Asianet Suvarna News Asianet Suvarna News

4900 ಕೋಟಿಯಿಂದ ಒಂದೇ ಸಾರಿ ಸಾವಿರ ಕೋಟಿಗೆ ಇಳಿದ ಕಾಫಿ ಡೇ ಸಾಲ..ಕಾರಣ

ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಅಕಾಲಿಕ ಮರಣದ ನಂತರ ಕಂಪನಿ ಷೇರುಗಳು ಪಾತಾಳಕ್ಕೆ ಕುಸಿದಿದ್ದವು. ಈಗ ಕಂಪನಿ ಮೊದಲ ಹಂತದ ಪರಿಹಾರ ಉಪಾಯ ಕಂಡುಕೊಂಡಿದ್ದು ತನ್ನ ಅಂಗಸ್ಥೆಯ ಒಡೆತನದಲ್ಲಿರುವ ಬೆಂಗಳೂರಿನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟ ಮಾಡಿದೆ  ಎಂಬ ಸುದ್ದಿ ಇದೆ.

Coffee Day Enterprises debt to come down to Rs 1000 cr after sale of its tech park Bengaluru
Author
Bengaluru, First Published Aug 18, 2019, 9:06 PM IST

ಬೆಂಗಳೂರು[ಆಗಸ್ಟ್ 18] ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಅಕಾಲಿಕ ಮರಣದ ಬಳಿಕ ಕಾಫಿ ಡೇ ಸಂಸ್ಥೆಯ ಮಾರುಕಟ್ಟೆ ಮೌಲ್ಯ ದಿನದಿನಕ್ಕೆ ಕುಸಿಯುತ್ತಿರುವುದು ವಾಸ್ತವ. ಸಾಲದ ಹೊರೆ ತಗ್ಗಿಸಲು ಮುಂದಾಗಿರುವ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್  ತನ್ನ ಅಂಗ ಸಂಸ್ಥೆ ಟ್ಯಾಂಗ್ಲಿನ್ ಡೆವಲ್ಮೆಂಟ್ಸ್ ಒಡೆತನದಲ್ಲಿರುವ  ಆಸ್ತಿಯೊಂದನ್ನು ಆಗಸ್ಟ್ 14 ರಂದೇ ಮಾರಿದೆ ಎನ್ನಲಾಗಿದೆ.

ಸಂಸ್ಥೆಯ ಒಡೆತನದಲ್ಲಿರುವ 90 ಎಕರೆ ವಿಸ್ತೀರ್ಣ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ನ್ನು  ಬ್ಲಾಕ್ ಸ್ಟೋನ್ ಸಂಸ್ಥೆ ಖರೀದಿಗೆ  ಮಾಡಿದೆ. ಈ ಮೂಲಕ ಸಾಲದ ಹೊರೆ 1 ಸಾವಿರ ಕೋಟಿ ರೂ. ಗೆ ಇಳಿದಿದೆ.

2,600 ಕೋಟಿ ರು ನಿಂದ 3,000 ಕೋಟಿ ರು ಮೌಲ್ಯಕ್ಕೆ ವಿಲೇಜ್ ಮಾರಟವಾಗಿದೆ. ಈಗ ಮಾರಾಟ ಸುದ್ದಿಯನ್ನು ಖಚಿತಪಡಿಸಿರುವ ಕಾಫಿ ಡೇ ಸಂಸ್ಥೆ, ಸಾಲದ ಹೊರೆ 1,000 ಕೋಟಿ ರುಗೆ ಇಳಿಯಲಿದೆ ಎಂದು ಪ್ರಕಟಿಸಿದೆ. 

ಮಾರ್ಗ ಮಧ್ಯೆ ಸಿದ್ಧಾರ್ಥ ಪೋಸ್ಟ್ ಮಾಡಿದ ಪತ್ರದಲ್ಲಿದ್ದ ವಿಳಾಸ!?

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟದ ಬಳಿಕ ಲಾಜಿಸ್ಟಿಕ್ ಕಂಪನಿ ಸಿಕಾಲ್ ಕೂಡಾ ಮಾರುವ ಮುನ್ಸೂಚನೆ ಸಿಕ್ಕಿದೆ. ಸಿಕಾಲ್ ಲಾಜಿಸ್ಟಿಕ್ ಲಿಮಿಟೆಡ್ ಕೂಡಾ 1,488 ಕೋಟಿ ರು ಸಾಲ ಹೊಂದಿದೆ ಎನ್ನುವುದು ಅಷ್ಟೇ ಮುಖ್ಯವಾದ ವಿಚಾರ.

ಜುಲೈ 29ರಂದು ಮಂಗಳೂರು- ಉಳ್ಳಾಲ ಬಳಿಯ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ದಾರ್ಥ, ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಿದ್ಧಾರ್ಥ್ ಕಣ್ಮರೆಯಾದ ನಂತರದಿಂದ ಕಾಫೀ ಡೇ ಶೇರುಗಳು ನಿರಂತರ ಕುಸಿತ ಕಂಡು 62 ರು. ಗೆ ಬಂದು ತಲುಪಿದೆ.

Follow Us:
Download App:
  • android
  • ios