Asianet Suvarna News Asianet Suvarna News

ರಫ್ತುದಾರರಿಗೆ ಕೊಡುಗೆ; ಎಕ್ಸ್‌ಪೋರ್ಟ್ ಉತ್ತೇಜನಕ್ಕೆ 56,027 ಕೋಟಿ ರೂ ಬಿಡುಗಡೆ ಮುಂದಾದ ಕೇಂದ್ರ!

  • ರಫ್ತುದಾರರಿಗೆ ಉತ್ತೇಜನ ನೀಡಲು ವಿಶೇಷ ಅನುದಾನ ಯೋಜನೆ
  • 56,027 ಕೋಟಿ ರೂಪಾಯಿ ಬಿಡುಗಡೆ ಮುಂದಾದ ಕೇಂದ್ರ ಸರ್ಕಾರ
  • ಇನ್ನಷ್ಟು ತ್ವರಿತ ರಫ್ತು ಬೆಳವಣಿಗೆಗೆ ಕೇಂದ್ರದಿಂದ ಮಹತ್ವದ ಹೆಜ್ಜೆ
Government Provides Big Boost to Exporters Rs 56 027 crore to release under Export Promotion Schemes ckm
Author
Bengaluru, First Published Sep 9, 2021, 6:31 PM IST

ನವದೆಹಲಿ(ಸೆ.08): ಭಾರತದ ರಫ್ತು ವಲಯಕ್ಕೆ ಹೊಸ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ಕೆಲ ತಿಂಗಳುಗಳಿಂದ ಭಾರತದ ರಫ್ತು ವಲಯ ತ್ವರಿತ ಬೆಳವಣಿಗೆ ಕಂಡಿದೆ. ಮುಂದಿನ ದಿನಗಲ್ಲಿ ಈ ಅಭಿವೃದ್ಧಿ ಹಾಗೂ ಆದಾಯದ ಮೂಲವನ್ನು ವೃದ್ಧಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಫ್ತುದಾರರಿಗೆ ಬಾಕಿ ಇರುವ ರಫ್ತು ಪ್ರೋತ್ಸಾಹಕ ಧನ ವಿತರಿಸಲು ಕೇಂದ್ರ ಸರ್ಕಾರ 56,027 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ.

ಜವಳಿ ಉದ್ಯಮಕ್ಕೆ ಕೇಂದ್ರದ ಟಾನಿ​ಕ್‌: 5 ವರ್ಷದ ಮಟ್ಟಿ​ಗೆ 10,000 ಕೋಟಿ ಪ್ರೋತ್ಸಾಹ ಧನ!

ಈ ಹಣಕಾಸು ವರ್ಷದಲ್ಲಿ( 2021-22ರ ಸಾಲು) ಕೇಂದ್ರ ಸರ್ಕಾರ   56,027 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ಇದರಿಂದ  45,000ಕ್ಕೂ ಹೆಚ್ಚು ರಫ್ತುದಾರರಿಗೆ ಪ್ರಯೋಜನವಾಗಲಿದೆ. ಇದರಲ್ಲಿ ಶೇಕಡಾ 98ರಷ್ಟು MSME ಕೆಟಗರಿಯ  ಸಣ್ಣ ರಫ್ತುದಾರರು ಒಳಗೊಂಡಿದ್ದಾರೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿರುವ ರಫ್ತು ಪ್ರೋತ್ಸಾಹಕ ಮೊತ್ತ  ವಿವಿಧ ರಫ್ತು ಉತ್ತೇಜನ ಮತ್ತು ಪರಿಹಾರ ಯೋಜನೆಗಳಿಗೆ ನೀಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ MEIS ಸೆಕ್ಟರ್‌ಗೆ 33,010 ಕೋಟಿ ರೂಪಾಯಿ, SEIS ಸೆಕ್ಟರ್‌ಗೆ 10,002 ಕೋಟಿ ರೂಪಾಯಿ,  RoSCTL ಸೆಕ್ಟರ್‌ಗೆ 5,286 ಕೋಟಿ ರೂಪಾಯಿ, RoSL ಸೆಕ್ಟರ್‌ಗೆ 330 ಕೋಟಿ ರೂಪಾಯಿ,  RoDTEP ಸೆಕ್ಟರ್‌ಗೆ 2,568 ಕೋಟಿ ರೂಪಾಯಿ, ಇನ್ನು ಟಾರ್ಗೆಟ್ ಪ್ಲಸ್ ಸೇರಿ ಇತರ ಯೋಜನೆಗಳಿಗೆ 4,831 ಕೋಟಿ ರೂಪಾಯಿ ವಿತರಿಸಲಾಗುವುದು. ಇದರಲ್ಲಿ 12,454 ಕೋಟಿ ರೂಪಾಯಿ ಸುಂಕ ಮನ್ನಾ ಮೊತ್ತ ಹಾಗೂ . 6,946 ಕೋಟಿ ರೂಪಾಯಿ ಪ್ರಸಕ್ತ ಹಣಕಾಸು ವರ್ಷದ ರಫ್ತುಗೆ ಘೋಷಿಸಲಾಗಿದೆ.

ಆಕಾಶ್‌ ಕ್ಷಿಪಣಿ ವ್ಯವಸ್ಥೆ ರಫ್ತಿಗೆ ಕೇಂದ್ರ ಅಸ್ತು!

ಭಾರತ ಹಂತ ಹಂತವಾಗಿ ರಫ್ತು ಕ್ಷೇತ್ರದಲ್ಲಿ ಬೆಳವಣಿಗೆಯಾತುತ್ತಿದೆ. ಎಪ್ರಿಲ್ ಹಾಗೂ ಆಗಸ್ಟ್ ತಿಂಗಳ ಸರಕು ರಫ್ತು ಮೊತ್ತ ಸುಮಾರು 165 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. 2020-21ಕ್ಕೆ ಹೋಲಿಸಿದರೆ ಈ ಬಾರಿ ಶೇಕಡಾ 67ರಷ್ಟು ಏರಿಕೆ ಕಂಡಿದೆ. ಇನ್ನು 2019-20ಕ್ಕೆ ಹೋಲಿಸಿದರೆ ಶೇಕಡಾ 23 ರಷ್ಟು ಬೆಳವಣಿಗೆಯಾಗಿದೆ. ಹೀಗಾಗಿ ಬಾಕಿ ಇರುವ ಎಲ್ಲಾ ರಫ್ತು ಪ್ರೋತ್ಸಾಹಕ ಮೊತ್ತ ವಿತರಣೆ ಮಾಡಲು ಕೇಂದ್ರ ಮುಂದಾಗಿದೆ. ಇದರಿಂದ ಮುಂದಿನ ತಿಂಗಳಿನಿಂದ ರಫ್ತು ಕ್ಷೇತ್ರದಲ್ಲಿ ಮತ್ತಷ್ಟು ಏರಿಕೆಯಾಗುವದಲ್ಲಿ ಯಾವುದೇ ಅನುಮಾನವಿಲ್ಲ.

ಕೊರೋನಾ ವಕ್ಕರಿಸಿದ ಬಳಿಕ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗೆ ಹೆಚ್ಚಿನ ಉತ್ತೇಜನ ಸಿಕ್ಕಿದೆ. ಇದರಿಂದ ಭಾರತ ಇದೀಗ ರಫ್ತು ಕ್ಷೇತ್ರದಲ್ಲಿ ಗಣನೀಯ ಏರಿಕೆ ದಾಖಲಿಸಿದೆ. MEIS ಅಡಿಯಲ್ಲಿ ಸರಕುಗಳಾದ ಔಷಧ, ಕಬ್ಬಿಣ, ಉಕ್ಕು, ಎಂಜಿನಿಯರಿಂಗ್, ರಾಸಾಯನಿಕ, ಮೀನುಗಾರಿಕೆ, ಕೃಷಿ, ಆಟೋ, ಸೇರಿದಂತೆ ಹಲವು ಕ್ಷೇತ್ರಗಳ ಸರಕುಗಳನ್ನು ರಫ್ತು ಮಾಡಲಾಗುತ್ತಿದೆ. ಈ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಗದು ಹರಿವನ್ನು ಕಾಪಾಡಿಕೊಳ್ಳಲು ಹಾಗೂ ರಫ್ತು ಬೇಡಿಕೆ ಪೂರೈಸಲು ಕೇಂದ್ರದ ಮಹತ್ವದ ನಿರ್ಧಾರ ನೆರವಾಗಲಿದೆ.

ಕೇಂದ್ರದ ಹೊಸ ಯೋಜನೆಯಿಂದ ಸರ್ವೀಸ್ ಸೆಕ್ಟರ್ ರಫ್ತು, ಪ್ರಯಾಣ, ಪ್ರವಾಸೋದ್ಯಮ ಮತ್ತ ಆತಿಥ್ಯ ವಿಭಾಗಗಳನ್ನು ಸೇರಿದಂತೆ 2019-2020ರ ಸಾಲಿನ SEIS ಪ್ರಯೋಜನ ಪಡೆಯಲು ನೆರವಾಗುತ್ತದೆ. ಇದಕ್ಕಾಗಿ  2061 ಕೋಟಿ ರೂಪಾಯಿ ಒದಗಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯು ಹೆಚ್ಚಾಗಲಿದೆ. 

Follow Us:
Download App:
  • android
  • ios