Business Ideas: ಬಾಯಿ ಚಪ್ಪರಿಸಿ ತಿನ್ನುವ ಫಾಸ್ಟ್‌ ಫುಡ್‌ ಬ್ಯುಸಿನೆಸ್‌ ಮಾಡಿ ಹಣ ಗಳಿಸಿ

ರುಚಿಯಾದ ಅಡುಗೆ ಗೊತ್ತಿದ್ರೆ ಎಲ್ಲಿ ಬೇಕಾದ್ರೂ ಜೀವನ ನಡೆಸಬಹುದು. ಅದ್ರಲ್ಲೂ ಫಾಸ್ಟ್ ಫುಡ್ ತಯಾರಿಸೋದು ಕಲಿತ್ರೆ ಒಳ್ಳೆ ವ್ಯವಹಾರವನ್ನು ನೀವು ಶುರು ಮಾಡಬಹುದು. ಸದಾ ಬೇಡಿಕೆಯಲ್ಲಿರುವ ವ್ಯವಹಾರದಲ್ಲಿ ಇದು ಒಂದು.
 

Fast Food Business Ideas

ಫಾಸ್ಟ್ ಫುಡ್, ಹೆಸರು ಕೇಳ್ತಿದ್ದಂತೆ ಅನೇಕರ ಬಾಯಲ್ಲಿ ನೀರು ಬರುತ್ತದೆ. ಫಾಸ್ಟ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವಿಷ್ಯ ಗೊತ್ತಿದ್ರೂ ಒಂದು ದಿನ ತಿಂದ್ರೆ ಏನಾಗಲ್ಲ ಅಂತಾ ಸೇವನೆ ಮಾಡೋರೇ ಹೆಚ್ಚು. ಹಾಗಾಗಿಯೇ ಫಾಸ್ಟ್ ಫುಡ್ ಗೆ ಬೇಡಿಕೆ ಹೆಚ್ಚಿದೆ. ನೀವು ಕೆಲಸವಿಲ್ಲದೆ ಖಾಲಿ ಕುಳಿತಿದ್ದು, ವ್ಯಾಪಾರದ ಪ್ಲಾನ್ ಮಾಡ್ತಿದ್ದರೆ ಫಾಸ್ಟ್ ಫುಡ್ ಶಾಪ್ ತೆಗೆದು ಆದಾಯ ಗಳಿಸಬಹುದು. ನಾವಿಂದು ಫಾಸ್ಟ್ ಫುಡ್ ಶಾಪ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೆವೆ.

ಫಾಸ್ಟ್ ಫುಡ್ (Fast Food) ನಲ್ಲಿ ಸಾಕಷ್ಟು ವೆರೈಟಿಗಳಿವೆ. ನೀವು ಬರೀ ಮಂಚೂರಿ, ನೂಡಲ್ಸ್ (Noodles)  ತಯಾರಿಸಿಯೇ ವ್ಯವಹಾರ ಶುರು ಮಾಡಹುದು. ಸಣ್ಣದಾಗಿ ವ್ಯವಹಾರ (Business) ಮಾಡ್ತೇನೆ ಎನ್ನುವವರಿಗೆ ಇದು ಬೆಸ್ಟ್ ಆಯ್ಕೆ. ದೊಡ್ಡ ಮಟ್ಟದಲ್ಲಿ ವ್ಯವಹಾರ ಮಾಡಲು ಬಯಸುವವರು ಇನ್ನೊಂದಿಷ್ಟು ಫಾಸ್ಟ್ ಫುಡ್ ಜೊತೆ ದೊಡ್ಡ ರೆಸ್ಟೊರೆಂಟ್ ಓಪನ್ ಮಾಡಬಹುದು. ಬರೀ ಫಾಸ್ಟ್ ಫುಡ್ ಮಾತ್ರವಲ್ಲ ಅದನ್ನು ತಯಾರಿಸಲು ಬಳಸುವ ವಸ್ತುವನ್ನು ಇಷ್ಟುಕೊಂಡು ನೀವು ವ್ಯವಹಾರವನ್ನು ವಿಸ್ತರಿಸಬಹುದು.

ಫಾಸ್ಟ್ ಫುಡ್ ವ್ಯವಹಾರ ಶುರು ಮಾಡೋದು ಹೇಗೆ?: ಮನೆಯಲ್ಲಿ ಫಾಸ್ಟ್ ಫುಡ್ ವ್ಯವಹಾರ ಶುರು ಮಾಡಲು ಸಾಧ್ಯವಿಲ್ಲ. ನೀವು ಮನೆಯ ಮುಂದಿನ ಬೀದಿಯಲ್ಲಿ ವ್ಯವಹಾರ ಶುರು ಮಾಡಬಹುದು. ಜನನಿಬಿಡಿ ಪ್ರದೇಶದಲ್ಲಿ ಇದನ್ನು ಮಾಡ್ಬೇಕು. ಯಾವ ಆಹಾರವನ್ನು ಇಡುತ್ತೀರಿ, ನಿಮ್ಮ ಹೂಡಿಕೆ ಎಷ್ಟು ಎಂಬುದನ್ನು ನಿರ್ಧರಿಸಿಕೊಂಡು ನೀವು ವ್ಯಾಪಾರ ಶುರು ಮಾಡಬೇಕಾಗುತ್ತದೆ. ಮೊದಲು ಒಳ್ಳೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ನ್ಯಾಯಾಲಯ, ಸಿನಿಮಾ ಹಾಲ್ ಬಳಿ ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಬಹುದು.  

Personal Finance : ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸೋ ಮುನ್ನ ಈ ವಿಷ್ಯ ತಿಳ್ಕೊಳ್ಳಿ

ಫಾಸ್ಟ್ ಫುಡ್ ಪರವಾನಿಗೆ ಮತ್ತು ನೋಂದಣಿ: ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಶುರು ಮಾಡ್ತಿದ್ದರೆ ನೋಂದಣಿ ಅಗತ್ಯವಿಲ್ಲ. ಆದರೆ ನೀವು ಈ ವ್ಯವಹಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಬಯಸಿದರೆ ಅಂಗಡಿ ಅಥವಾ ರೆಸ್ಟೊರೆಂಟ್‌ಗಳನ್ನು ಜಿಎಸ್ಟಿ ಹೆಸರಿನಲ್ಲಿ ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್ ಮತ್ತು ಆಫ್‌ಲೈನ್‌ ಎರಡರಲ್ಲೂ ನೋಂದಾಯಿಸಿಕೊಳ್ಳಬಹುದು. 

ಫಾಸ್ಟ್ ಫುಡ್ ಗೆ ಅಗತ್ಯವಿರುವ ಕಚ್ಚಾ ವಸ್ತು: ನೀವು ಯಾವ ಫಾಸ್ಟ್ ಫುಡ್ ಅಂಗಡಿ ತೆರೆಯುತ್ತಿದ್ದೀರಿ ಎಂಬುದನ್ನು ಇದು ಅವಲಂಭಿಸಿರುತ್ತದೆ. ಟೊಮೆಟೊ ಸಾಸ್,  ಹಸಿ ಮೆಣಸಿನ ಸಾಸ್,  ರೆಡ್ ಚಿಲ್ಲಿ ಸಾಸ್, ಸೋಯಾ ಸಾಸ್,ವಿನೆಗರ್, ತರಕಾರಿ,ಗರಂ ಮಸಾಲೆ, ಚಿಕನ್ ಮಸಾಲಾ, ಅಜಿನೊಮೊಟೊ ಸೇರಿದಂತೆ ಅನೇಕ ಆಹಾರ ವಸ್ತುಗಳು ಬೇಕಾಗುತ್ತವೆ. ಅದಲ್ಲದೆ ಒಲೆ,ಗ್ರಿಡಲ್, ಅಲ್ಯೂಮಿನಿಯಂ ಫಾಯಿಲ್ ಪೇಪರ್, ಮೇಜು ಸೇರಿದಂತೆ ಇನ್ನೂ ಅನೇಕ ಪಾತ್ರೆಗಳ ಅಗತ್ಯವಿರುತ್ತದೆ. 

ಫಾಸ್ಟ್ ಫುಡ್ ವ್ಯವಹಾರಕ್ಕೆ ತಗಲುವ ವೆಚ್ಚ: ಸಣ್ಣ ಪ್ರಮಾಣದಲ್ಲಿ ಫಾಸ್ಟ್ ಫುಡ್ ವ್ಯಾಪಾರ ಮಾಡುತ್ತಿದ್ದರೆ  ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡಿ. ಅನಗತ್ಯ ವಸ್ತುಗಳನ್ನು ಇಡಬೇಡಿ. ಅಗತ್ಯಕ್ಕೆ ತಕ್ಕಷ್ಟು  ಕಚ್ಚಾ ವಸ್ತುಗಳನ್ನು ಖರೀದಿಸಿ. ಈ ವ್ಯವಹಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದರೆ ಸುಮಾರು ಒಂದರಿಂದ ಒಂದೂವರೆ ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ.  

ಫಾಸ್ಟ್ ಫುಡ್ ವ್ಯವಹಾರದಲ್ಲಿ ಲಾಭ : ಫಾಸ್ಟ್ ಫುಡ್ ಗೆ ಸದಾ ಬೇಡಿಕೆಯಿದೆ. ಆದ್ರೆ ನಿಮ್ಮ ಗುಣಮಟ್ಟ ಹಾಗೂ ರುಚಿ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸ್ವಚ್ಛವಾದ ಸ್ಥಳದಲ್ಲಿ, ರುಚಿಯಾದ ಫಾಸ್ಟ್ ಫುಡ್ ನೀವು ನೀಡಿದ್ರೆ ಬಾಯಿಂದ ಬಾಯಿಗೆ ಪ್ರಚಾರವಾಗಿಯೇ ನೀವು ಲಾಭ ಪಡೆಯಬಹುದು. ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡುವ ಒಳ್ಳೆಯ ಫಾಸ್ಟ್ ಫುಡ್ ವ್ಯಾಪಾರಸ್ಥ ಸುಮಾರು 20ರಿಂದ 30 ಸಾವಿರ ಲಾಭ ಗಳಿಸುತ್ತಾನೆ. ದೊಡ್ಡ ಪ್ರಮಾಣದಲ್ಲಿ ವ್ಯವಹಾರವಿದ್ರೆ ಲಾಭ ಹೆಚ್ಚಿರುತ್ತದೆ. 

Business Ideas: ಆಯಿಲ್ ಮಿಲ್ ಶುರು ಮಾಡಿ ಕೈತುಂಬ ಲಾಭಗಳಿಸಿ

ಇದನ್ನು ಗಮನದಲ್ಲಿಟ್ಟುಕೊಳ್ಳಿ : ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಉತ್ತಮ ಕಂಪನಿಯ ಸಾಸ್ ಬಳಸಿ. ಒಂದೇ ರುಚಿ ಕಾಪಾಡಿಕೊಳ್ಳಿ. ಗುಣಮಟ್ಟದ ಎಣ್ಣೆ ಬಳಸಿ.

Latest Videos
Follow Us:
Download App:
  • android
  • ios