Asianet Suvarna News Asianet Suvarna News

Business Idea: ಯೋಗ ಕಲಿತು ಆರೋಗ್ಯದ ಜತೆ ಆದಾಯ ಗಳಿಸಿ

How to start a yoga Business | ಯೋಗ ಕಲಿತ್ರೆ ನಷ್ಟವೇನಿಲ್ಲ. ಇದು ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ ಬೇರೆಯವರಿಗೆ ಕಲಿಸಿ ನೀವು ಆದಾಯ ಕೂಡ ಮಾಡಬಹುದು. ಎರಡೂ ಆಗಲ್ಲ ಎನ್ನುವವರು ಯೋಗಕ್ಕೆ ಬೇಕಾದ ವಸ್ತುಗಳನ್ನು ಮಾರಾಟ ಮಾಡಿಯೂ ಗಳಿಕೆ ಶುರು ಮಾಡಬಹುದು.

Business Idea Yoga Center
Author
First Published Jan 28, 2023, 10:59 AM IST

ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವ ಅವಶ್ಯಕತೆಯಿದೆ. ನಿತ್ಯದ ಕೆಲಸದಲ್ಲಿ ಜನರ ಆರೋಗ್ಯ ಹದಗೆಡುತ್ತಿದೆ. ಕೊರೊನಾ ನಂತ್ರ ರೋಗ ನಿರೋಧಕ ಶಕ್ತಿ ಮಹತ್ವ ಜನರ ಅರಿವಿಗೆ ಬಂದಿದೆ. ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿಡಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜನರು ಯೋಗದ ಮೊರೆ ಹೋಗ್ತಿದ್ದಾರೆ. ಸ್ವಂತ ಉದ್ಯೋಗ ಮಾಡಲು ಬಯಸುವವರು ಯೋಗ ಕಲಿತಿದ್ರೆ ಅದ್ರಿಂದಲೂ ಗಳಿಕೆ ಶುರು ಮಾಡಬಹುದು. ನಾವಿಂದು ಯೋಗ ಸೆಂಟರ್ ತೆರೆಯೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ. ಯೋಗ (Yoga) ಕೇಂದ್ರ ತೆರೆಯಲು ನಗರ ಪ್ರದೇಶವೆ ಆಗ್ಬೆಕೆಂದೇನಿಲ್ಲ. ನೀವು ಹಳ್ಳಿ (Village) ಗಳಲ್ಲಿ ಕೂಡ ಯೋಗ ಕೇಂದ್ರ ಶುರು ಮಾಡಬಹುದು. ಭಾರತದಲ್ಲಿ ಹುಟ್ಟಿದ ಯೋಗಕ್ಕೆ ಅಂತರಾಷ್ಟ್ರೀಯ ಮನ್ನಣೆಯಿದೆ. ಅಂತಾರಾಷ್ಟ್ರೀಯ (International) ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ.

ಯೋಗ ಕೇಂದ್ರ ತೆರೆಯಲು ಅರ್ಹತೆ: ಯೋಗ ಕೇಂದ್ರ ತೆರೆಯಲು   ಯೋಗ ತರಬೇತಿ ಪಡೆಯುವುದು ಅಗತ್ಯವಿದೆ. ಈಗ ಅನೇಕ ಕಡೆ ಯೋಗ ಶಿಕ್ಷಕರ ತರಬೇತಿ ಕೋರ್ಸ್ ನಡೆಯುತ್ತದೆ. ಅದ್ರಲ್ಲಿ ಪಾಲ್ಗೊಂಡು ಯೋಗ ಕಲಿತ ನಂತ್ರ ನೀವು ಯೋಗ ತರಬೇತಿ ಕೇಂದ್ರವನ್ನು ಶುರು ಮಾಡಬಹುದು. ಯೋಗದ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ನೀವು ಈಗಾಗಲೇ ಈ ಅರ್ಹತೆ ಪಡೆದಿದ್ದರೆ  ನಿಮ್ಮ ಮನೆಯಲ್ಲಿಯೇ ಯೋಗ ಶುರು ಮಾಡಬಹುದು. ದೊಡ್ಡದಾಗಿ ಶುರು ಮಾಡ್ತೇನೆ ಎನ್ನುವವರು ಬಾಡಿಗೆ ಜಾಗ ಪಡೆದು ಅಲ್ಲಿ ಯೋಗ ಕಲಿಸಬಹುದು.

ಯೋಗದಿಂದ ಹಣ ಗಳಿಕೆ: ಈಗಿನ ದಿನಗಳಲ್ಲಿ ಯೋಗಕ್ಕೆ ಹೆಚ್ಚಿನ ಬೇಡಿಕೆಯಿದೆ. ಯೋಗ ಕಲಿಸುವ ಜೊತೆಗೆ ನೀವು ಆನ್ಲೈನ್ ಯೋಗ ತರಗತಿ, ಯೋಗ ಸ್ಟುಡಿಯೋ, ಯೋಗಕ್ಕೆ ಸಂಬಂಧಿಸಿದ ಲೇಖನ, ಯೋಗದ ಬ್ಲಾಗ್, ಯೋಗಕ್ಕೆ ಸಂಬಂಧಿಸಿದ ಬಟ್ಟೆ ವ್ಯಾಪಾರ, ಯೋಗ ಪ್ರವಾಸ ಹೀಗೆ ಅನೇಕ ಕಾರ್ಯಗಳನ್ನು ಮಾಡುವ ಹಣ ಸಂಪಾದನೆ ಮಾಡಬಹುದು. 

ಶಾಲೆಗಳಲ್ಲಿ ತರಬೇತಿ: ನೀವು ಬಯಸಿದ್ರೆ ಶಾಲೆಗಳಲ್ಲಿ ಕೂಡ ಯೋಗ ತರಗತಿ ನಡೆಸಬಹುದು. ಕೆಲವೊಮ್ಮೆ ಉಚಿತ ತರಬೇತಿ ನೀಡುವ ಮೂಲಕ ನೀವು ಪ್ರಚಾರ ಮಾಡಬೇಕಾಗುತ್ತದೆ. ಯೋಗ ಹಾಗೂ ಧ್ಯಾನದಲ್ಲಿ ನೀವು ಪರಿಣಿತರಾಗಿದ್ದರೆ ಕಲಿಕೆ ಸುಲಭವಾಗುತ್ತದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಕ್ಲಾಸಿನ ಬಗ್ಗೆ ಜಾಹೀರಾತು ನೀಡಬೇಕು. ನಿಮ್ಮ ಸುತ್ತಮುತ್ತಲಿನ ಜನರಿಗೆ ನೀವು ಹೇಳಬೇಕು. ಆನ್ಲೈನ್ ತರಗತಿಗೆ ಹೆಚ್ಚು ಬೇಡಿಕೆ ಇರುವ ಕಾರಣ ನೀವು ಹಳ್ಳಿಯಲ್ಲಿ ಕುಳಿತು ಪಟ್ಟಣದ ಜನರಿಗೆ ತರಬೇತಿ ನೀಡಬಹುದು.

ಎಲ್ಐಸಿ ಹೊಸ ಬಿಮಾ ಬಚತ್ ಪ್ಲ್ಯಾನ್; ತಿಂಗಳಿಗೆ 1,791ರೂ. ಹೂಡಿಕೆ ಮಾಡಿದ್ರೆ 5ಲಕ್ಷ ರೂ. ರಿಟರ್ನ್

ಯೋಗ ಕೇಂದ್ರಕ್ಕೆ ನೋಂದಣಿ: ಯೋಗ ತರಗತಿಯನ್ನು ನಡೆಸಲು ನಿಮಗೆ ಯಾವುದೇ ರೀತಿಯ ನೋಂದಣಿ ಅಗತ್ಯವಿಲ್ಲ. ನೀವು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ತರಬೇತಿ ಹಾಗೂ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡಲು ಬಯಸಿದ್ರೆ ಕೇಂದ್ರದ ಹೆಸರು ನೋಂದಾಯಿಸಬೇಕಾಗುತ್ತದೆ. ಸರ್ಕಾರಿ ಅಧಿಕಾರಿಗಳಿಂದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ.

ಯೋಗ ಕೇಂದ್ರಕ್ಕೆ ಹೂಡಿಕೆ: ಯೋಗ ತರಗತಿ ಕೇಂದ್ರ ನಡೆಸಲು  ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಕೆಲಸವನ್ನು ಸಣ್ಣ ಪ್ರಮಾಣದಲ್ಲಿ ಮಾಡುತ್ತಿದ್ದರೆ, ಯಾವುದೇ ಆರಂಭಿಕ ಹೂಡಿಕೆ ಮಾಡುವ ಅಗತ್ಯವಿಲ್ಲ. ತರಗತಿಗೆ ಬರುವ ಜನರಿಗೆ ಅನುಕೂಲಮಾಡಿಕೊಡಲು ನೀವು ಉತ್ತಮ ಮ್ಯಾಟ್, ನೀರು, ಆಯುರ್ವೇದ ಟೀ, ಯೋಗಕ್ಕೆ ಅಗತ್ಯವಿರುವ ಇನ್ನಿತರ ವಸ್ತುಗಳನ್ನು ವ್ಯವಸ್ಥೆ ಮಾಡಲು ಸ್ವಲ್ಪ ಪ್ರಮಾಣದಲ್ಲಿ ಹಣ ಹೂಡಬೇಕಾಗುತ್ತದೆ. 

Business Ideas: ಬಾಯಿ ಚಪ್ಪರಿಸಿ ತಿನ್ನುವ ಫಾಸ್ಟ್‌ ಫುಡ್‌ ಬ್ಯುಸಿನೆಸ್‌ ಮಾಡಿ ಹಣ ಗಳಿಸಿ

ಯೋಗ ಕೇಂದ್ರದಿಂದ ಲಾಭ: ನೀವು ಹೇಗೆ ಯೋಗ ಕಲಿಸುತ್ತೀರಿ ಎಂಬುದನ್ನು ಇದು ಅವಲಂಭಿಸಿದೆ. ಹೆಚ್ಚು ಪ್ರಚಾರ ಮಾಡಿ, ಹೆಚ್ಚು ಜನರನ್ನು ನೀವು ಸೆಳೆದ್ರೆ ಹಾಗೆ ಜನರ ನೋವಿಗೆ ಸ್ಪಂದಿಸಿದ್ರೆ, ಅವರ ರೋಗಕ್ಕೆ ಯೋಗದಿಂದ ಪರಿಹಾರ ಸಿಕ್ಕುವಂತಾದ್ರೆ ನಿಮ್ಮ ಕ್ಲಾಸಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಇದ್ರಿಂದ ನೀವು ಹೆಚ್ಚು ಲಾಭ ಪಡೆಯಬಹುದು.

Follow Us:
Download App:
  • android
  • ios