Personal Finance: ಭವಿಷ್ಯ ಚೆನ್ನಾಗಿರ್ಬೇಕಾ? ಉಳಿತಾಯದಲ್ಲಿ ಈ ತಪ್ಪು ಮಾಡ್ಬೇಡಿ

ಉಜ್ವಲ ಭವಿಷ್ಯಕ್ಕೆ ಉಳಿತಾಯ ಬಹಳ ಮುಖ್ಯ. ತುರ್ತು ಸಂದರ್ಭದಲ್ಲಿ ಉಳಿತಾಯ ನಮ್ಮ ಕೈ ಹಿಡಿಯುತ್ತದೆ. ಗಳಿಕೆಯಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡುವುದ್ರಿಂದ ಸಾಕಷ್ಟು ಅನುಕೂಲವಿದೆ. ಆದ್ರೆ ಜನರು ಉಳಿತಾಯ ಮಾಡುವಾಗ ಕೆಲ ತಪ್ಪುಗಳನ್ನು ಮಾಡ್ತಾರೆ. 
 

mistakes commonly done while savings personal finance tips

ಪ್ರತಿಯೊಬ್ಬರ ಜೀವನದಲ್ಲೂ ಹಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಣ ಗಳಿಕೆಗಾಗಿಯೇ ಜನರು ಹಗಲಿರುಳು ದುಡಿಯುತ್ತಾರೆ. ಗಳಿಸಿದ ಹಣವನ್ನು ಸರಿಯಾಗಿ ಬಳಕೆ ಮಾಡದ ಕಾರಣ ತುರ್ತು ಸಂದರ್ಭದಲ್ಲಿ ಸಮಸ್ಯೆ ಎದುರಿಸುತ್ತಾರೆ. ಹಣ ಗಳಿಸುವುದು ಮಾತ್ರ ಮುಖ್ಯವಲ್ಲ, ಗಳಿಸಿದ ಹಣವನ್ನು ಹೇಗೆ ಬಳಕೆ ಮಾಡ್ಬೇಕು ಹಾಗೆ ಉಳಿತಾಯ ಮಾಡಿದ ಹಣವನ್ನು ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬುದರ ಜ್ಞಾನ ಕೂಡ ಇರಬೇಕಾಗುತ್ತದೆ. ನಾವಿಂದು ಜನರು ಉಳಿತಾಯದ ಸಂದರ್ಭದಲ್ಲಿ ಏನೆಲ್ಲ ತಪ್ಪುಗಳನ್ನು ಮಾಡ್ತಾರೆ ಎಂಬುದನ್ನು ನಿಮಗೆ ಹೇಳ್ತೇವೆ.

ಸಾಲ (Loan) ತೀರಿಸಲು ಉಳಿತಾಯ (Saving) ದ ಹಣ ಬಳಕೆ : ದುಡಿದ ಹಣದಲ್ಲಿ ಒಂದು ಭಾಗವನ್ನು ಉಳಿತಾಯ ಮಾಡಿರ್ತೇವೆ. ಆದ್ರೆ ಸಾಲ ತೀರಿಸಲು ಇದೇ ಹಣವನ್ನು ಬಳಕೆ ಮಾಡ್ತೇವೆ. ಯಾವಾಗ್ಲೂ ಹಣವನ್ನು ಠೇವಣಿ ಇಡುವುದು ಕಷ್ಟ. ಅದೇ ಹಣ ವಿತ್ ಡ್ರಾ ಮಾಡುವುದು ಸುಲಭ. ಹಾಗಾಗಿ ಜನರು ಬ್ಯಾಂಕ್ (Bank) ನಲ್ಲಿ ಅಥವಾ ಬೇರೆ ಕಡೆ ಉಳಿತಾಯ ಮಾಡಿದ ಹಣವನ್ನು ಸಾಲ ತೀರಿಸಲು ಬಳಸ್ತಾರೆ. ಇದು ಸಂಪೂರ್ಣ ತಪ್ಪು. ಯಾವಾಗ್ಲೂ ಸಾಲವನ್ನು ಉಳಿತಾಯದ ಹಣದಲ್ಲಿ ತೀರಿಸಬಾರದು. ಸಾಲವನ್ನು ನಿಮ್ಮ ಬ್ಯಾಂಕ್ ಖಾತೆ ಜೊತೆ ಲಿಂಕ್ ಮಾಡ್ಬೇಕು. ಆಗ ಪ್ರತಿ ತಿಂಗಳು ಸಾಲದ ಹಣ ನಿಮಗೆ ತಿಳಿಯದೆ ಕಟ್ ಆಗಿರುತ್ತದೆ. ಇದ್ರಿಂದ ನಿಮಗೆ ಸಮಸ್ಯೆ ಎನ್ನಿಸುವುದಿಲ್ಲ. 

ತುರ್ತು ನಿಧಿ (Emergency Fund) ಇರಲಿ : ಬಹುತೇಕ ಜನರು ತಿಂಗಳು ತಿಂಗಳು ಬರುವ ಸಂಬಳದಲ್ಲಿ ಮನೆ ನಿರ್ವಹಣೆ ಮಾಡ್ತಾರೆ. ತಿಂಗಳ ಕೊನೆಯಲ್ಲಿ ಕೈ ಖಾಲಿಯಾಗಿರುತ್ತದೆ. ಯಾವುದೇ ಉಳಿತಾಯ ಖಾತೆ ಅವರ ಬಳಿ ಇರೋದಿಲ್ಲ. ಒಂದು ತಿಂಗಳು ಖರ್ಚು ಹೆಚ್ಚಾದ್ರೂ ಅವರಿಗೆ ಹೊಣೆಯಾಗುತ್ತದೆ. ವೈದ್ಯಕೀಯ ಚಿಕಿತ್ಸೆ ವೇಳೆ ಸಮಸ್ಯೆ ದೊಡ್ಡದಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತುರ್ತು ನಿಧಿ ಹೊಂದಿರಬೇಕು. ತಿಂಗಳ ಸಂಬಳದಲ್ಲಿ ಒಂದು ಭಾಗವನ್ನು ತುರ್ತು ನಿಧಿಯಲ್ಲಿಡಬೇಕು.

ಬಜೆಟ್ (Budget) ಬಹಳ ಮುಖ್ಯ : ನಿಮ್ಮ ಭವಿಷ್ಯ ಹೇಗಿರುತ್ತದೆ ಎಂಬುದು ನೀವು ಹಣವನ್ನು ಹೇಗೆ ಖರ್ಚು ಮಾಡ್ತೀರಿ ಎಂಬುದನ್ನು ಅವಲಂಬಿಸಿದೆ. ಹಾಗಾಗಿ ನೀವು ಖರ್ಚಿನ ಮೇಲೆ ಹಿಡಿತವಿಟ್ಟುಕೊಳ್ಳಬೇಕು. ವಾರ್ಷಿಕ ಅಥವಾ ಮಾಸಿಕ ಬಜೆಟ್ ತಯಾರಿಸಿ, ಅದರಂತೆ ನೀವು ಹಣ ಖರ್ಚು ಮಾಡಿದ್ರೆ ನಿಮಗೆ ಖರ್ಚಿನ ಮಾಹಿತಿ ಸಿಗುತ್ತದೆ. ಇಲ್ಲದಿದ್ದರೆ ನಿಮ್ಮ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲ.

ಸಂಬಳ (Salary) ಬಂದ ತಕ್ಷಣ ಈ ಕೆಲಸ ಮಾಡಿ : ಬಹುತೇಕರು ಸಂಬಳ ಬರ್ತಿದ್ದಂತೆ ಮೊದಲು ಅದನ್ನು ಖರ್ಚು ಮಾಡ್ತಾರೆ. ಸಾಲ ತೀರಿಸಲು, ಮನೆ ವಸ್ತುಗಳನ್ನು ಖರೀದಿಸಲು ಸಂಬಳವನ್ನು ಬಳಸ್ತಾರೆ. ಆದ್ರೆ ಇದು ನಾವು ಮಾಡುವ ದೊಡ್ಡ ತಪ್ಪು. ಸಂಬಳ ಬರ್ತಿದ್ದಂತೆ ಮೊದಲು ಸ್ವಲ್ಪ ಹಣವನ್ನು ಉಳಿತಾಯ ಖಾತೆಗೆ ಹಾಕಬೇಕು. ನಂತ್ರ ಉಳಿದ ಹಣದಲ್ಲಿ ಖರ್ಚನ್ನು ಸಂಭಾಳಿಸಬೇಕು.

ಅಗ್ಗದಲ್ಲಿ ಮನೆ ಕಟ್ಟಬೇಕೆಂದ್ರೆ ಈ ಐಡಿಯಾ ಬಳಸಿ

ಮಾರ್ಕೆಟ್ (Market) ಗೆ ಹೋಗುವಾಗ ಇರಲಿ ಗಮನ : ಮಾರ್ಕೆಟ್ ಗೆ ಹೋದ್ರೆ ಕೆಲವರ ಮನಸ್ಸು ಚಂಚಲಗೊಳ್ಳುತ್ತದೆ. ಮನೆಗೆ ಹಾಗೂ ತಮಗೆ ಅವಶ್ಯಕತೆ ಇಲ್ಲವೆಂದ್ರೂ ವಸ್ತುಗಳ ಖರೀದಿ ಮಾಡ್ತಾರೆ. ಒಂದು ವಸ್ತು ಖರೀದಿಗೆ ಹೋದ್ರೆ ನಾಲ್ಕೈದು ವಸ್ತು ಮನೆಗೆ ಬಂದಿರುತ್ತವೆ. ಈ ತಪ್ಪನ್ನು ಯಾವಾಗ್ಲೂ ಮಾಡಬಾರದು. ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಜೊತೆಗೆ ಅವಶ್ಯಕತೆಯಿರುವ ವಸ್ತುಗಳನ್ನು ಮಾತ್ರ ಖರೀದಿ ಮಾಡ್ಬೇಕು. ಸದ್ಯ ಅಗತ್ಯವಿಲ್ಲ ಎಂಬುದನ್ನು ಮುಂದೂಡಲು ಕಲಿಯಬೇಕು. 

ಈ ಆ್ಯಪ್ ಇದ್ರೆ ಸಾಕು, ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಲ್ಲೇ ಕುಳಿತು ಹಣ ಹಾಕ್ಬಹುದು

ಕ್ರೆಡಿಟ್ ಕಾರ್ಡ್ (Credit Card) ಮೇಲೆ ನಿಯಂತ್ರಣ : ಸಂಬಳ ಬರೋದು ಕಡಿಮೆ, ಖರ್ಚು ಹೆಚ್ಚು ಎನ್ನುವವರಿದ್ದಾರೆ. ಕ್ರೆಡಿಟ್ ಕಾರ್ಡ್ ಇದೆ ಎನ್ನುವ ಕಾರಣಕ್ಕೆ ಕೆಲವರು ಮನಸೋ ಇಚ್ಛೆ ಖರ್ಚು ಮಾಡಿರ್ತಾರೆ. ಅವರ ಸಂಬಳಕ್ಕಿಂತ ಹೆಚ್ಚಿನ ಹಣ ಖರ್ಚಾಗಿರುತ್ತದೆ. ಇದ್ರಿಂದ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಸುವ ಮೊದಲು ಖಾತೆಯಲ್ಲಿ ಹಣವೆಷ್ಟಿದೆ ಎಂಬುದನ್ನು ತಿಳಿಯುವುದು ಒಳ್ಳೆಯದು.
 

Latest Videos
Follow Us:
Download App:
  • android
  • ios