ರಫ್ತುದಾರರಿಗೆ ನೆರವು, ಸಮಸ್ಯೆಗಳ ಪರಿಹಾರಕ್ಕೆ 24 ಗಂಟೆಗಳ ಸಹಾಯವಾಣಿ ಗುಣಮಟ್ಟ, ಉತ್ಪಾದಕತೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡ ಕೇಂದ್ರ ಬಲಿಷ್ಠ ಭಾರತ ನಿರ್ಮಾಣಕ್ಕೆ ವಾಣಿಜ್ಯ ಸಪ್ತಾಹ ಕಾರ್ಯಕ್ರಮ  ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ ಸಚಿವ ಪಿಯೂಷ್ ಗೋಯೆಲ್

ನವದೆಹಲಿ(ಸೆ.20): ಭಾರತ ಈಗ ರಫ್ತುವಿನಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಈ ಮೂಲಕ ದೇಶದ ಆರ್ಥಿಕತೆಗೆ ಮಹತ್ವದ ಕೂಡುಗೆ ನೀಡುತ್ತಿದೆ. ಕೊರೋನಾ ಕಠಿಣ ಸಂದರ್ಭದಲ್ಲೂ ಭಾರತದ ರಫ್ತು ಪ್ರಮಾಣದ ಹೆಚ್ಚಳ ಹಾಗೂ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ರಫ್ತುದಾರರಿಗೆ ನೆರವು ಹಾಗೂ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ 24 ಗಂಟೆ ಲಭ್ಯವಿರುವ ಸಹಾಯವಾಣಿ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಸಮಿತಿ ಸದಸ್ಯರ ವಿರೋಧ; ಪೆಟ್ರೋಲ್, ಡೀಸೆಲ್ GST ವ್ಯಾಪ್ತಿಗೆ ಇಲ್ಲ ಎಂದು ನಿರ್ಮಲಾ ಸೀತಾರಾಮನ್!

ಸ್ವಾತಂತ್ರ್ಯ ಸಂಭ್ರಮದ 75ನೇ ವರ್ಷದಲ್ಲಿ ಆಯೋಜಿಸಿರುವ ಆಜಾದಿ ಕಾ ಅಮೃತ್ ಮಹೋತ್ಸವದ ಸ್ಮರಣಾರ್ಥ SEZ NOIDAದಲ್ಲಿ ಆಯೋಜಿಸಿದ್ದ ವಾಣಿಜ್ಯ ಸಪ್ತಾಹದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಈ ನಿರ್ಧಾರ ಪ್ರಕಟಿಸಿದ್ದಾರೆ. 

Scroll to load tweet…

ವಾಣಿಜ್ಯ ಮತ್ತು ಕೈಗಾರಿಕಾ ವಲಯ 7 ದಿನದ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಸಮಾರಂಭದ ಮೊದಲ ದಿನ ಪಿಯೂಷ್ ಗೋಯೆಲ್ ದೇಶದಲ್ಲಿನ ಕೈಗಾರಿಕೆ ಹಾಗೂ ರಫ್ತು ವಲಯವನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಹಲವು ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ರಫ್ತುದಾರರಿಗೆ ಕೊಡುಗೆ; ಎಕ್ಸ್‌ಪೋರ್ಟ್ ಉತ್ತೇಜನಕ್ಕೆ 56,027 ಕೋಟಿ ರೂ ಬಿಡುಗಡೆ ಮುಂದಾದ ಕೇಂದ್ರ!

ಉತ್ತರ ಪ್ರದೇಶವು ಕೈಗಾರಿಕಾ ಬೆಳವಣಿಗೆಯಲ್ಲಿ ಶ್ಲಾಘನೀಯ ಪ್ರಗತಿಯನ್ನು ಸಾಧಿಸಿದೆ ಮತ್ತು ಯುಪಿಯಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ರಫ್ತು ಸುಧಾರಣೆಯು ವ್ಯಾಪಾರ ಮತ್ತು ವ್ಯಾಪಾರವನ್ನು ಸುಲಭ ಮತ್ತು ಸುರಕ್ಷಿತವಾಗಿಸಿದೆ ಎಂದು ಗೋಯೆಲ್ ಹೇಳಿದರು. ಮುಂದಿನ 25 ವರ್ಷಗಳ ಕಾಲ ಜಂಟಿಯಾಗಿ ರಸ್ತೆ ನಕ್ಷೆಯನ್ನು ರಚಿಸುವ ಅಗತ್ಯವಿದೆ. ಭಾರತವನ್ನು ವಿಶ್ವ ನಾಯಕನನ್ನಾಗಿಸಲು ಎಲ್ಲರೂ ಕೊಡುಗೆ ನೀಡಬೇಕು ಎಂದು ಗೋಯೆಲ್ ಹೇಳಿದರು.

Scroll to load tweet…

ಜವಳಿ ಉದ್ಯಮಕ್ಕೆ ಕೇಂದ್ರದ ಟಾನಿ​ಕ್‌: 5 ವರ್ಷದ ಮಟ್ಟಿ​ಗೆ 10,000 ಕೋಟಿ ಪ್ರೋತ್ಸಾಹ ಧನ!

ಸಾಮಾಜಿಕ ಕ್ಷೇತ್ರಗಳಲ್ಲಿನ ಸುಧಾರಣೆಗಳು ಅಭಿವೃದ್ಧಿಯನ್ನು ಆರೋಗ್ಯಕರವಾಗಿಸಿವೆ ಮನೆಗಳಿಗೆ ವಿದ್ಯುತ್, ಅಡುಗೆ ಅನಿಲದ ಲಭ್ಯತೆಯು ದೇಶದ ಕೋಟ್ಯಂತರ ನಾಗರಿಕರ ಜೀವನದ ಮೇಲೆ ಪರಿಣಾಮವನ್ನು ಬೀರಿದೆ ಎಂದು ಗೋಯೆಲ್ ಹೇಳಿದರು.

ವಿಶ್ವದಾದ್ಯಂತ ಗರಿಷ್ಠ ಬೈಕ್ ಮಾರಾಟ; ಭಾರತದ ನಂ.1 ಕಂಪನಿಯಾಗಿ ಹೊರಹೊಮ್ಮಿದ ಬಜಾಜ್!

ಇದೇ ವೇಳೆ ಕೇಂದ್ರ ಸರ್ಕಾರ ರಫ್ತುದಾರರಿಗೆ ನೆರವು ನೀಡಲು ಹಲವು ಕಾರ್ಯಕ್ರಮಗಳನ್ನು ಘೋಷಿಸಿದೆ. ರಾಜ್ಯ ಹಾಗೂ ಜನರ ಸಹಭಾಗಿತ್ವ, ಆತ್ಮನಿರ್ಭರ್ ಭಾರತ್, 739 ಜಿಲ್ಲೆಗಳಲ್ಲಿ ವಾಣಿಜ್ಯ ಉತ್ಸವ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ 35 ರಫ್ತು ಪ್ರಚಾರ ಕಾರ್ಯಕ್ರಮ, ಪ್ರದರ್ಶನಗಳು ಆಯೋಜನೆ ಮಾಡಲಾಗುತ್ತದೆ ಎಂದು ಗೋಯೆಲ್ ಹೇಳಿದರು.

ಇನ್ಫಿ ಈಗ 100 ಶತಕೋಟಿ ಡಾಲರ್‌ ಮೌಲ್ಯದ ಕಂಪನಿ!