ಕಾಯಕವೇ ಕೈಲಾಸ ಎಂದವನಿಗೆ ಉದ್ಯೋಗ ಕೊಟ್ಟ Zomato!| ಪುಟ್ಟ ಸಮಸ್ಯೆ ಎದುರಾದರೂ ಕೈಕಟ್ಟಿ ಕುಳಿತುಕೊಳ್ಳುವವರಿಗೆ ಈತ ಅತ್ಯುತ್ತಮ ನಿದರ್ಶನ| ಉದ್ಯೋಗ ನೀಡಿದ Zomatoಗೆ ಭಾರೀ ಪ್ರಶಂಸೆ

ನವದೆಹಲಿ[ಮೇ.20]: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. Zomato ಟೀ ಶರ್ಟ್ ಧರಿಸಿದ ವಿಶೇಷ ಚೇತನ ವ್ಯಕ್ತಿಯೊಬ್ಬ ಮೂರು ಚಕ್ರವಿರುವ ಪುಟ್ಟ ಗಾಡಿಯಲ್ಲಿ ಕುಳಿತು ಮನೆ ಮನೆಗೂ ಫುಡ್ ಸಪ್ಲೈ ಮಾಡುತ್ತಿದ್ದಾನೆ. 

ಹೌದು Zomato ವಿಶೇಷ ಚೇತನ ವ್ಯಕ್ತಿಯೊಬ್ಬನಿಗೆ ಡೆಲಿವರಿ ಬಾಯ್ ಆಗಿ ಉದ್ಯೋಗ ನೀಡಿದೆ. ಸದ್ಯ ಈತ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಒಂದೆಡೆ ಕಾಯಕವೇ ಕೈಲಾಸ ಎಂದು ದುಡಿಯುತ್ತಿರುವ ಡೆಲಿವರಿ ಬಾಯ್ ಗೆ ನೆಟ್ಟಿಗರು ಭೇಶ್ ಎನ್ನುತ್ತಿದ್ದರೆ, ಮತ್ತೊಂದೆಡೆ ಈತನಿಗೆ ಉದ್ಯೋಗ ನೀಡಿದ Zomatoಗೆ ಧನ್ಯವಾದ ತಿಳಿಸುತ್ತಿದ್ದಾರೆ. 

Scroll to load tweet…

ಹನಿ ಗೋಯಲ್ ಎಂಬಾತ ಈ ವಿಡಿಯೋವನ್ನು ಟ್ವೀಟ್ ಮಾಡುತ್ತಾ 'Zomato you keep rocking... ನಮ್ಮ ಜೀವನ ನಿರುಪಯುಕ್ತ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಎಲ್ಲರಿಗೂ ಈ ವ್ಯಕ್ತಿ ಒಂದು ಅತ್ಯುತ್ತಮ ನಿದರ್ಶನ. ದಯವಿಟ್ಟು ಈ ವ್ಯಕ್ತಿಯನ್ನು ಫೇಮಸ್ ಮಾಡಿ' ಎಂದು ಬರೆದಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…

ವಿಡಿಯೋದಲ್ಲಿ ಮೂರು ಚಕ್ರಗಳ ಪುಟ್ಟ ಸೈಕಲಲ್ಲಿ ಕುಳಿತ ವಿಶೇಷ ಚೇತನ ವ್ಯಕ್ತಿ ಪುಡ್ ಡೆಲಿವರಿ ಮಾಡುತ್ತಿರುವುದನ್ನು ನೋಡಬಹುದು. ಇದು ರಾಜಸ್ಥಾನದ ಬ್ಯಾವರ್ ನಲ್ಲಿ ಸೆರೆ ಹಿಡಿದ ದೃಶ್ಯ ಎಂದೂ ಹನಿ ಗೋಯಲ್ ತಿಳಿಸಿದ್ದಾರೆ.