Shivamogga: ಮಕ್ಕಳಲ್ಲಿ ಕೌಶಲ್ಯಾಭಿವದ್ಧಿಗೆ ವಿಶೇಷ ಟೂಲ್ ರೆಡಿ ಮಾಡಿದ ಮಲೆನಾಡಿಗರು
- ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (NEP2020) ಪ್ರಕಾರ ಪ್ರಾಯೋಗಿಕ ಕುಶಲತೆಯನ್ನು ಮೈಗೂಡಿಸಿಕೊಳ್ಳಲು ಇದು ಸೂಕ್ತ ವೇದಿಕೆ
- ಪಾಶ್ಚಿಮಾತ್ಯ ದೇಶಗಳಂತೆ ನಮ್ಮಲ್ಲೂ ಹೊಸ ಹೊಸ ಆವಿಷ್ಕಾರ ಮಾಡುವ ಮೇಧಾವಿಗಳಿಗೆ ಕೊರತೆ ಇಲ್ಲ
- ವಿದ್ಯಾರ್ಥಿಗಳಿಗೆ ಅಪರೂಪದ ಕುಶಲತೆ ಹೊಂದಲು ಪ್ರಾಯೋಗಿಕ ತರಬೇತಿ
- ವಿವಿಧ ವಸ್ತು ಸಲಕರಣೆ, ತಯಾರಿಕಾ ವಿಧಾನ, ಅನುಸರಿಸಬೇಕಾದ ಸುರಕ್ಷತಾ ವಿಧಾನ, ತಜ್ಞರ ಮಾರ್ಗದರ್ಶನ ಒಂದೇ ಸೂರಿನಡಿ ಲಭ್ಯ
ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ
ಶಿವಮೊಗ್ಗ (ಆ.4): ಇಂದಿನ ಪೀಳಿಗೆಯವರಲ್ಲಿ Electronics, Coding, Robotics, Aero modelling, ವಿಜ್ಞಾನ ಮಾದರಿ ತಯಾರಿಕೆ, ಖಗೋಳ ವೀಕ್ಷಣೆ, Do It Yourself (DIY), ಡಿಸೈನ್ ಥಿಂಕಿಂಗ್, IoT ಹೀಗೆ ವಿವಿಧ ತಾಂತ್ರಿಕ ಹವ್ಯಾಸಗಳ ಬಗ್ಗೆ ತಿಳುವಳಿಕೆ ಮತ್ತು ತಜ್ಞ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ Electronic security, LED or Technology & security consultant ಕೈಗಾರಿಕೆಗಳಿಗೆ ಪ್ರಾಜೆಕ್ಟ್ ಸಲಹೆಗಾರರಾಗಿ ಸುಮಾರು 18 ವರ್ಷಗಳ ಅನುಭವವಿದೆ ವೆಂಕಟೇಶ್ D ಅವರಿಗೆ. ವೀಕ್ಷಣೆ, ವಿಜ್ಞಾನ ಮಾದರಿ ತಯಾರಿಕೆ, DIY Maker ಆಗಿ 18 ವರ್ಷಗಳ ಅನುಭವವಿರುವ ನವೀನ್ ಜೊತೆಗೂಡಿ 2019ರಲ್ಲಿ ನಗರದಲ್ಲಿ ಸ್ಥಾಪಿಸಿದ ಸಂಸ್ಥೆಯೇ Do Minds Design Lab.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (NEP2020) ಪ್ರಕಾರ ಪ್ರಾಯೋಗಿಕ ಕುಶಲತೆಯನ್ನು ಮೈಗೂಡಿಸಿಕೊಳ್ಳಲು ಇದು ಸೂಕ್ತ ವೇದಿಕೆ. ಈ ರೀತಿಯ ಮೇಕರ್ ಸ್ಪೇಸ್‌ಗಳು ಪಾಶ್ಯಾತ್ಯರಿಗೆ ಸಾಮಾನ್ಯ. ನಮ್ಮಲ್ಲಂತೂ ಇಲ್ಲವೇ ಇಲ್ಲ. ಆದರೆ ಇತ್ತೀಚಿಗೆ ಪೌರಾತ್ಯ ದೇಶಗಳಲ್ಲಿಯೂ ತ್ವರಿತವಾಗಿ ಬೆಳವಣಿಗೆಯಾಗುತ್ತಿದೆ. ಹಾಗಂತ ನಮ್ಮಲ್ಲಿ ಹೊಸ ಆವಿಷ್ಕಾರ ಮಾಡುವ ಮೇಧಾವಿಗಳಿಗೇನೂ ಕಡಿಮೆಯಿಲ್ಲ. ಆದರೆ ಅದಕ್ಕೊಂದು ಸಾಮಾನ್ಯ ಮುಕ್ತ ವೇದಿಕೆಯ ಅವಶ್ಯಕತೆ ಇದೆ. ಅದಕ್ಕೊಂದು ವೇದಿಕೆ ಕಲ್ಪಿಸಿ ಕೊಟ್ಟಿದೆ ಡೂ ಮೈಂಡ್ಸ್ ಡಿಸೈನ್ ಲ್ಯಾಬ್ ಸಂಸ್ಥೆ.
ಲೋಕಸಭಾ ಚುನಾವಣೆ ಹಿನ್ನೆಲೆ: ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಆಪರೇಷನ್ ಹಸ್ತ!
ಅಪರೂಪದ ಕುಶಲತೆ ಹೊಂದಲು ಆಸಕ್ತಿಯುಳ್ಳ ಪ್ರತಿಭೆಗಳಿಗೆ DIY ತತ್ವದಡಿಯಲ್ಲಿ ಪ್ರಾಯೋಗಿಕವಾಗಿ ವಿವಿಧ ವಸ್ತು ಸಲಕರಣೆ, ತಯಾರಿಕಾ ವಿಧಾನಗಳು, ಅನುಸರಿಸಬೇಕಾದ ಸುರಕ್ಷತಾ ವಿಧಾನಗಳು, ತಜ್ಞ ಮಾರ್ಗದರ್ಶನ ಹೀಗೆ ಒಂದೇ ಸೂರಿನಡಿ ಎಲ್ಲವೂ ಲಭ್ಯವಿರುವ ವ್ಯವಸ್ಥೆಯನ್ನು ಎಲ್ಲರಿಗೂ ತಲುಪಿಸುವುದು ಈ ಸಂಸ್ಥೆಯ ಉದ್ದೇಶ ವಾಗಿದೆ ಯಾವ ವಸ್ತುಗಳು, ಎಲ್ಲಿ ಯಾವಾಗ ಉಪಯೋಗಿಸಬೇಕು ಮತ್ತು ಉಪಯೋಗಿಸಬಾರದು, ಯಾವ ವಸ್ತುವಿಗೆ ಯಾವ ರೀತಿಯ gum ಉಪಯೋಗವಾಗುತ್ತದೆ.
ಇಲೆಕ್ಟ್ರಾನಿಕ್ ವಸ್ತುಗಳನ್ನು ಯಾವ ರೀತಿ ಸುರಕ್ಷಿತವಾಗಿ ಉಪಯೋಗಿಸಬೇಕು, ಬಿಡಿ ಭಾಗಗಳ ಬಗ್ಗೆ ಮಾಹಿತಿ ಮತ್ತು ಉಪಯೋಗ, ಸಲಕರಣೆಗಳನ್ನು ಉಪಯೋಗಿಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಕಲಿಯುವ ಅವಕಾಶವಿರುತ್ತದೆ. ಈ ಸಂಸ್ಥೆ ನಡೆಸುವ ಕಾರ್ಯಾಗಾರಗಳಲ್ಲಿ 8 ವರ್ಷದ ಮಕ್ಕಳಿಂದ ಮೇಲ್ಪಟ್ಟು ಯಾವುದೇ ಆಸಕ್ತರು ಭಾಗವಹಿಸಬಹುದು. ಪ್ರತಿ ಸಲಕರಣೆ, ವಸ್ತುಗಳನ್ನು ಪ್ರತಿಯೊಬ್ಬರೂ ಕೈಯಾರ ಪ್ರಯೋಗಿಸಿ ಮಾದರಿಗಳನ್ನು ತಯಾರಿಸಿ, ಅವುಗಳಲ್ಲಿ ಅಡಗಿರುವ ತತ್ತ್ವಗಳನ್ನು ಕಲಿಯುತ್ತಾರೆ. ನೋಡಿ ಕಲಿ ವಿಧಾನಕ್ಕಿಂತ ಮಾಡಿ ಕಲಿ ವಿಧಾನವು ಇಲ್ಲಿ ಹೆಚ್ಚು ಅಳವಡಿಸಲ್ಪಟ್ಟಿದೆ.
ಈ ಕಲಿಕೆಯ ಉಪಯೋಗವೇನು?: Maker cultureನಲ್ಲಿ ತೊಡಗಿಸಿಕೊಳ್ಳುವುದರಿಂದ ಸೃಜನಶೀಲತೆ, Innovation,Creative thinking, Out of box thinking, ಹೊಸ ಕೌಶಲ್ಯಾಭಿವೃದ್ಧಿ ಮುಂತಾದ ಹಲವು ಮೌಲ್ಯಯುತ ಕೌಶಲ್ಯಗಳನ್ನು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಅಂತರ್ಜಾಲದಲ್ಲಿ ಲಭ್ಯವಿರುವ ತಯಾರಿಕಾ ವಿವರಗಳನ್ನು ನೋಡಿ ಪ್ರಯತ್ನಿಸಿ ವಿಫಲವಾಗಿ ಕೈ ಚೆಲ್ಲುವ ಬದಲು ಸರಿಯಾದ ಮಾರ್ಗದರ್ಶನದೊಂದಿಗೆ ಮುಂದುವರಿಯಲು ಈ ಲ್ಯಾಬ್ ಸಹಕರಿಸುತ್ತದೆ.
ಶಕ್ತಿ ಯೋಜನೆ ಎಫೆಕ್ಟ್: ಚಿಕ್ಕಮಗಳೂರಿನಲ್ಲಿ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತ!
ಡು ಮೈಂಡ್ಸ್ ಡಿಸೈನ್ ಲ್ಯಾಬ್ ಸಂಸ್ಥೆಯು ತನ್ನ ವಿನೂತನ ಪ್ರಯೋಗಗಳನ್ನು ಮಕ್ಕಳಲ್ಲಿ ಹೆಚ್ಚು ಹೆಚ್ಚು ಪಸರಿಸಲು100ಕ್ಕೂ ಹೆಚ್ಚು ಕಾರ್ಯಾಗಾರಗಳು, 200ಕ್ಕೂ ಹೆಚ್ಚು projectಗಳು, 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿವೆ. 200ಕ್ಕೂ ಹೆಚ್ಚು ಸರ್ಕಾರೀ ಶಾಲಾ ಶಿಕ್ಷಕರಿಗೆ Design thinking ಕಾರ್ಯಾಗಾರ, ಕೃಷಿ ಕಾಲೇಜಿನಲ್ಲಿ Design thinking & loT ಕಾರ್ಯಾಗಾರಗಳು, Summer campನಲ್ಲಿ ಮಕ್ಕಳಿಗೆ ವಿವಿಧ ಕಾರ್ಯಾಗಾರ, ಕೈಗಾರಿಕೆ, ಕೃಷಿ, Home automation ಉಪಕರಣಗಳ ವಿನ್ಯಾಸ, ಸ್ವಂತ ವಿನ್ಯಾಸದ ಅನೇಕ Kit, electronic boardಗಳು ಈ ಸಂಸ್ಥೆಯಿಂದ ತಯಾರಾಗಿರುತ್ತದೆ. ಕಾರ್ಯಾಗಾರ ಮತ್ತು collection drive, e-Waste Recycling ಬಗ್ಗೆ ಅರಿವು. ಈ Makerspaceನ ಮುಖ್ಯ ಉದ್ದೇಶ. ಒಟ್ಟಿನಲ್ಲಿ ಮಲೆನಾಡಿನ ಶಿವಮೊಗ್ಗದಲ್ಲಿ ತಂತ್ರಜ್ಞಾನದ ಮಾಹಿತಿಯುಳ್ಳ ಇಬ್ಬರು ಯುವಕರ ಕಟ್ಟಿದ ಸಂಸ್ಥೆ ಮಕ್ಕಳಲ್ಲಿ ನೂತನ ಶಿಕ್ಷಣ ನೀತಿಯ ಆವಿಷ್ಕಾರದ ಭಾಗವಾಗಿ ಮೂಡಿ ಬಂದಿರುವುದು ಒಂದು ಸಾಧನೆಯೇ ಸೈ..!