Asianet Suvarna News Asianet Suvarna News

ಈ ಆ್ಯಪ್ ಇದ್ರೆ ಸಾಕು, ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಲ್ಲೇ ಕುಳಿತು ಹಣ ಹಾಕ್ಬಹುದು

ಅಂಚೆ ಕಚೇರಿಯಲ್ಲಿ ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆಗಳನ್ನು ಹೊಂದಿರೋರು ಪ್ರತಿ ತಿಂಗಳು ಹಣ ಜಮೆ ಮಾಡಲು ಅಂಚೆ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಆದರೆ, ಐಪಿಪಿಬಿ ಖಾತೆ ಹೊಂದಿದ್ರೆ ಮನೆಯಲ್ಲೇ ಕುಳಿತು ಹಣ ವರ್ಗಾವಣೆ ಮಾಡಬಹುದು. ಹಾಗೆಯೇ ಡಾಕ್ ಪೇ ಆ್ಯಪ್ ಮೂಲಕವೂ ಹಣ ವರ್ಗಾವಣೆ ಮಾಡಬಹುದು. 
 

How to transfer funds online to PPF Sukanya Samridhi Yojana accounts
Author
First Published Sep 20, 2022, 4:25 PM IST

Business Desk:ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿನ ಉಳಿತಾಯ ಖಾತೆ ಹೊಂದಿರೋರು ಸುಕನ್ಯಾ ಸಮೃದ್ಧಿ ಖಾತೆ (ಎಸ್ ಎಸ್ ಎ), ರಿಕರಿಂಗ್ ಡೆಫಾಸಿಟ್ (ಆರ್ ಡಿ), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಸೇರಿದಂತೆ ವಿವಿಧ ಯೋಜನೆಗಳಿಗೆ ಮನೆಯಲ್ಲೇ ಕುಳಿತು ಹಣ ವರ್ಗಾವಣೆ ಮಾಡಬಹುದು. ಇದರಿಂದ ಪ್ರತಿ ತಿಂಗಳು ಅಂಚೆ ಕಚೇರಿಗೆ ತೆರಳುವ ಕೆಲಸ ತಪ್ಪುತ್ತದೆ. ಈ ಎಲ್ಲ ಯೋಜನೆಗಳ ಪ್ರೀಮಿಯಂ ಪಾವತಿ ಹಾಗೂ ಇತರ ಕೆಲಸಗಳನ್ನು ಐಪಿಪಿಬಿ ಮೊಬೈಲ್ ಅಪ್ಲಿಕೇಷನ್ ಮೂಲಕ ಮಾಡಬಹುದು. ಐಪಿಪಿಬಿ ಮೂಲಕ ಬ್ಯಾಲೆನ್ಸ್ ಚೆಕ್, ಹಣ ವರ್ಗಾವಣೆ ಸೇರಿದಂತೆ ಇತರ ಹಣಕಾಸಿನ ವಹಿವಾಟುಗಳನ್ನು ನಡೆಸಬಹುದು. ಈ ಹಿಂದೆ ಈ ಎಲ್ಲ ಕೆಲಸಗಳಿಗೆ ಅಂಚೆ ಕಚೇರಿಗೆ ಭೇಟಿ ನೀಡಬೇಕಾದ ಅಗತ್ಯವಿತ್ತು. ಅಂದ ಹಾಗೇ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ, ಆರ್ ಡಿ ಖಾತೆ ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಾರಂಭಿಸಲು ಕಚೇರಿಗೆ ಖುದ್ದಾಗಿ ಭೇಟಿ ನೀಡೋದು ಅಗತ್ಯ. ಅದಾದ ಬಳಿಕ ಐಪಿಪಿಬಿ ಖಾತೆ ಅಥವಾ ಮೊಬೈಲ್ ಅಪ್ಲಿಕೇಷನ್ ಬಳಸಿ ಆನ್ ಲೈನ್ ನಲ್ಲೇ ನಿರ್ವಹಣೆ ಮಾಡಬಹುದು. 

ಕೇಂದ್ರ ಸರ್ಕಾರ ಕಳೆದ ವರ್ಷ 'ಡಾಕ್ ಪೇ'  (DakPay) ಡಿಜಿಟಲ್ ಪಾವತಿಗಳ ಅಪ್ಲಿಕೇಷನ್ ಬಿಡುಗಡೆ ಮಾಡಿತ್ತು. ಇದನ್ನು ಅಂಚೆ ಕಚೇರಿ ಹಾಗೂ ಐಪಿಪಿಬಿ ಗ್ರಾಹಕರು ಬಳಸಬಹುದು. ಡಾಕ್ ಪೇ ಭಾರತೀಯ ಅಂಚೆ ಹಾಗೂ ಐಪಿಪಿಬಿ ಒದಗಿಸುವ ಬ್ಯಾಂಕಿಂಗ್ ಸೇವೆಗಳು ಹಾಗೂ ಡಿಜಿಟಲ್ ಹಣಕಾಸಿನ ವಹಿವಾಟುಗಳಿಗೆ ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ಹಣ ಕಳುಹಿಸೋದು, ಕ್ಯುಆರ್ ಕೋಡ್ ಸ್ಕ್ಯಾನ್ ಮಾಡೋದು ಹಾಗೂ ಸೇವೆಗಳು ಹಾಗೂ ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸುತ್ತದೆ. ಹೂಡಿಕೆದಾರರು ಕೂಡ ಪಾವತಿಗಳನ್ನು ಮಾಡಲು ಈ ಅಪ್ಲಿಕೇಷನ್ ಬಳಸಬಹುದು. 

ಕಂಪನಿ ಹೆಸರು ಬದಲಾಯಿಸಿದ್ದೇ ಜುಕರ್ ಬರ್ಗ್ ಗೆ ಮುಳುವಾಯ್ತಾ? ಸಂಪತ್ತಿನಲ್ಲಿ 71 ಬಿಲಿಯನ್ ಡಾಲರ್ ಇಳಿಕೆ

ಐಪಿಪಿಬಿ ಮೂಲಕ ಪಿಪಿಎಫ್ ಗೆ ಹಣ ವರ್ಗಾವಣೆ
*ನಿಮ್ಮ ಬ್ಯಾಂಕ್ ಖಾತೆಯಿಂದ ಐಪಿಪಿಬಿ ಖಾತೆಗೆ ಹಣ ಹಾಕಿ.
*DOP ಸೇವೆಗಳಿಗೆ ಭೇಟಿ ನೀಡಿ.
*ಅಲ್ಲಿಂದ ನೀವು ರಿಕರಿಂಗ್ ಡೆಫಾಸಿಟ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸುಕನ್ಯಾ ಸಮೃದ್ಧಿ ಖಾತೆ, ರಿಕರಿಂಗ್ ಡೆಫಾಸಿಟ್ ಮೇಲೆ ಸಾಲ ಸೇರಿದಂತೆ ಯಾವುದು ಅಗತ್ಯವೋ ಅದನ್ನು ಆಯ್ಕೆ ಮಾಡಬೇಕು.
*ಒಂದು ವೇಳೆ ನೀವು ನಿಮ್ಮ ಪಿಪಿಎಫ್ ಖಾತೆಗೆ ಹಣ ಹಾಕಬೇಕಿದ್ರೆ ಪ್ರಾವಿಡೆಂಟ್ ಫಂಡ್ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಪಿಪಿಎಫ್ ಖಾತೆ ಸಂಖ್ಯೆ ಹಾಗೂ ಡಿಒಪಿ ಗ್ರಾಹಕರ ಐಡಿ ನಮೂದಿಸಿ.
*ಜಮೆ ಮಾಡಬೇಕಿರುವ ಮೊತ್ತವನ್ನು ನಮೂದಿಸಿ ಹಾಗೂ 'ಪೇ' ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಐಪಿಪಿಬಿ ಮೊಬೈಲ್ ಅಪ್ಲಿಕೇಷನ್ ಮೂಲಕ ನೀವು ಯಶಸ್ವಿಯಾಗಿ ಮಾಡಿದ ಪಾವತಿಯ ಮಾಹಿತಿಯನ್ನು ಐಪಿಪಿಬಿ ನೀಡುತ್ತದೆ.
*ನೀವು ಅಂಚೆ ಕಚೇರಿಯ ವಿವಿಧ ಹೂಡಿಕೆ ಆಯ್ಕೆಗಳನ್ನು ಆರಿಸಬಹುದು. ಹಾಗೆಯೇ ಐಪಿಪಿಬಿ ಮೂಲ ಉಳಿತಾಯ ಖಾತೆ ಮೂಲಕ ನಿರಂತರ ಪಾವತಿಗಳನ್ನು ಮಾಡಬಹುದು.
*ಈ  ಅಪ್ಲಿಕೇಷನ್ ಬಳಸಿ ಇತರ ಬ್ಯಾಂಕ್ ಖಾತೆಗಳಿಂದ ಐಪಿಪಿಬಿಗೆ ಹಣ ವರ್ಗಾವಣೆ ಮಾಡಬಹುದು.

ಮುಂಬೈನಲ್ಲಿ 70 ಕೋಟಿ ರೂ. ದುಬಾರಿ ಅಪಾರ್ಟ್ ಮೆಂಟ್ ಖರೀದಿಸಿದ ಡಿಮಾರ್ಟ್ ಸಿಇಒ ನೊರೋನ್ಹಾ

ಐಪಿಪಿಬಿ ಮೂಲಕ ಸುಕನ್ಯಾ ಸಮೃದ್ಧಿ ಖಾತೆಗೆ ಹಣ ವರ್ಗಾವಣೆ ಹೇಗೆ?
*ನಿಮ್ಮ ಬ್ಯಾಂಕ್ ಖಾತೆಯಿಂದ ಐಪಿಪಿಬಿ ಖಾತೆಗೆ ಹಣ ಹಾಕಿ.
*ಈಗ ಡಿಒಪಿ ಉತ್ಪನ್ನಗಳಿಗೆ ಭೇಟಿ ನೀಡಿ. ಸುಕನ್ಯಾ ಸಮೃದ್ಧಿ ಖಾತೆ ಆಯ್ಕೆ ಮಾಡಿ.
*ನಿಮ್ಮ ಎಸ್ ಎಸ್ ವೈ ಖಾತೆ ಸಂಖ್ಯೆ ಹಾಗೂ ಡಿಒಪಿ ಗ್ರಾಹಕರ ಐಡಿ ಬರೆಯಿರಿ.
*ಕಂತಿನ ಅವಧಿ ಹಾಗೂ ಮೊತ್ತ ಆಯ್ಕೆ ಮಾಡಿ.
*ಐಪಿಪಿಬಿ ನಿಮಗೆ ಪಾವತಿ ಯಶಸ್ವಿಯಾಗಿ ವರ್ಗಾವಣೆಯಾದ ಬಗ್ಗೆ ಮಾಹಿತಿ ನೀಡುತ್ತದೆ.

Follow Us:
Download App:
  • android
  • ios