ಬಿಜಿಂಗ್(ಸೆ.7): ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಚೀನಾದ ಅಗ್ರ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಾಕ್ ಮಾ, ನಿವೃತ್ತಿಯಾಗುವ ಸೂಚನೆ ನೀಡಿದ್ದಾರೆ. ಅಲಿಬಾಬಾ ಎಂಬ ಕಂಪನಿ ಮೂಲಕ ವಿಶ್ವದ ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಜಾಕ್ ಮಾ, ಕಳೆದ ಸೋಮವಾರ 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಾಕ್ ಮಾ, ತಾವು ಶೀಘ್ರದಲ್ಲೇ ನಿವೃತ್ತಿಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಸುಮಾರು 400 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಅಲಿಬಾಬಾ ಕಂಪನಿಯ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ನೀಡಿ, ತಮ್ಮ ಮೂಲ ಉದ್ಯೋಗವಾದ ಶಿಕ್ಷಕ ವೃತ್ತಿಗೆ ಮರಳುವುದಾಗಿ ಜಾಕ್ ಮಾ ಘೋಷಿಸಿದ್ದಾರೆ.

ಚೀನಾದ ಪ್ರಸಿದ್ಧ ಇಂಗ್ಲೀಷ್ ಪ್ರಾಧ್ಯಾಪಕರಲ್ಲಿ ಒಬ್ಬರಾದ ಜಾಕ್ ಮಾ, 20 ವರ್ಷಗಳ ಹಿಂದೆ ಅಲಿಬಾಬಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇಂದು ಜಾಕ್ ಮಾ ಅವರ ವೈಯಕ್ತಿಕ ಆಸ್ತಿಯೇ ಸುಮಾರು 40 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಉದ್ಯಮಿಯಾಗುವುದಕ್ಕೂ ಮೊದಲು ಜಾಕ್ ಮಾ ಇಂಗ್ಲೀಷ್ ಭಾಷಾ ಪ್ರಾಧ್ಯಾಪಕರಾಗಿದ್ದು, ಇದೀಗ ಮತ್ತೆ ತಮ್ಮ ಮೂಲ ವೃತ್ತಿಗೆ ಮುನ್ಸೂಚನೆ ನೀಡಿದ್ದಾರೆ ಜಾಕ್ ಮಾ.

ಜಾಕ್ ಮಾ ಎಂಬ ಚಾರಿಟೆಬಲ್ ಟ್ರಸ್ಟ್ ತೆರೆಯುವ ಸೂಚನೆ ನೀಡಿರುವ ಜಾಕ್ ಮಾ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಿದ್ದಾರೆ. ಇದಕ್ಕೆ ಅಮೆರಿಕದ ಶ್ರೇಷ್ಠ ಉದ್ಯಮಿ ಬಿಲ್ ಗೇಟ್ಸ್ ಪ್ರೇರಣೆ ಎಂದು ಹೇಳಿರುವ ಜಾಕ್ ಮಾ, ತಾವು ಬಿಲ್ ಗೇಟ್ಸ್ ಅವರಷ್ಟು ಶ್ರೀಮಂತರಾಗದೇ ಹೋದರೂ ಅವರಿಗಿಂತ ಮುಂಚೆಯೇ ನಿವೃತ್ತಿಯಾಗುವುದಾಗಿ ಹಾಸ್ಯಭರಿತವಾಗಿ ಹೇಳಿದ್ದಾರೆ.

ಇದೇ ವೇಳೆ ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರದ ಕುರಿತು ಪ್ರತಿಕ್ರಿಯೆ ನೀಡಿರುವ ಜಾಕ್ ಮಾ, ಆರ್ಥಿಕ ಪಾರುಪತ್ಯಕ್ಕೆ ಎರಡೂ ರಾಷ್ಟ್ರಗಳು ಅದೆಷ್ಟೇ ಪೈಪೋಟಿ ನಡೆಸಿದರೂ ಜನರಲ್ಲಿ ಪರಸ್ಪರ ಗೌರವವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎರಡೂ ರಾಷ್ಟ್ರಗಳ ಜನರು ಮಾತನಾಡುವ ಭಾಷೆ ಒಂದೇ, ಅದು ಪ್ರೀತಿ ಮತ್ತು ಗೌರವದ ಭಾಷೆ ಎಂದು ಜಾಕ್ ಮಾ ಹೇಳಿದ್ದಾರೆ.

ಅಮೆರಿಕ ಜೊತೆ ಯುದ್ದಕ್ಕೆ ಸಜ್ಜಾಗಿದ್ದೇನೆ: ಅಲಿಬಾಬಾ ಹೊಸ ಬಾಂಬ್!

ರಿಲಯನ್ಸ್‌ ರಿಟೇಲ್‌ನಲ್ಲಿ ಚೀನಾದ ಅಲಿಬಾಬಾ 40000 ಕೋಟಿ ಹೂಡಿಕೆ..!

ಜಿಯೋ ನಿದ್ದೆಗೆಡಿಸಲು ಭಾರತಕ್ಕೆ ಲಗ್ಗೆಯಿಟ್ಟ ಚೀನಾದ 'ಆಲಿಬಾಬಾ ಗ್ರೂಪ್'