Asianet Suvarna News Asianet Suvarna News

20 ದಿನದ  ನಂತರ ಕಾಫಿ ಡೇ ಷೇರು ಶೇ. 5 ರಷ್ಟು ಏರಿಕೆ.. ಎರಡು ಕಾರಣ

ಕಾಫೀ  ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಕಣ್ಮರೆ ನಂತರ ಪಾತಾಳಕ್ಕೆ ಕುಸಿದಿದ್ದ ಕಂಪನಿ ಷೇರುಗಳು ಇಷ್ಟತ್ತು ದಿನಗಳ ನಂತರ ಮೊದಲ ಸಾರಿ ಏರಿಕೆಯ ಹಾದಿ ಕಂಡಿದೆ. ಹಾಗಾದರೆ ಇದ್ದಕ್ಕೇನು ಕಾರಣ?

Coca-Cola deal talks lift Coffee Day Enterprises shares 5 Percent
Author
Bengaluru, First Published Aug 19, 2019, 4:40 PM IST
  • Facebook
  • Twitter
  • Whatsapp

ಬೆಂಗಳೂರು(ಆ. 19)  ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಅಕಾಲಿಕ ಮರಣದ ನಂತರ ಕಂಪನಿ ಷೇರುಗಳು ಪಾತಾಳಕ್ಕೆ ಕುಸಿದಿದ್ದವು.  ಹೂಡಿಕೆದಾರರು ಅಕ್ಷರಶಃ ಕಂಗಾಲಾಗುವ ಹಂತಕ್ಕೆ ತಲುಪಿದ್ದರು.

ಇಷ್ಟತ್ತು ದಿನಗಳಲ್ಲಿ ಷರೊಂದು ಬರೋಬ್ಬರಿ 200 ರೂ. ಕುಸಿತ ಕಂಡು 60  ರೂಪಾಯಿಗೆ ಬಂದು ನಿಂತಿತ್ತು. ಆದರೆ ಸೋಮವಾರದ ಮಾರುಕಟ್ಟೆಯಲ್ಲಿ 3 ರೂ. ಏರಿಕೆ ಕಂಡಿದ್ದು ಷೇರು ಹೂಡಿಕೆದಾರರು ಅಂತಿಮವಾಗಿ ನಿಟ್ಟುಸಿರು ಬಿಡುವಂತೆ ಆಗಿದೆ.

ಕಂಪನಿ ಮೊದಲ ಹಂತದ ಪರಿಹಾರ ಉಪಾಯ ಕಂಡುಕೊಂಡಿದ್ದು ತನ್ನ ಅಂಗಸಂಸ್ಥೆಯಯ ಒಡೆತನದಲ್ಲಿದಲ್ಲಿದ್ದ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟ ಮಾಡಿ ಸಾಲದ ಮೊತ್ತವನ್ನು 4900  ಕೋಟಿ ರೂ. ನಿಂದ ಸಾವಿರ ಕೋಟಿ ರೂ.ಗೆ ಇಳಿಕೆ ಮಾಡಿದ್ದು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮಮ ಬೀರಿದೆ.

4900 ಕೋಟಿಯಿಂದ ಒಂದೇ ಸಾರಿ ಸಾವಿರ ಕೋಟಿಗೆ ಇಳಿದ ಕಾಫಿ ಡೇ ಸಾಲ.

ಕಾಫೀ ಡೇ ತನ್ನ ಅಂಗಸಂಸ್ಥೆ  ಟ್ಯಾಂಗ್ಲಿನ್ ಡೆವಲ್ಮೆಂಟ್ಸ್ ಒಡೆತನದಲ್ಲಿದ್ದ  90 ಎಕರೆ ವಿಸ್ತೀರ್ಣದ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ನ್ನು  ಬ್ಲಾಕ್ ಸ್ಟೋನ್ ಸಂಸ್ಥೆಗೆ ಮಾರಾಟ ಮಾಡಿ ಸಾಲದ ಹೊರೆ ಕಡಿಮೆ ಮಾಡಿಕೊಂಡಿತ್ತು.

ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನ?

2,600 ಕೋಟಿ ರು ನಿಂದ 3,000 ಕೋಟಿ ರು ಮೌಲ್ಯಕ್ಕೆ ವಿಲೇಜ್ ಮಾರಟವಾಗಿದೆ ಎಂಬ ಮಾಹಿತಿ ಇದ್ದು ಕಾಫಿ ಡೇ ಸಹ ಮಾರಾಟ ಮಾಡಿರುವ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದೆ.

ಇನ್ನೊಂದು ಕಡೆ ಕೋಕಾ ಕೋಲಾ ಕಂಪನಿ ಕಾಫಿ ಡೇಯೊಂದಿಗೆ ಪಾಲುದಾರಿಕೆ ಮಾತುಕತೆ ನಡೆಸಿದೆ ಎನ್ನುವುದು ವರದಿಯಾಗಿದೆ.  ಕಾಫಿ ಡೇ ಕಂಪನಿ ಮೇಲಿನ ಸಾಲದ ಹೊರೆ ಕಡಿಮೆಯಾದ ಸುದ್ದಿ ಮತ್ತು ಕೋಕಾ ಕೋಲಾ ಮಾತುಕತೆ ಕಂಪನಿಯ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

Follow Us:
Download App:
  • android
  • ios