Asianet Suvarna News Asianet Suvarna News

Income Tax Relief: ಬಜೆಟ್‌ನಲ್ಲಿ Standard Deduction ಮಿತಿ 1 ಲಕ್ಷಕ್ಕೆ ಏರಿಕೆ?

ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ತೆರಿಗೆದಾರರು ಯಾವುದೇ ರಶೀದಿಗಳು ಅಥವಾ ವೆಚ್ಚದ ಪ್ರೂಫ್‌ಅನ್ನು ನೀಡದೇ ತಮ್ಮ ತೆರಿಗೆಯ ಆದಾಯದಿಂದ ಕಡಿತ ಮಾಡಿಕೊಳ್ಳಬಹುದಾದ ಸ್ಥಿರ ಮೊತ್ತ.
 

Budget 2024 may increase standard deduction limit to 1 lakh san
Author
First Published Jul 1, 2024, 6:26 PM IST | Last Updated Jul 1, 2024, 6:26 PM IST

ನವದೆಹಲಿ (ಜು.1): ದೇಶದ ಆದಾಯ ತೆರಿಗೆ ಪಾವತಿದಾರರಿಗೆ ಬಿಗ್‌ ರಿಲೀಫ್‌ ಎನ್ನುವಂತೆ ಕೇಂದ್ರ ಸರ್ಕಾರವು, ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಚಿಂತನೆ ನಡೆಸಿದೆ. ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಪ್ರಧಾನ ಮಂತ್ರಿಗಳ ಕಛೇರಿಯೊಳಗಿನ ಸಮಾಲೋಚನೆಗಳು ಮತ್ತು ಆಂತರಿಕ ಮೌಲ್ಯಮಾಪನಗಳನ್ನು ಆಧರಿಸಿ ಸಿಎನ್‌ಬಿಸಿ ವರದಿ ಮಾಡಿದ್ದು, ಈ ನಿರ್ಧಾರವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂರನೇ ಅವಧಿಯ ಮೊದಲ ಬಜೆಟ್‌ನ ಭಾಗವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಎನ್ನುವುದು ತೆರಿಗೆದಾರರು ಯಾವುದೇ ರಶೀದಗಳು ಅಥವಾ ವೆಚ್ಚದ ಪುರಾವೆಗಳ ಅಗತ್ಯವಿಲ್ಲದೇ ತಮ್ಮ ತೆರಿಗೆಯ ಆದಾಯದಿಂದ ಕಡಿತಗೊಳಿಸಬಹುದಾದ ಸ್ಥಿರ ಮೊತ್ತವಾಗಿದೆ. ಇದು ಎಲ್ಲಾ ಸ್ಲ್ಯಾಬ್‌ಗೆ ಬರುವ ತೆರಿಗೆಯ ಆದಾಯವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಒಟ್ಟಾರೆ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ.

ಕಳೆದ ಹಣಕಾಸು ವರ್ಷದ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ₹ 50,000 ಸ್ಟ್ಯಾಂಡರ್ಡ್‌ ಡಿಡಕ್ಷನ್‌ಅನ್ನು ಪ್ರಸ್ತಾಪಿಸಿದರು. ತೆರಿಗೆದಾರರು ಆಯ್ಕೆಯಿಂದ ಹೊರಗುಳಿಯದ ಹೊರತು ಈ ಕಡಿತವು ಡೀಫಾಲ್ಟ್ ಆಗಿ ಅನ್ವಯಿಸುತ್ತದೆ. ಹೆಚ್ಚುವರಿಯಾಗಿ, ಸೆಕ್ಷನ್ 87A ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾದ ಆದಾಯದ ಮಿತಿಯನ್ನು ₹7 ಲಕ್ಷಕ್ಕೆ ಏರಿಸಲಾಗಿದೆ. ಹೊಸ ತೆರಿಗೆ ಪದ್ಧತಿಯು ಅತ್ಯಧಿಕ ಹೆಚ್ಚುವರಿ ಶುಲ್ಕವನ್ನು ತೆಗೆದುಹಾಕಿತು, ತೆರಿಗೆ ಲೆಕ್ಕಾಚಾರಗಳನ್ನು ಸರಳ ಮಾಡಿತ್ತು.

ಆದಾಗ್ಯೂ, ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳಿಗೆ ಈ ಮಿತಿಯು ಇನ್ನು ಮುಂದೆ ಸಾಕಾಗುವುದಿಲ್ಲ ಎಂದು ತಜ್ಞರು ವಾದ ಮಾಡಿದ್ದಾರೆ. ಇಂದಿನ ವೆಚ್ಚಗಳು ಮತ್ತು ಹಣದುಬ್ಬರ ದರಗಳೊಂದಿಗೆ ಉತ್ತಮವಾಗಿ ಹೊಂದಾಣಿಕೆ ಮಾಡಲು ಸರ್ಕಾರವು ಅದನ್ನು ಕನಿಷ್ಠ ₹1 ಲಕ್ಷಕ್ಕೆ ಏರಿಸಲು ಪರಿಗಣಿಸಬಹುದು ಎನ್ನುವ ಮಾತುಗಳಿವೆ.

ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯ ಹೆಚ್ಚಳವು ಹೆಚ್ಚಿನ ಆದಾಯವನ್ನು ಹೊಂದಿರುವವರು ಸೇರಿದಂತೆ ಎಲ್ಲಾ ಸಂಬಳದ ತೆರಿಗೆದಾರರಿಗೆ ತೆರಿಗೆಯ ಆದಾಯದಲ್ಲಿ ರಿಲೀಫ್‌ಗೆ ಕಾರಣವಾಗಲಿದೆ. ಈ ಕ್ರಮವು ಹೆಚ್ಚುತ್ತಿರುವ ಜೀವನ ವೆಚ್ಚಗಳು ಮತ್ತು ಆರ್ಥಿಕ ಸವಾಲುಗಳ ನಡುವೆ ಪರಿಹಾರವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Standard Deduction ಇಲ್ಲಿಯವರೆಗೂ ಬದಲಾಗಿದ್ದು ಹೇಗೆ?
2004-05ರಲ್ಲಿ ಉದ್ಯೋಗ-ಸಂಬಂಧಿತ ವೆಚ್ಚಗಳನ್ನು ಸರಿದೂಗಿಸಲು ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ಸಹಾಯ ಮಾಡಲು ಆರಂಭದಲ್ಲಿ ಪರಿಚಯಿಸಲಾದ Standard Deduction ಅವರನ್ನು ತೆರಿಗೆ ಸರಳೀಕರಣ ಕ್ರಮಗಳ ಭಾಗವಾಗಿ ತೆಗೆದುಹಾಕಲಾಗಿತ್ತು.

ಪಿಎಂ ಕಿಸಾನ್‌, ಶ್ರಮಯೋಗಿ ಮಾನಧನ್‌.. 2019ರ ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಆಗಿತ್ತು ಈ ಯೋಜನೆಗಳು!

2018ರಲ್ಲಿ  ಸ್ಟ್ಯಾಂಡರ್ಡ್ ಡಿಡಕ್ಷನ್ ಯೂನಿಯನ್ ಬಜೆಟ್‌ನಲ್ಲಿ ವಾಪಾಸ್‌ ಬಂದಿತು. ಸಂಬಳದ ನೌಕರರು ಮತ್ತು ಪಿಂಚಣಿದಾರರಿಗೆ ಇದರ ಮಿತಿಯನ್ನು ₹40,000 ಕ್ಕೆ ನಿಗದಿ ಮಾಡಲಾಗಿತ್ತು. 2019ರ ಫೆಬ್ರವರಿ 1 ರ ಮಧ್ಯಂತರ ಬಜೆಟ್‌ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ₹ 40,000 ರಿಂದ ₹ 50,000 ಕ್ಕೆ ಹೆಚ್ಚಿಸಿತು, ಇದು ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ಹೆಚ್ಚುವರಿ ಪರಿಹಾರವನ್ನು ನೀಡಿತು. ಆದರೆ, ಈ ಹೆಚ್ಚಳವು ಹಳೆಯ ತೆರಿಗೆ ಪದ್ಧತಿಯನ್ನು ಅನುಸರಿಸುವವರಿಗೆ ಸೀಮಿತವಾಗಿತ್ತು.

Budget 2022 Expectations: ಈ ಬಾರಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವಾಗುತ್ತಾ? ಸಮೀಕ್ಷೆ ಏನ್ ಹೇಳುತ್ತೆ?

2023ರ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಪದ್ಧತಿಯ ಆಕರ್ಷಣೆಯನ್ನು ಹೆಚ್ಚಿಸಲು, ಬಜೆಟ್ 2023 ಹೊಸ ತೆರಿಗೆ ಒದ್ಧತಿಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ₹50,000 ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಯೋಜನವನ್ನು ವಿಸ್ತರಣೆ ಮಾಡಲಾಗುತ್ತು. ಇದರಿಂದಾಗಿ ಹಳೆಯ ಮತ್ತು ಹೊಸ ತೆರಿಗೆ ರಚನೆಗಳಲ್ಲಿ ಏಕರೂಪದ ತೆರಿಗೆ ಪರಿಹಾರ ನೀಡಲಾಗಿತ್ತು.

Latest Videos
Follow Us:
Download App:
  • android
  • ios