Asianet Suvarna News Asianet Suvarna News

Muslim ಡೆಲಿವರಿ ಮಾಡುವುದು ಬೇಡ ಎಂಬ Swiggy ಗ್ರಾಹಕನಿಗೆ ನೆಟ್ಟಿಗರ ತರಾಟೆ..!

ಹೈದರಾಬಾದ್‌ ಮೂಲದ ಸ್ವಿಗ್ಗಿ ಗ್ರಾಹಕರೊಬ್ಬರು ಮುಸ್ಲಿಂ ಡೆಲಿವರಿ ಬಾಯ್‌ ಆಹಾರ ವಿತರಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಟ್ವಿಟ್ಟರ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. 

dont want a muslim delivery person writes swiggy customer while ordering food in hyderabad ash
Author
First Published Aug 31, 2022, 8:04 PM IST

ನೀವು ಸ್ವಿಗ್ಗಿ (Swiggy), ಜೊಮ್ಯಾಟೋ (Zomato) ಮುಂತಾದ ಕಡೆ ಆಹಾರ ಡೆಲಿವರಿ ಪಡೆದುಕೊಳ್ಳುತ್ತೀರಾ..? ಹೌದಾದರೆ, ಆಹಾರ ಪಡೆದುಕೊಳ್ಳುವ ವೇಳೆ ಕೇವಲ ಯಾವ ಹೋಟೆಲ್‌ನಿಂದ ಆಹಾರ ತರಿಸಬೇಕು ಅಥವಾ ಯಾವ ಆಹಾರ ತರಿಸಬೇಕು ಅಥವಾ ಅದರ ಬೆಲೆ ಎಷ್ಟಿದೆ ಅನ್ನೋದನ್ನ ಮಾತ್ರ ನೋಡ್ತೀರಲ್ವ. ಆದರೆ, ಇಲ್ಲೊಬ್ಬರು ಗ್ರಾಹಕರು ಮಾಡಿದ ಸಂದೇಶ ಸಾಮಾಜಿಕ ಜಾಲತಾಣದಲ್ಲಿ (Social Media) ವಿವಾದ ಸೃಷ್ಟಿಸಿದೆ. ಫುಡ್ ಆರ್ಡರ್ ಮಾಡುವಾಗ ಹೈದರಾಬಾದ್ (Hyderabad) ಮೂಲದ  ಸ್ವಿಗ್ಗಿ ಗ್ರಾಹಕರೊಬ್ಬರು ತಮಗೆ ಆಹಾರ ಡೆಲಿವರಿ ಮಾಡುವವರು ಮುಸ್ಲಿಂ ವ್ಯಕ್ತಿ ಆಗಿರಬಾರದು ಎಂದು ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಸ್ವಿಗ್ಗಿ ಮೂಲಕ ಆಹಾರವನ್ನು ಆರ್ಡರ್ (Food Order) ಮಾಡಿದ ಅವರು, ತಮ್ಮ ಆಹಾರವನ್ನು ಮುಸ್ಲಿಂ (Muslim) ಡೆಲಿವರಿ ಬಾಯ್ (Delivery Boy) ವಿತರಣೆ ಮಾಡಬಾರದು ಎಂದು ಡೆಲಿವರಿ ಸೂಚನಾ ಪೆಟ್ಟಿಗೆಯಲ್ಲಿ ಕಟ್ಟುನಿಟ್ಟಾಗಿ ನಮೂದಿಸಿದ್ದಾರೆ.

ಈ ಘಟನೆ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ನೆಟ್ಟಿಗರು ಇದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ, ತೆಲಂಗಾಣ ರಾಜ್ಯ ಟ್ಯಾಕ್ಸಿ ಮತ್ತು ಡ್ರೈವರ್ಸ್ ಜೆಎಸಿ ಅಧ್ಯಕ್ಷ ಶೇಕ್ ಸಲಾವುದ್ದೀನ್ ಅವರು ಸಂದೇಶದ ವೈರಲ್ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅಂತಹ ಸಂದೇಶಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ವಿಗ್ಗಿಗೆ ಒತ್ತಾಯಿಸಿದ್ದಾರೆ. ಸ್ಕ್ರೀನ್‌ಶಾಟ್‌ನಲ್ಲಿ, ಆ ವ್ಯಕ್ತಿ "ಮುಸ್ಲಿಂ ವಿತರಣಾ ವ್ಯಕ್ತಿ ಬೇಡ" ಎಂದು ಬರೆದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಆದರೆ, ಈ ವೈರಲ್‌ ಟ್ವೀಟ್‌ ಬಗ್ಗೆ ಸ್ವಿಗ್ಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ಮುಂದೆ ಹೈದರಾಬಾದ್‌ನಿಂದ್ಲೇ ಬಿರಿಯಾನಿ ತರಿಸಿ: ವಿಮಾನದ ಮೂಲಕ ಡೆಲಿವರಿ ಮಾಡುತ್ತೆ ಜೊಮ್ಯಾಟೋ..!

ಪ್ರೀತಿಯ ಸ್ವಿಗ್ಗಿ, ದಯವಿಟ್ಟು ಇಂತಹ ಮತಾಂಧ ವಿನಂತಿಯ (Bigoted Request) ವಿರುದ್ಧ ನಿಲುವು ತೆಗೆದುಕೊಳ್ಳಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಂದು ಎಲ್ಲರಿಗೂ ಆಹಾರವನ್ನು ತಲುಪಿಸಲು ನಾವು (ವಿತರಣಾ ಕೆಲಸಗಾರರು) ಇಲ್ಲಿದ್ದೇವೆ. @ಸ್ವಿಗ್ಗಿ @TGPWU  ಮಝಬ ನಹಿ ಸಿಖಾತ ಆಪಸ್ ಮೇ ಬೈರ ರಖನಾ ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, #SareJahanSeAchhaHindustanHamara #JaiHind #JaiTelangana ಎಂಬ ಹ್ಯಾಶ್‌ಟ್ಯಾಗ್‌ ಅನ್ನೂ ಬರೆದುಕೊಂಡಿದ್ದಾರೆ. 

ಹೈದರಾಬಾದ್‌ನಲ್ಲಿ ಈ ಹಿಂದೆಯೂ ನಡೆದಿತ್ತು ಇಂತಹ ಘಟನೆ
ಈ ಮಧ್ಯೆ, ಮತ್ತೊಂದು ಘಟನೆಯಲ್ಲಿ, ಹೈದರಾಬಾದ್‌ನ ಸ್ವಿಗ್ಗಿ ಬಳಕೆದಾರರು ಮುಸ್ಲಿಂ ಡೆಲಿವರಿ ಬಾಯ್ ತಂದಿದ್ದ ಆಹಾರವನ್ನು ತಿರಸ್ಕರಿಸಿದ್ದರು. “ತುಂಬಾ ಕಡಿಮೆ ಮಸಾಲೆ (Masala) ಮತ್ತು, ದಯವಿಟ್ಟು ಹಿಂದೂ ವಿತರಣಾ ವ್ಯಕ್ತಿಯನ್ನು ಆಯ್ಕೆಮಾಡಿ. ಎಲ್ಲಾ ರೇಟಿಂಗ್‌ಗಳು ಇದನ್ನು ಆಧರಿಸಿವೆ’’ ಎಂದು ವಿತರಣಾ ಸೂಚನೆಯಲ್ಲಿ ತಾನು ಸ್ಪಷ್ಟವಾಗಿ ಬರೆದಿದ್ದೇನೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಆದರೂ, ಮುಸ್ಲಿಂ ಡೆಲಿವರಿ ಬಾಯ್‌ ಆಹಾರ ತಂದುಕೊಟ್ಟಿದ್ದಕ್ಕೆ ತಾನು ಆರ್ಡರ್‌ ರಿಜೆಕ್ಟ್‌ ಮಾಡಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾರೆ.

287ರೂ. ಪಿಜ್ಜಾ ಆರ್ಡರ್ ರದ್ದುಗೊಳಿಸಿದ ಝೊಮ್ಯಾಟೊಗೆ ಬಿತ್ತು 10,000ರೂ. ದಂಡ!

ಹೈದರಾಬಾದ್‌ನಲ್ಲಿ, ಸ್ವಿಗ್ಗಿ ಮತ್ತು ಜೊಮ್ಯಾಟೋ 2 ಪ್ರಸಿದ್ಧ ಆಹಾರ ಸಂಗ್ರಾಹಕಗಳಾಗಿವೆ (Food Aggregators). ಸಾವಿರಾರು ವ್ಯಕ್ತಿಗಳು, ವಿಶೇಷವಾಗಿ ಇತರ ಜಿಲ್ಲೆಗಳ ಟೆಕ್ಕಿಗಳು ತಮ್ಮ ಊಟಕ್ಕಾಗಿ ಈ ಪೋರ್ಟಲ್‌ಗಳನ್ನು ಅವಲಂಬಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರ ಕೆಲವು ಗ್ರಾಹಕರಿಂದ ಇಂತಹ ವಿನಂತಿಗಳು ನಗರದ ಆರ್ಥಿಕತೆಗೆ ಹಾನಿ ಮಾಡುವುದಲ್ಲದೆ ವಿವಾದವನ್ನು ಹುಟ್ಟುಹಾಕುತ್ತವೆ. 

Follow Us:
Download App:
  • android
  • ios