ಇ- ವಾಣಿಜ್ಯ ಮಾರುಕಟ್ಟೆಯಲ್ಲಿ ದೈತ್ಯಕಂಪನಿಯನ್ನು ಸ್ಥಾಪಿಸುವ ನಿಟ್ಟಿನಿಂದ ರಿಲಯನ್ಸ್‌ ರಿಟೇಲ್‌ ಕಂಪನಿಯ ದೊಡ್ಡ ಮಟ್ಟದ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಲಿಬಾಬಾ ಗ್ರೂಪ್‌ ಪ್ರಸ್ತಾವನೆಯನ್ನು ಮುಂದಿಟ್ಟಿದೆ. 

ಮುಂಬೈ[ಆ.21]: ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಹಾಗೂ ಅಮೇಜಾನ್‌ನಂತಹ ಇ- ವಾಣಿಜ್ಯ ಕಂಪನಿಗಳ ಪ್ರಾಬಲ್ಯಕ್ಕೆ ಸಡ್ಡುಹೊಡೆಯುವ ನಿಟ್ಟಿನಿಂದ ಚೀನಾದ ಅಲಿಬಾಬಾ ಗ್ರೂಪ್‌, ಮುಕೇಶ್‌ ಅಂಬಾನಿ ಅವರ ರಿಲಯನ್ಸ್‌ ರಿಟೇಲ್‌ ಜೊತೆಗೂಡಿ ಜಂಟಿ ಕಂಪನಿ ತೆರೆಯಲು ಮುಂದಾಗಿದೆ. 

ಇ- ವಾಣಿಜ್ಯ ಮಾರುಕಟ್ಟೆಯಲ್ಲಿ ದೈತ್ಯಕಂಪನಿಯನ್ನು ಸ್ಥಾಪಿಸುವ ನಿಟ್ಟಿನಿಂದ ರಿಲಯನ್ಸ್‌ ರಿಟೇಲ್‌ ಕಂಪನಿಯ ದೊಡ್ಡ ಮಟ್ಟದ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಲಿಬಾಬಾ ಗ್ರೂಪ್‌ ಪ್ರಸ್ತಾವನೆಯನ್ನು ಮುಂದಿಟ್ಟಿದೆ. 

ರಿಲಯನ್ಸ್‌ ರಿಟೇಲ್‌ನ ಶೇ.50ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಲಿಬಾಬಾ ಗ್ರೂಪ್‌ಗೆ 34,400 ಕೋಟಿ ರು. ನಿಂದ 41,400 ಕೋಟಿ ರು. (5-6 ಬಿಲಿಯನ್‌ ಡಾಲರ್‌) ಹೂಡಿಕೆ ಮಾಡುವ ಅಗತ್ಯವಿದೆ ಎನ್ನಲಾಗಿದೆ.