ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿದ್ರೂ ದೆಹಲಿ ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸುಮಾರು ಒಂದು ತಿಂಗಳಿಂದ ಸ್ಥಿರವಾಗಿದೆ. 

ಬೆಂಗಳೂರು (ಡಿ.11): ಅಕ್ಟೋಬರ್ ನಲ್ಲಿ ಏರಿಕೆ ಹಾದಿ ಹಿಡಿದು ವಾಹನಸವಾರರ ನೆಮ್ಮದಿ ಕಸಿದಿದ್ದ ಪೆಟ್ರೋಲ್ (Petrol)ಹಾಗೂ ಡೀಸೆಲ್ (Diesel)ಬೆಲೆ (Price) ಸುಮಾರು ಒಂದು ತಿಂಗಳಿಂದ ಸ್ಥಿರತೆ ಕಾಯ್ದುಕೊಂಡಿದೆ. ಸದಾ ಏರಿಳಿತಗಳನ್ನು ದಾಖಲಿಸೋ ಇಂಧನ ದರದ ಈ ಸ್ಥಿರತೆ ಸಾಮಾನ್ಯ ಜನತೆಗೆ ಸ್ವಲ್ಪ ನೆಮ್ಮದಿ ಮೂಡಿಸಿದ್ದರೂ 100ರ ಗಡಿ ದಾಟಿರೋ ಬಗ್ಗೆ ಅಸಮಾಧಾನವಂತೂ ಇದ್ದೇಇದೆ. ಕಳೆದ ತಿಂಗಳು ದೀಪಾವಳಿ ಸಮಯದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರದ ಮೇಲಿನ ಅಬಕಾರಿ ಸುಂಕವನ್ನು (Excise duty)ಕಡಿತಗೊಳಿಸಿದ ಕಾರಣ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿತ್ತು. ಆ ನಂತರ ಇಂಧನ ದರ ಸ್ಥಿರತೆ ಕಾಯ್ದುಕೊಂಡಿತ್ತು. ಇನ್ನು ದೆಹಲಿ(Delhi) ಸರ್ಕಾರ ಈ ತಿಂಗಳ ಮೊದಲ ದಿನವೇ ಪೆಟ್ರೋಲ್ ಮೇಲಿನ ವ್ಯಾಟ್ (VAT) ಕಡಿತಗೊಳಿಸಿ ದರದಲ್ಲಿ ಇಳಿಕೆ ಮಾಡಿತ್ತು. ಇದು ಬೇರೆ ರಾಜ್ಯಗಳ ಜನರಲ್ಲೂ ಪೆಟ್ರೋಲ್ ಬೆಲೆಯಲ್ಲಿ ಇಳಿಕೆಯಾಗಬಹುದೆಂಬ ನಿರೀಕ್ಷೆ ಮೂಡಿಸಿತ್ತು. ಆದ್ರೆ ಬೇರೆ ಯಾವ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಇಂಧನ ದರ ಇಳಿಸೋ ಬಗ್ಗೆ ಈ ತನಕ ಆಸಕ್ತಿ ತೋರಿಲ್ಲ. ಇನ್ನು ಜಗತ್ತಿನಾದ್ಯಂತ ಒಮಿಕ್ರಾನ್(Omicron) ವೈರಸ್ ಹಾವಳಿ ಹೆಚ್ಚುತ್ತಿರೋದು ಅಂತಾರಾಷ್ಟ್ರೀಯ ಕಚ್ಚಾ ತೈಲ(Crude oil) ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ(Crude Oil)ಬೆಲೆಯಲ್ಲಿ ಏರಿಕೆಯಾಗಿದೆ. ಇದು ಮುಂದಿನ ದಿನಗಳಲ್ಲಿ ದೇಶದಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಕಳೆದ 38 ದಿನಗಳಿಂದ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಾಗಾದ್ರೆ ರಾಜ್ಯದ ಪ್ರಮುಖ ನಗರಗಳಲ್ಲಿ (Cities)ಇಂದು (ಡಿ.11) ಪೆಟ್ರೋಲ್ ಹಾಗೂ ಡೀಸೆಲ್
ಬೆಲೆ ಎಷ್ಟಿದೆ? 

Add Asianetnews Kannada as a Preferred SourcegooglePreferred

ರಾಜ್ಯದ ಪ್ರಮುಖ ನಗರಗಳಲ್ಲಿಇಂಧನ ದರ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru)ಇಂದು ಪೆಟ್ರೋಲ್ ದರ ಲೀಟರ್ ಗೆ 100.58ರೂ. ಹಾಗೂ ಡೀಸೆಲ್ ದರ 85.01 ರೂ.ಇದ್ದು,ಯಾವುದೇ ಬದಲಾವಣೆ ದಾಖಲಿಸಿಲ್ಲ. ಹುಬ್ಬಳ್ಳಿಯಲ್ಲಿ (Hubli)ಪೆಟ್ರೋಲ್ ಬೆಲೆ 100.31ರೂ. ಹಾಗೂ ಡೀಸೆಲ್ ಬೆಲೆ 84.79 ರೂ.ಇದೆ. ಮಂಗಳೂರಿನಲ್ಲಿ (Mangalore)ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದೆ. ಮೈಸೂರಿನಲ್ಲಿ (Mysore)ಪೆಟ್ರೋಲ್ ದರ ಲೀಟರ್ ಗೆ 100.08ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 84.56ರೂ.ಇದೆ. ಪೆಟ್ರೋಲ್ ಬೆಲೆಯಲ್ಲಿ 0.24ರೂ.ಹಾಗೂ ಡೀಸೆಲ್ ದರದಲ್ಲಿ 0.21 ಇಳಿಕೆ ಕಂಡುಬಂದಿದೆ. ಕಲಬುರಗಿಯಲ್ಲಿ(Kalburgi)ಪೆಟ್ರೋಲ್ ಗೆ 100.58ರೂ. ಹಾಗೂ ಡೀಸೆಲ್ ಗೆ 85.04ರೂ.ಇದೆ. ಪೆಟ್ರೋಲ್ ಬೆಲೆಯಲ್ಲಿ 0.47ರೂ.ಹಾಗೂ ಡೀಸೆಲ್ ದರದಲ್ಲಿ 0.42ರೂ. ಇಳಿಕೆಯಾಗಿದೆ. 

ಗ್ರಾಹಕರೇ ಗಮನಿಸಿ, ನಾಳೆ, ನಾಡಿದ್ದು ಇಂಟರ್ನೆಟ್ ಬ್ಯಾಂಕಿಂಗ್ ಸೇವೆ 300 ನಿಮಿಷ ಸ್ಥಗಿತ

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

Bank Holiday:ಮುಂದಿನ ವಾರ ಸತತ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ, ಯಾಕೆ ಗೊತ್ತಾ?

GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ. 

"