GDP Growth Rate: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 13.5 ವೇಗವಾಗಿ ಬೆಳೆದ ಭಾರತದ ಜಿಡಿಪಿ: ಚೀನಾದ್ದು 0.4 ಅಷ್ಟೇ..!

ಭಾರತದ ಆರ್ಥಿಕತೆಯು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ 13.5 ರಷ್ಟು ಬೆಳೆದಿದೆ, ಇದು ಕಳೆದ ವರ್ಷ ಏಪ್ರಿಲ್ - ಜೂನ್ ಹೊರತುಪಡಿಸಿದರೆ ದಾಖಲಿಸಿದ ಅತಿ ಹೆಚ್ಚು ಬೆಳವಣಿಗೆಯಾಗಿದೆ. 

indian gdp grows at 13 5 percent in 2022 april june quarter ash

ಪ್ರಸಕ್ತ ಹಣಕಾಸು ವರ್ಷದ (Financial Year) ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು (Indian Economy) ಶೇಕಡಾ 13.5 ರಷ್ಟು ಬೆಳವಣಿಗೆಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ಬುಧವಾರ ತೋರಿಸಿವೆ. ಮುಖ್ಯವಾಗಿ ಮೂಲ ಪರಿಣಾಮದಿಂದಾಗಿ (Base Effect) ಎಂದೂ ತಿಳಿದುಬಂದಿದೆ.   ರಾಷ್ಟ್ರೀಯ ಅಂಕಿಅಂಶ ಕಚೇರಿ (National Statistical Office) (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2021-22ರ ಏಪ್ರಿಲ್-ಜೂನ್ ಅವಧಿಯಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) 20.1 ರಷ್ಟು ವಿಸ್ತರಿಸಿತ್ತು. ಕಳೆದ ವFಕ್ಕಿಂತ ಈ ಜಿಡಿಪಿ ಕಡಿಮೆ ಎನಿಸಿದರೂ, ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 4.1 ಕ್ಕೆ ಹೋಲಿಸಿದರೆ ಏಪ್ರಿಲ್ - ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿ ಎರಡಂಕಿಯ ಬೆಳವಣಿಗೆ ಕಂಡಿದೆ. 

ಬೇಸ್ ಎಫೆಕ್ಟ್‌ನಿಂದಾಗಿ ಭಾರತದ ಆರ್ಥಿಕತೆಯು ಎರಡಂಕಿಯ ಬೆಳವಣಿಗೆ ದರದಲ್ಲಿ ವಿಸ್ತರಿಸುತ್ತದೆ ಎಂದು ಅನೇಕ ವಿಶ್ಲೇಷಕರು ಅಂದಾಜಿಸಿದ್ದಾರೆ. ರೇಟಿಂಗ್ ಏಜೆನ್ಸಿ ಇಕ್ರಾ ಪ್ರಕಾರ, ಒಟ್ಟು ದೇಶೀಯ ಉತ್ಪನ್ನವು 13 ಪ್ರತಿಶತದಷ್ಟು ಬೆಳೆಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿತ್ತು. ಆದರೂ, ಹಲವು ಸಂಸ್ಥೆಗಳ ಅಂದಾಜಿಗಿಂತ ಭಾರತದ ಜಿಡಿಪಿ ಕಡಿಮೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ವರದಿಯಲ್ಲಿ, ಏಪ್ರಿಲ್-ಜೂನ್ 2022 ಕ್ಕೆ ಬೆಳವಣಿಗೆ ದರವನ್ನು ಶೇಕಡಾ 15.7 ಎಂದು ಅಂದಾಜಿಸಿತ್ತು. 

ದೇಶದ ಆರ್ಥಿಕತೆ ಭದ್ರವಾಗಿದೆ: ಸಮರ್ಥಿಸಿಕೊಂಡ ವಿತ್ತ ಸಚಿವೆ

ಅಲ್ಲದೆ, ಈ ತಿಂಗಳ ಆರಂಭದಲ್ಲಿ, ತನ್ನ ಹಣಕಾಸು ನೀತಿ ಸಭೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) (ಆರ್‌ಬಿಐ) ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್ - ಜೂನ್‌ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರವು ಸುಮಾರು 16.2 ಶೇಕಡ ಆಗುವ ಸಾಧ್ಯತೆಯಿದೆ ಎಂದು ಹೇಳಿದೆ.ಏಪ್ರಿಲ್-ಜೂನ್ 2022 ರಲ್ಲಿ ಚೀನಾ ಕೇವಲ 0.4 ಶೇಕಡಾ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ. ಆದರೂ, ಆರ್ಥಿಕ ಚಟುವಟಿಕೆಯ ಹೊಡೆತದಿಂದ ಏಪ್ರಿಲ್ - ಜೂನ್‌ ತ್ರೈಮಾಸಿಕ ಹಾಗೂ ಮುಂದಿನ 2 ತ್ರೈಮಾಸಿಕಗಳಲ್ಲಿ ಜಿಡಿಪಿ ವೇಗವು  ತೀವ್ರವಾಗಿ ನಿಧಾನಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. 

ಚಿಲ್ಲರೆ ಹಣದುಬ್ಬರವು ಈ ವರ್ಷ ಸೆಂಟ್ರಲ್ ಬ್ಯಾಂಕಿನ ಮಧ್ಯಮ-ಅವಧಿಯ ಗುರಿಯ 2-6 ಶೇಕಡಾದ ಮೇಲಿನ ಮಿತಿಯನ್ನು ಮೀರಿದೆ ಮತ್ತು 2022 ರ ಉಳಿದ ಭಾಗದಲ್ಲಿ ಅಷ್ಟೇ ಉಳಿಯುತ್ತದೆ ಎಂದು ಊಹಿಸಲಾಗಿದೆ. ಈ ಹಿನ್ನೆಲೆ ಆರ್‌ಬಿಐ ತನ್ನ ಬೆಂಚ್‌ಮಾರ್ಕ್ ರೆಪೋ ದರವನ್ನು ಮೇ ತಿಂಗಳಿನಿಂದ 140 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. ಹಾಗೂ, ದೇಶೀಯ ಬೆಳವಣಿಗೆಯ ನಿರೀಕ್ಷೆಗಳ ಮೇಲೆ ಜಾಗತಿಕ ಮಂದಗತಿಯ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿತ್ತು.ಆದರೆ ಜಾಗತಿಕ ಆರ್ಥಿಕ ಸ್ಥಿತಿಗತಿಗಳು ಹದಗೆಟ್ಟಿದ್ದರೂ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ಉತ್ತಮವಾಗಿ ನಿಭಾಯಿಸುತ್ತಿದೆ ಎಂದು ಈ ಡೇಟಾ ತೋರಿಸುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಈ ಮಧ್ಯೆ, ಆಮದು ಮಾಡಿದ ಸರಕುಗಳು ಈಗ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಹೆಚ್ಚು ದುಬಾರಿಯಾಗಿದೆ. ಏಕೆಂದರೆ ಈ ವರ್ಷ ಡಾಲರ್ ಎದುರು ರೂಪಾಯಿ ಮೌಲ್ಯವು ಶೇಕಡಾ 7 ಕ್ಕಿಂತ ಹೆಚ್ಚು ಕುಸಿದಿದೆ. ಇನ್ನೊಂದೆಡೆ, ಭಾರತದ ಇತರ ಡೇಟಾ ಬಿಡುಗಡೆಗಳು ಬುಧವಾರದಂದು ಪ್ರಮುಖ ವಲಯದ ಉತ್ಪಾದನೆಯನ್ನು ತೋರಿಸಿದೆ. ಮೂಲಸೌಕರ್ಯ ಕಾರ್ಖಾನೆಗಳ ಉತ್ಪಾದನೆಯು ಜುಲೈನಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 4.5  ವಿಸ್ತರಣೆ ಕಂಡಿದೆ.  

ಚೀನಾ ಆರ್ಥಿಕತೆಗೆ ಮುಳ್ಳಾದ ಕೋವಿಡ್ ನೀತಿಗಳು; ಜಿಡಿಪಿಯಲ್ಲಿ ದಾಖಲೆ ಕುಸಿತ

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ - ಹೀಗೆ 8 ಮೂಲಸೌಕರ್ಯ ವಲಯಗಳ ಉತ್ಪಾದನಾ ಬೆಳವಣಿಗೆಯು ಈ ಹಣಕಾಸು ವರ್ಷದ ಏಪ್ರಿಲ್-ಜುಲೈನಲ್ಲಿ ಶೇಕಡಾ 11.5 ರಷ್ಟಿತ್ತು. ಆದರೆ, ಇದು ವರ್ಷದ ಹಿಂದೆ ಶೇಕಡಾ 21.4 ರಷ್ಟಿತ್ತು ಎಂದು ತಿಳಿದುಬಂದಿದೆ. 

Latest Videos
Follow Us:
Download App:
  • android
  • ios