ್ಲದೆ ಪಿಂಚಣಿ ಪಡೆಯಲು ಈ ಪ್ರಮಾಣಪತ್ರವನ್ನು ಸಂಬಂಧಿತ ಸಂಸ್ಥೆಗೆ ಈ ತಿಂಗಳ ಅಂತ್ಯದೊಳಗೆ ಸಲ್ಲಿಕೆ ಮಾಡಬೇಕು. ಸೂಪರ್ ಸೀನಿಯರ್ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಅಕ್ಟೋಬರ್ 1ರಿಂದ ನವೆಂಬರ್ 30ರೊಳಗೆ ಸಲ್ಲಿಕೆ ಮಾಡಬೇಕು. ಇನ್ನು 60 ವರ್ಷ ಹಾಗೂ 80 ವರ್ಷ ನಡುವಿನ ಹಿರಿಯ ನಾಗರಿಕರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಲು ನವೆಂಬರ್ 1ರಿಂದ ನವೆಂಬರ್ 30ರ ತನಕ ಕಾಲಾವಕಾಶ ನೀಡಲಾಗಿದೆ.

ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡದಿದ್ರೆ ಏನಾಗುತ್ತೆ?
ಜೀವನ ಪ್ರಮಾಣಪತ್ರವನ್ನು ನವೆಂಬರ್ 30ರೊಳಗೆ ಸಲ್ಲಿಕೆ ಮಾಡಲು ವಿಫಲರಾದರೆ ನಿಮ್ಮ ಪಿಂಚಣಿ ರದ್ದಾಗುತ್ತದೆ. ಇದು ನೀವು ಬದುಕಿದ್ದೀರಿ ಹಾಗೂ ಪಿಂಚಣಿ ಪಡೆಯಲು ಅರ್ಹತೆ ಹೊಂದಿದ್ದೀರಿ ಎಂಬುದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡದಿದ್ರೆ ನಿಮ್ಮ ಪಿಂಚಣಿಯನ್ನು ಪಿಂಚಣಿ ವಿತರಣಾ ಸಂಸ್ಥೆಗೆ  (ಪಿಡಿಎ) ವಿತರಿಸಲು ಸಾಧ್ಯವಾಗೋದಿಲ್ಲ.ಜೀವನ ಪ್ರಮಾಣಪತ್ರವನ್ನು ಪಿಂಚಣಿ ಪಡೆಯುವ ಸಂಸ್ಥೆಗಳಲ್ಲೇ ಉದಾಹರಣೆಗೆ ಆಯಾ ಬ್ಯಾಂಕಿನ ಶಾಖೆಗಳಲ್ಲಿ ಸಲ್ಲಿಕೆ ಮಾಡಲು ಅವಕಾಶವಿದೆ.  

ಬ್ಯಾಂಕ್ ಎಫ್ ಡಿಯಿಂದ ಅಧಿಕ ರಿಟರ್ನ್ಸ್ ಗಳಿಸ್ಬೇಕಾ? ಹಾಗಾದ್ರೆ ಲ್ಯಾಡರಿಂಗ್ ವಿಧಾನ ಅನುಸರಿಸಿ

ಜೀವನ ಪ್ರಮಾಣಪತ್ರ ಸಲ್ಲಿಕೆ ಹೇಗೆ?
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪಿಂಚಣಿ (Pension) ಪಡೆಯುವವರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅನೇಕ ಆಯ್ಕೆಗಳಿವೆ. ಈ ಪ್ರಮಾಣಪತ್ರವನ್ನು ಆನ್ ಲೈನ್ ಅಥವಾ ಆಪ್ ಲೈನ್ ಮೂಲಕ ಸಲ್ಲಿಕೆ ಮಾಡಬಹುದು. ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಗೆ (Post office) ಭೇಟಿ ನೀಡಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು. ಅಲ್ಲಿ ನೀವು ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಬೇಕು. ಹಾಗೆಯೇ ನೀವು ಪ್ಯಾನ್ ಕಾರ್ಡ್ (PAN card) ಹಾಗೂ ಆಧಾರ್ ಕಾರ್ಡ್ (Aadhaar card) ಪ್ರತಿಗಳನ್ನು ಗುರುತು ದೃಢೀಕರಣದ ದಾಖಲೆಯಾಗಿ ಸಲ್ಲಿಕೆ ಮಾಡಬೇಕು. ಇನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೂಡ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು. 

ಪೋಸ್ಟ್ ಮ್ಯಾನ್ ಮೂಲಕ
ಪಿಂಚಣಿದಾರರು ಭಾರತೀಯ ಅಂಚೆ ಪಾವತಿ ಬ್ಯಾಂಕ್ ವೆಬ್ ಸೈಟ್ ನಲ್ಲಿ ಪೋಸ್ಟ್ ಮ್ಯಾನ್ ಅವರನ್ನು ಮನೆಗೆ ಕಳುಹಿಸುವಂತೆ ಮನವಿ ಮಾಡಬಹುದು. ಪೋಸ್ಟ್ ಮ್ಯಾನ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು. 

ಪೋರ್ಟಲ್ ಅಥವಾ ಆಪ್ ಮೂಲಕ
ಪಿಂಚಣಿದಾರರು ಜೀವನ ಪ್ರಮಾಣ ಪೋರ್ಟಲ್ ಅಥವಾ ಅಪ್ಲಿಕೇಷನ್ ಬಳಸಿಕೊಂಡು ಕೂಡ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು. ಈ ವಿಧಾನದಲ್ಲಿ ಯುಐಡಿಎಐ ಆಧಾರಿತ ಸಾಧನದ ಮೂಲಕ ಬೆರಳಚ್ಚು ಸಲ್ಲಿಕೆ ಮಾಡೋದು ಅಗತ್ಯ. 

ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ
ಇನ್ನು ದೇಶಾದ್ಯಂತ ಅನೇಕ ಸಾರ್ವಜನಿಕ ವಲಯದ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ (Customers) ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆಗಳನ್ನು (Banking services) ಒದಗಿಸುತ್ತಿವೆ. ಸ್ಟೇಟ್ ಕೆಲವು ಬ್ಯಾಂಕ್ ಗಳು  ವಿಡಿಯೋ (Video) ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ನೀಡಿವೆ.  ಬ್ಯಾಂಕ್ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು (Pensioners) ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬಹುದು. ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮುಖಾಂತರ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. 

ಮ್ಯೂಚುವಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡೋ ಬಹುತೇಕರಿಗೆ ತಿಳಿದಿಲ್ಲ ಈ 5 SIPs;ಇವುಗಳ ವಿಶೇಷತೆಯೇನು?

ಏನಿದು ಜೀವನ ಪ್ರಮಾಣಪತ್ರ?
ಜೀವನ ಪ್ರಮಾಣಪತ್ರ ಇದು ಡಿಜಿಟಲ್ ಜೀವನ ಪ್ರಮಾಣಪತ್ರವಾಗಿದ್ದು, ಭಾರತ ಸರ್ಕಾರ 2014ರಲ್ಲಿ ಪ್ರಾರಂಭಿಸಿತ್ತು. ಈ ಯೋಜನೆ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಹಿಂದೆಲ್ಲ ಭೌತಿಕವಾಗಿ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬೇಕಿತ್ತು. ಆದರೆ, ಈಗ ಮೊಬೈಲ್ ಆಪ್ ಮೂಲಕ ಅಥವಾ ನಿಗದಿತ ಜೀವನ ಪ್ರಮಾಣಪತ್ರ ಕೇಂದ್ರದಲ್ಲಿ ಇದನ್ನು ಸಲ್ಲಿಕೆ ಮಾಡಬಹುದು. ಈ ಯೋಜನೆ ಆಧಾರ ಆಧಾರಿತ ಬಯೋಮೆಟ್ರಿಕ್ ಮೂಲಕ ಪಿಂಚಣಿದಾರರ ಗುರುತು ದೃಢೀಕರಣ ನಡೆಸುತ್ತದೆ. 


 

Follow Us:
Download App:
  • android
  • ios