ಸಾರ್ವಜನಿಕ ವಲಯದಲ್ಲಿ ಮುಂಚೂಣಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ 2021ರ ಸೆಪ್ಟಂಬರ್‌ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 1,333ಕೋಟಿ ರು. ನಿವ್ವಳ ಲಾಭ

ಬೆಂಗಳೂರು (ಅ.27): ಸಾರ್ವಜನಿಕ ವಲಯದಲ್ಲಿ ಮುಂಚೂಣಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ (Canara Bank) 2021ರ ಸೆಪ್ಟಂಬರ್‌ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 1,333ಕೋಟಿ ರು. ನಿವ್ವಳ ಲಾಭ (Profit) ಗಳಿಸುವ ಮೂಲಕ ಈ ವರ್ಷ ಶೇ.200.22ರಷ್ಟುಪ್ರಗತಿ ಸಾಧಿಸಿದೆ ಎಂದು ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಎಲ್‌.ವಿ.ಪ್ರಭಾಕರ್‌ (LV prabhakar) ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2020ರ ಇದೇ ಅವಧಿಯಲ್ಲಿ 444 ಕೋಟಿ ರು. ನಿವ್ವಳ ಲಾಭ ಗಳಿಸಿದ್ದ ಬ್ಯಾಂಕ್‌ (Bank) ಈ ವರ್ಷ ಅದನ್ನು ಅತ್ಯಧಿಕ ಮಟ್ಟದಲ್ಲಿ ವೃದ್ಧಿಸಿಕೊಂಡಿದೆ. ಜಾಗತಿಕ ವ್ಯವಹಾರದ ಲಾಭದಲ್ಲೂ ಕೂಡ ಬ್ಯಾಂಕ್‌ ಮುಂದಿದ್ದು, ಒಟ್ಟು 17,15,000 ಕೋಟಿಗೂ ಹೆಚ್ಚು ಜಾಗತಿಕ ವ್ಯವಹಾರ ನಡೆಸಿ ಶೇ.7.61ರಷ್ಟುಲಾಭ ಗಳಿಸಿದೆ ಎಂದರು.

11 ಬ್ಯಾಂಕುಗಳ 7855 ಹುದ್ದೆಗಳಿಗೆ IBPS ನೇಮಕಾತಿ, ಅರ್ಜಿ ಸಲ್ಲಿಸಿ

ಪ್ರಸ್ತುತ ವರ್ಷದ ಹಣಕಾಸು ಕಾರ್ಯಾಚರಣೆಯಲ್ಲಿ 5,604 ಕೋಟಿ ರು. ಲಾಭ ಪಡೆಯುವ ಮೂಲಕ ಶೇ. 21.91 ಬೆಳವಣಿಗೆ ಹೊಂದಿದೆ. ಗ್ರಾಹಕರಿಗೆ (Customers )ವಿವಿಧ ಬಗೆಯ ಅಗತ್ಯ ಸಾಲ ಸೌಲಭ್ಯ ಒದಗಿಸುವ ಕೆನರಾ ಬ್ಯಾಂಕ್‌ ಸಾಲ (Loan) ವಸೂಲಾತಿ, ನಗದು ರೂಪದ ಹಣ ಸಂಗ್ರಹ, ಬಡ್ಡಿಯೇತರ ಆದಾಯ, ಚಾಲ್ತಿ, ಮತ್ತು ಉಳಿತಾಯ ಠೇವಣಿಯ ಆದಾಯ ಗಳಿಕೆಯಲ್ಲಿ ಸಹ ಬ್ಯಾಂಕ್‌ ಮುಂದಿದೆ.

ಬಡ್ಡಿಯೇತರ ಆದಾಯದಲ್ಲಿ ಶೇ.37.54 ಹಾಗೂ ನಗದು ವಸೂಲಾತಿಯಲ್ಲಿ ಶೇ. 90.32 ರಷ್ಟುಬೆಳವಣಿಗೆ ಆಗಿದೆ. ಕೇವಲ ಉಳಿತಾಯ ಠೇಣಿಗಳಿಂದಲೇ ಶೇ.12.17 ರಷ್ಟುಅಧಿಕ ಲಾಭ ಗಳಿಸಿದೆ. ಇನ್ನು ರಿಟೇಲ್‌ ಸಾಲ (ಶೇ.10.46), ಗೃಹ ಸಾಲದಲ್ಲೂ (Home loan) (ಶೇ.14.21) ಅಭಿವೃದ್ಧಿ ಹೊಂದಿದ್ದೇವೆ ಎಂದರು.

ಕೊರೋನಾ ನಡುವೆಯೂ 2020​​-21ರಲ್ಲಿ ಕೆನರಾ ಬ್ಯಾಂಕ್‌ಗೆ ಭರ್ಜರಿ ಲಾಭ

ರಿಟೇಲ್‌, ಕೃಷಿ, ಎಂಎಸ್‌ಎಂಇ (MSME) ಕ್ಷೇತ್ರಗಳಿಗೆ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಒಟ್ಟಾರೆ ಈ ಕ್ಷೇತ್ರಗಳಿಗೆ ನೀಡಿರುವ ಮುಂಗಡ ಸಾಲದ ಪ್ರಮಾಣ ಶೇ.56.90 ರಷ್ಟಿದೆ. ನಿವ್ವಳ ನಿಷ್ಕಿ್ರಯ ಆಸ್ತಿಗಳ ಅನುಪಾತ 21ಬಿಪಿಎಸ್‌ ರಷ್ಟುಆಗಿದ್ದು, 3.21ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ಈ ವರ್ಷ ಬ್ಯಾಂಕ್‌ ಅಧಿಕ ಲಾಭದ ಮೂಲಕ ಪ್ರಗತಿ ಹೊಂದಿದೆ ಎಂದು ವಿವರಿಸಿದರು.

ಸೇಫೆಸ್ಟ್ ಬ್ಯಾಂಕ್ ಪಟ್ಟ

ಬ್ಯಾಂಕಿಗ್‌ ವ್ಯವಸ್ಥೆ ಹಾಗೂ ಗಾತ್ರದ ದೃಷ್ಟಿಯಿಂದ ಮಹತ್ವದ್ದಾಗಿರುವ ಅಗ್ರ ಬ್ಯಾಂಕುಗಳ ಪಟ್ಟಿಯಲ್ಲಿ ಕೆನರಾ ಬ್ಯಾಂಕ್‌ ಕೂಡ ಸೇರ್ಪಡೆ ಆಗುವ ಸಾಧ್ಯತೆ ಇದೆ. ಆರ್‌ಬಿಐನ ಅಗ್ರ ಬ್ಯಾಂಕುಗಳ ಪಟ್ಟಿಯಲ್ಲಿ ಸದ್ಯ ಎಸ್‌ಬಿಐ, ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕುಗಳಿವೆ. 

ಈ ಬ್ಯಾಂಕುಗಳು ಕಾರ್ಯನಿರ್ವಹಣೆಗೆ ದೊಡ್ಡ ಮಟ್ಟದ ಬಂಡವಾಳವನ್ನು ಹೊಂದಿರುವ ಕಾರಣ ಹಾಗೂ ಬಂಡವಾಳವನ್ನು ಆಕರ್ಷಿಸುವ ಸಾಮರ್ಥ್ಯ ಇರುವ ಕಾರಣ ಪತನಗೊಳ್ಳುವ ಸಾಧ್ಯತೆ ಇಲ್ಲ. ಈ ಬ್ಯಾಂಕುಗಳ ಮೇಲೆ ಜನರು ನಂಬಿಕೆ ಇಡಬಹುದಾಗಿದೆ.

ಕಳೆದ 2 ವರ್ಷ​ಗ​ಳಿಂದ ಒಂದೇ ಒಂದು 2000 ಮುಖ​ಬೆ​ಲೆ​ಯ ನೋಟು ಮುದ್ರಿ​ಸಿ​ಲ್ಲ: ಕೇಂದ್ರ! ...

 ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದಿಂದಾಗಿ ಬ್ಯಾಂಕ್‌ ಆಫ್‌ ಬರೋಡಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕುಗಳು ಗಾತ್ರದಲ್ಲಿ ಕ್ರಮವಾಗಿ 3,4, ಮತ್ತು 5ನೇ ಸ್ಥಾನವನ್ನು ಅಲಂಕರಿಸಿದ್ದು, ಐಸಿಐಸಿಐ ಬ್ಯಾಂಕ್‌ನ್ನು 6ನೇ ಸ್ಥಾನಕ್ಕೆ ತಳ್ಳಿವೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ವ್ಯವಸ್ಥಿತ ಬ್ಯಾಂಕುಗಳ ಪಟ್ಟಿಯನ್ನು ಪರಿಷ್ಕೃರಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.