Asianet Suvarna News Asianet Suvarna News

Cryptocurrency: ಮಹಿಳೆಯ ಖಾತೆಗೆ ಆಕಸ್ಮಿಕವಾಗಿ ₹ 83 ಕೋಟಿ ವರ್ಗಾಯಿಸಿದ ಕ್ರಿಪ್ಟೋ ಸಂಸ್ಥೆ..!

ಆಸ್ಟ್ರೇಲಿಯದ ಮಹಿಳೆಗೆ ಆಕಸ್ಮಿಕವಾಗಿ ಕ್ರಿಪ್ಟೋ ಸಂಸ್ಥೆಯೊಂದು ಕೋಟಿ ಕೋಟಿ ಹಣವನ್ನು ವರ್ಗಾವಣೆ ಮಾಡಿದೆ. ಆಕಸ್ಮಿಕವಾಗಿ ವರ್ಗಾಯಿಸಿದ 83 ಕೋಟಿ ರೂ. ಹಣವನ್ನು ಮರು ಪಡೆಯಲು ಕ್ರಿಪ್ಟೋ ಸಂಸ್ಥೆ ಕೋರ್ಟ್‌ ಮೊರೆ ಹೋಗಿದೆ. 

crypto firm accidentally transfers 83 crore rupees to australian women ash
Author
First Published Aug 31, 2022, 9:13 PM IST

ಕ್ರಿಪ್ಟೋಕರೆನ್ಸಿ (Cryptocurrency) ವಿನಿಮಯ ಮಾಡುವ Crypto.com ಆಕಸ್ಮಿಕವಾಗಿ 10.5 ಮಿಲಿಯನ್ ಡಾಲರ್‌ ಅಂದರೆ ಸುಮಾರು 83 ಕೋಟಿ ರೂಪಾಯಿಯನ್ನು ಆಸ್ಟ್ರೇಲಿಯದ (Australia) ಮಹಿಳೆಯ ಖಾತೆಗೆ ವರ್ಗಾಯಿಸಿದೆ. 100 ಡಾಲರ್‌ ಮರುಪಾವತಿಯನ್ನು ಪ್ರಕ್ರಿಯೆಗೊಳಿಸುವಾಗ Cryptocurrency ವಿನಿಮಯ Crypto.com ಆಕಸ್ಮಿಕವಾಗಿ 10.5 ಮಿಲಿಯನ್ ಡಾಲರ್‌ (ಸುಮಾರು ₹ 83 ಕೋಟಿ) ಅನ್ನು ಆಸ್ಟ್ರೇಲಿಯಾದ ಮಹಿಳೆಯ ಖಾತೆಗೆ ವರ್ಗಾಯಿಸಿದೆ ಎಂದು ತಿಳಿದುಬಂದಿದೆ. ಇನ್ನು, ಈ ರೀತಿ ಕೋಟಿಗಟ್ಟಲೆ ಹಣವನ್ನು ಆಕಸ್ಮಿಕವಾಗಿ ವರ್ಗಾವಣೆ ಮಾಡಿದ್ದರೂ, ಕಂಪನಿಯ ಲೆಕ್ಕಪರಿಶೋಧನೆಯು ಡಿಸೆಂಬರ್ 2021 ರಲ್ಲಿ ದೋಷವನ್ನು ಬಹಿರಂಗಪಡಿಸುವ ಮೊದಲು ಈ ವಹಿವಾಟು 7 ತಿಂಗಳವರೆಗೆ ಗಮನಕ್ಕೆ ಬಂದಿಲ್ಲ.

ಕ್ರಿಪ್ಟೋ ಎಕ್ಸ್‌ಚೇಂಜ್‌ (Crypto Exchange) ಸಂಸ್ಥೆ ಥೇವಮನೋಗರಿ ಮಣಿವೇಲ್ ಅವರ ಅಕೌಂಟ್‌ ನಂಬರ್‌ ಅನ್ನು  ಪಾವತಿ ಮೊತ್ತದ ಕ್ಷೇತ್ರದಲ್ಲಿ ನಮೂದಿಸಿದ ನಂತರ ತಪ್ಪಾಗಿ ಪಾವತಿ ಮಾಡಿದೆ. ಪರಿಣಾಮವಾಗಿ, ಗ್ರಾಹಕರು Crypto.com ನಿಂದ ತನ್ನ ಬ್ಯಾಂಕ್ ಖಾತೆಯಲ್ಲಿ $10,474,143.00 (ಸುಮಾರು 83 ಕೋಟಿ ರೂಪಾಯಿ) ಪಡೆದಿದ್ದಾರೆ. ನಂತರ, ಈ ಘಟನೆ ಬೆಳಕಿಗೆ ಬಂದ ನಂತರ, ಕಂಪನಿಯು ಈ ವರ್ಷದ ಆರಂಭದಲ್ಲಿ ವಿಕ್ಟೋರಿಯಾ (Victoria) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಹಣವನ್ನು ಮರುಪಡೆಯಲು ಕಾನೂನು ಕ್ರಮವನ್ನು ಪ್ರಾರಂಭಿಸಿತು ಎಂದು ಆಸ್ಟ್ರೇಲಿಯಾದ ವೆಬ್‌ಸೈಟ್ (Website) 7news.com ವರದಿ ಮಾಡಿದೆ.

GDP GROWTH RATE: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 13.5 ವೇಗವಾಗಿ ಬೆಳೆದ ಭಾರತದ ಜಿಡಿಪಿ: ಚೀನಾದ್ದು 0.4 ಅಷ್ಟೇ..!

ನ್ಯಾಯಾಲಯದ ಮಧ್ಯಪ್ರವೇಶದ ನಂತರ, ಫೆಬ್ರವರಿಯಲ್ಲಿ ಗ್ರಾಹಕರ ನಿರ್ದಿಷ್ಟ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಯಿತು. ಆದರೂ, ಆ ಹೊತ್ತಿಗೆ, ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ ಅಥವಾ ಇತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ, ತಪ್ಪಾಗಿ ತನ್ನ ಖಾತೆಗೆ ಜಮಾ ಮಾಡಿದ ಹಣದಿಂದ, ಮಣಿವೇಲ್ ತನ್ನ ಮಗಳಿಗೆ ಜನವರಿಯಲ್ಲಿ 4 ಲಕ್ಷ 30 ಸಾವಿರ ಡಾಲರ್‌ ಹಣ ಕಳಿಸಿದ್ದಾರೆ. ಅಲ್ಲದೆ,  ಮೆಲ್ಬೋರ್ನ್‌ನ ಉಪನಗರವಾದ ಕ್ರೇಗಿಬರ್ನ್‌ನಲ್ಲಿ ಮನೆಯನ್ನು ಖರೀದಿಸಲು ಮಹಿಳೆ, 13. 5 ಲಕ್ಷ ಡಾಲರ್‌ ಖರ್ಚು ಮಾಡಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ, ಮಣಿವೇಲ್ ಆ ಮನೆಯ ಮಾಲೀಕತ್ವವನ್ನು ಪ್ರಸ್ತುತ ಮಲೇಷ್ಯಾದಲ್ಲಿ ನೆಲೆಸಿರುವ ಆಕೆಯ ಸಹೋದರಿ ತೇವಮನೋಗರಿ ಗಂಗಾಡೋರಿಗೆ ವರ್ಗಾಯಿಸಿದರು ಎಂದೂ ಹೇಳಲಾಗಿದೆ. 

ಇನ್ನು, Crypto.com ಗಂಗಡೋರಿಗೆ ಫ್ರೀಜಿಂಗ್ ಖಾತೆಯ ಆಯ್ಕೆಗಳನ್ನು ನೀಡಲು ಪ್ರಯತ್ನಿದ್ದು, ಆಕೆ ವಕೀಲರ ಸಂವಹನಕ್ಕೆ ಪ್ರತಿಕ್ರಿಯಿಸಲಿಲ್ಲ. ಆದರೆ, ಮಣಿವೇಲ್ ಅವರ ವಕೀಲರಿಂದ ಒಂದು ಇಮೇಲ್‌ಗೆ ಗಂಗಡೋರಿ, " ಸ್ವೀಕರಿಸಲಾಗಿದೆ, ಧನ್ಯವಾದಗಳು" ಎಂಬ ಪ್ರತ್ಯುತ್ತರ ನೀಡಿದ್ದಾರೆ ಎಂದು ವಿಕ್ಟೋರಿಯಾ ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ. ಅಲ್ಲದೆ, ಗಂಗಾಡೋರಿ ಅವರು ಲಭ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನು ನೋಡುತ್ತಿದ್ದಾರೆ ಎಂದು ಮಣಿವೇಲ್ ಅವರ ವಕೀಲರು ಹೇಳಿದ್ದಾರೆ.


Hyderabad Biriyani Delivery: ವಿಮಾನದ ಮೂಲಕ ಬಿರಿಯಾನಿ ಡೆಲಿವರಿ ಮಾಡುತ್ತೆ ಜೊಮ್ಯಾಟೋ..!

ಮೆಲ್ಬೋರ್ನ್ ಮನೆಯನ್ನು ಮಾರಾಟ ಮಾಡುವ ಮೂಲಕ, ನ್ಯಾಯಾಲಯವು ಈಗ ಗಂಗಡೋರಿಗೆ Crypto.com 1.35 ಮಿಲಿಯನ್ ಡಾಲರ್‌ ಮತ್ತು ಆ ಮೊತ್ತದ ಬಡ್ಡಿಯನ್ನು ಪಾವತಿಸುವಂತೆ ಆದೇಶಿಸಿದೆ. ಗಂಗಾಡೋರಿ ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡದಿದ್ದರೆ, Cypto.com ಮಾರಾಟವನ್ನು ಏರ್ಪಡಿಸಲು ಮತ್ತು ಆದಾಯದಿಂದ ಅದರ ಹಣವನ್ನು ಮರುಪಡೆಯಲು ರಿಸೀವರ್ ಅನ್ನು ನೇಮಿಸುತ್ತದೆ. ಅಲ್ಲದೆ, ನ್ಯಾಯಾಲಯದ ಆದೇಶ ಪಾಲಿಸದಿದ್ದರೆ, ಇಬ್ಬರೂ ಸಹೋದರಿಯರು ಕಾನೂನು ತೊಂದರೆಯನ್ನು ಎದುರಿಸಬೇಕಾಗಬಹುದು. ಇದರ ಜತೆಗೆ, ಕ್ರಿಪ್ಟೋ ಡಾಟ್ ಕಾಮ್‌ಗೆ ತಗಲುವ ಪ್ರಕ್ರಿಯೆಗಳ ವೆಚ್ಚವನ್ನು ಭರಿಸುವಂತೆ ಗಂಗಾಡೋರಿಗೆ ಆಸ್ಟ್ರೇಲಿಯ ನ್ಯಾಯಾಲಯ (Australia Court)  ಸೂಚಿಸಿದೆ.

Follow Us:
Download App:
  • android
  • ios