ನವದೆಹಲಿ(ಮೇ.02): ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಬಜಾಜ್ ಆಟೊ, ಗಮನಾರ್ಹ ಪ್ರಮಾಣದ ರಫ್ತು ಹೆಚ್ಚಳದೊಂದಿಗೆ ಹಣಕಾಸು ವರ್ಷಕ್ಕೆ (2021-22)   ಉತ್ತಮ ಆರಂಭ ಕಂಡಿದೆ. ಬಜಾಜ್ ಆಟೊ,  2,21,603 ದ್ವಿಚಕ್ರ ವಾಹನಗಳ ರಫ್ತು ಸೇರಿದಂತೆ ವಿಶ್ವದಾದ್ಯಂತ  3,48,173 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ  2021ರ ಏಪ್ರಿಲ್‍ನಲ್ಲಿ ಭಾರತದ ನಂಬರ್ 1 ಮೋಟರ್ ಸೈಕಲ್ ತಯಾರಿಕಾ ಕಂಪನಿಯಾಗಿ ಹೊರಹೊಮ್ಮಿದೆ.

ಆಕರ್ಷಕ ಲುಕ್; ಬಜಾಜ್ ಅಟೋ ಪಲ್ಸರ್ NS 125 ಸ್ಪೋಟ್ರ್ಸ್ ಬೈಕ್ ಬಿಡುಗಡೆ!.

ಭಾರತದಲ್ಲಿ ತಯಾರಾಗುವ ವಾಹನಗಳ  ರಫ್ತು ವಹಿವಾಟಿನಲ್ಲಿ ಮುಂಚೂಣಿಯಲ್ಲಿ ಇರುವ ಬಜಾಜ್ ಆಟೊ, ಕಳೆದ ವರ್ಷ ದೇಶದಿಂದ ರಫ್ತಾಗಿರುವ ಮೋಟರ್‌ಸೈಕಲ್ ಮತ್ತು ತ್ರಿಚಕ್ರ ವಾಹನಗಳಲ್ಲಿ ಶೇ 60ರಷ್ಟು ಪಾಲು ಹೊಂದಿದೆ. 2020-21ರ ಹಣಕಾಸು ವರ್ಷದಲ್ಲಿ, ಬಜಾಜ್ ಆಟೊದ ರಫ್ತು ವರಮಾನವು ರೂ 12,687 ಕೋಟಿಗಳಷ್ಟಿತ್ತು. ಇದರಲ್ಲಿನ ಶೇ . 52ರಷ್ಟು ವಹಿವಾಟು, 79ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಒಳಗೊಂಡಿದೆ. ಕಳೆದ 10 ವರ್ಷಗಳಲ್ಲಿ ಒಟ್ಟು 1.80 ಕೋಟಿಗಳಷ್ಟು ವಾಹನಗಳನ್ನು ರಫ್ತು ಮಾಡಲಾಗಿದೆ. ಜಗತ್ತಿನಾದ್ಯಂತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಲು ಸಿಗುವ ಭಾರತದ ಬ್ರ್ಯಾಂಡ್‍ಗಳಲ್ಲಿ ಬಜಾಜ್ ಒಂದಾಗಿದೆ. ಇದೇ ಕಾರಣಕ್ಕೆ  ಬಜಾಜ್ ಆಟೊ, ‘ವಿಶ್ವದ ಅಚ್ಚುಮೆಚ್ಚಿನ ಭಾರತೀಯ ಬ್ರ್ಯಾಂಡ್’ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯ ಜಾಗತಿಕ ಮಾರಾಟವು ಕಳೆದ ಒಂದು ದಶಕದಲ್ಲಿ ರೂ 1,02,200 ಕೋಟಿ  (14 ಶತಕೋಟಿ ಡಾಲರ್) ಮೊತ್ತದ ವಿದೇಶಿ ವಿನಿಮಯ   ಗಳಿಸಿದೆ.

2001ರಲ್ಲಿ ಪಲ್ಸರ್ ಬೈಕ್ ಪ್ರಾರಂಭಿಸುವುದರೊಂದಿಗೆ ಬಜಾಜ್ ಆಟೊ ಭಾರತದಲ್ಲಿ ಸ್ಪೋರ್ಟ್ಸ್ ಮೋಟರ್ ಸೈಕ್ಲಿಂಗ್ ವಿಭಾಗವನ್ನು ಪರಿಚಯಿಸಿದ ಮೊದಲ ಕಂಪನಿಯಾಗಿತ್ತು. ಅಲ್ಲಿಂದಾಚೆಗೆ ಬಜಾಜ್ ಆಟೊ,  ಭಾರತದಲ್ಲಿ ಮತ್ತು ಹಲವಾರು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಮುಂಚೂಣಿ ಸ್ಥಾನಗಳಲ್ಲಿ ಮುಂದುವರೆದಿದೆ. 2020-21ನೇ ಹಣಕಾಸು ವರ್ಷವೊಂದರಲ್ಲಿಯೇ ಬಜಾಜ್ ಆಟೊ, ಜಾಗತಿಕವಾಗಿ 12.5  ಲಕ್ಷ   ಪಲ್ಸರ್ ಬೈಕ್‍ಗಳನ್ನು ಮಾರಾಟ ಮಾಡಿದೆ. ಬಜಾಜ್ ಆಟೊ  ರಫ್ತಿನ ಶೇ 80ಕ್ಕಿಂತಲೂ ಹೆಚ್ಚಿನ ಪಾಲು    ಕಂಪನಿಯು ನಂ 1 ಅಥವಾ ನಂ 2 ಸ್ಥಾನ ಹೊಂದಿರುವ ಮಾರುಕಟ್ಟೆಗಳಿಂದ ಬರುತ್ತಿದೆ.

ಹೊಸ ತಂತ್ರಜ್ಞಾನ, ಕೈಗೆಟುಕುವ ದರ; ಬಜಾಜ್ ಪಲ್ಸಾರ್ 180 ಬಿಡುಗಡೆ!

ಹಲವಾರು ಸವಾಲುಗಳ  ಹೊರತಾಗಿಯೂ ನಾವು   2021-22ನೇ ಹಣಕಾಸು ವರ್ಷವನ್ನು   ಅತ್ಯಂತ ಸಕಾರಾತ್ಮಕ ವಹಿವಾಟಿನಿಂದ ಪ್ರಾರಂಭಿಸಿದ್ದೇವೆ. ನಾವು ತಯಾರಿಸುವÀ ವ್ಯಾಪಕ ಶ್ರೇಣಿಯ ಮೋಟರ್ ಸೈಕಲ್‍ಗಳು ಮೊದಲ ಬಾರಿಗೆ ಖರೀದಿಸುವವರು / ಅಗ್ಗದ ವಾಹನಗಳಳು (ಎಂಟ್ರಿ ಲೆವೆಲ್), ಮಧ್ಯಮ ದರ್ಜೆಯ ಮತ್ತು ಪ್ರೀಮಿಯಂ ಮಟ್ಟದ ವಿಭಾಗಗಳು ಸೇರಿದಂತೆ  ಬೈಕ್‍ಗಳ ಸಂಪೂರ್ಣ ಶ್ರೇಣಿಯನ್ನು   ಒಳಗೊಂಡಿವೆ.  ಆಫ್ರಿಕಾದಲ್ಲಿನ ಮೋಟೊ ಟಾಕ್ಸಿ ಚಾಲಕರು ಸೇರಿದಂತೆ ಯುರೋಪಿನ ಸಾಹಸ ಅನ್ವೇಷಕರ ಜತೆ ತೊಡಗಿಸಿಕೊಳ್ಳಲು ಇವು ನಮಗೆ ಅನುವು ಮಾಡಿಕೊಡುತ್ತವೆÉ! ಸದ್ಯದ ತೀವ್ರ ಏರಿಳಿತದ ಮತ್ತು ಅನಿಶ್ಚಿತತೆಯ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಮತ್ತು ನಮ್ಮ ಎಲ್ಲ ಪಾಲುದಾರರ ವ್ಯವಹಾರದ ಚಕ್ರಗಳು ಪ್ರಗತಿಪಥದಲ್ಲಿ ಚಲಿಸುವಂತೆ ಮಾಡುವಲ್ಲಿ ನಮ್ಮ ಈ ಬಹುಬಗೆಯ ವಾಹನಗಳು ಅಪಾರ ಕೊಡುಗೆ ನೀಡುತ್ತಿವೆ ಎಂದು  ಬಜಾಜ್ ಆಟೊದ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ  ಹೇಳಿದರು.

ಬಜಾಜ್ ಆಟೊ ತನ್ನ ಬಹು ಜನಪ್ರಿಯ ಬ್ರ್ಯಾಂಡ್ ಚೇತಕ್ ಅನ್ನು ಕಳೆದ ವರ್ಷ ಪ್ರೀಮಿಯಂ, ಸ್ಟೈಲಿಶ್ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊಸ ರೂಪ ನೀಡಿತ್ತು. ಚೇತಕ್ ಖರೀದಿಸುವ ಬುಕಿಂಗ್ ಅನ್ನು ಇತ್ತೀಚೆಗೆ ಪುನಃ ಆರಂಭಿಸಲಾಗಿತ್ತು.  ಪುಣೆ ಮತ್ತು ಬೆಂಗಳೂರಿನಲ್ಲಿ 36 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮುಂಗಡ ಕಾಯ್ದಿರಿಸುವಿಕೆಯು ಸಂಪೂರ್ಣವಾಗಿ ಮಾರಾಟವಾಗಿತ್ತು. ಮುಂಬರುವ ವರ್ಷಗಳಲ್ಲಿ ಇನ್ನೂ 24 ನಗರಗಳಿಗೆ ತನ್ನ ವಹಿವಾಟನ್ನು ವಿಸ್ತರಿಸಲು ಕಂಪನಿಯು ಯೋಜಿಸಿದೆ.

ಬಜಾಜ್ ಆಟೊ, ಕೆಟಿಎಂ ಎಜಿ ಜತೆಗೆ ಅತ್ಯಂತ ಯಶಸ್ವಿ ಪಾಲುದಾರಿಕೆ ಹೊಂದಿದೆ. ಕೆಟಿಎಂನ ವಾರ್ಷಿಕ ಜಾಗತಿಕ ಮಾರಾಟದ ಸುಮಾರು ಶೇ 50ರಷ್ಟನ್ನು    ಕೆಟಿಎಂ ಮತ್ತು ಬಜಾಜ್ ಜಂಟಿಯಾಗಿ ವಿನ್ಯಾಸಗೊಳಿಸಿವೆ.  ಬಜಾಜ್ ಆಟೊದ ಅತ್ಯಾಧುನಿಕ ಚಕನ್   ಘಟಕದಲ್ಲಿ ಕೆಟಿಎಂ ಎಜಿ ವಾಹನಗಳನ್ನು ತಯಾರಿಸಲಾಗುತ್ತದೆ. ಈ ಯಶಸ್ವಿ ಸಹಭಾಗಿತ್ವದ ಫಲವಾಗಿಯೇ ಕೆಟಿಎಂ,  ವಿಶ್ವದ ನಂಬರ್ 1 ಪ್ರೀಮಿಯಂ ಸ್ಪೋಟ್ರ್ಸ್ ಮೋಟಾರ್‍ಸೈಕಲ್ ಬ್ರ್ಯಾಂಡ್ ಆಗಿದೆ.

ವಿಶ್ವದಾದ್ಯಂತ ತನ್ನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ  ಪೂರೈಸಲು, ಬಜಾಜ್ ಆಟೊ, ತನ್ನ ಪ್ರೀಮಿಯಂ ಮೋಟಾರ್‍ಸೈಕಲ್ ಬ್ರ್ಯಾಂಡ್   ಮತ್ತು ಚೇತಕ್ ವಿದ್ಯುತ್‍ಚಾಲಿತ ಸ್ಕೂಟರ್‍ಗಾಗಿ ಮಹಾರಾಷ್ಟ್ರದ ಚಕನ್‍ನಲ್ಲಿ ನಿರ್ಮಿಸಲಿರುವ ನಾಲ್ಕನೇ ಘಟಕÀದಲ್ಲಿ ರೂ 650 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡುವುದಾಗಿ ಇತ್ತೀಚೆಗೆ ಪ್ರಕಟಿಸಿದೆ.
ಬಜಾಜ್ ಆಟೊ,  ಮೋಟಾರ್ ಸೈಕಲ್‍ಗಳ ತಯಾರಿಕೆಯಲ್ಲಿ ವಿಶ್ವದ 3 ನೇ ಅತಿದೊಡ್ಡ ಮತ್ತು ತ್ರಿಚಕ್ರ ವಾಹನಗಳ ಅತಿದೊಡ್ಡ ತಯಾರಿಕಾ ಕಂಪನಿಯಾಗಿದೆ. ರೂ 1,10,864 ಕೋಟಿ ಮೊತ್ತದ  ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಯು,  ‘ವಿಶ್ವದ ಅತ್ಯಂತ ಮೌಲ್ಯಯುತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ' ಆಗಿ ಮುಂದುವರೆದಿದೆ. ಈ ಮಾರುಕಟ್ಟೆ ಮೌಲ್ಯವು ಭಾರತದಲ್ಲಿನ ಎರಡನೆ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಿಂತ ಎರಡು ಪಟ್ಟು ಹೆಚ್ಚಾಗಿದೆ.