Budget 2022 Expectations: ಈ ಬಾರಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವಾಗುತ್ತಾ? ಸಮೀಕ್ಷೆ ಏನ್ ಹೇಳುತ್ತೆ?
*ವೈಯಕ್ತಿಕ ಆದಾಯ ತೆರಿಗೆಗೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆ ನಿರೀಕ್ಷೆ
*ತೆರಿಗೆದಾರರ ನಿರೀಕ್ಷೆಗಳ ಮೇಲೆ ಬೆಳಕು ಚೆಲ್ಲಿದ ಕೆಪಿಎಂಜಿ ಬಜೆಟ್ ಪೂರ್ವಭಾವಿ ಸಮೀಕ್ಷೆ
*ಆದಾಯ ತೆರಿಗೆ ಮೂಲ ವಿನಾಯ್ತಿ ಮಿತಿ 2.5 ಲಕ್ಷ ರೂ.ನಿಂದ ಹಚ್ಚಳವಾಗೋ ಸಾಧ್ಯತೆ
Business Desk: 2022ನೇ ಸಾಲಿನ ಬಜೆಟ್ ನಲ್ಲಿ (Budget) ಕೇಂದ್ರ ಸರ್ಕಾರ ಆದಾಯ ತೆರಿಗೆಯಲ್ಲಿ (Income tax) ಸಾಕಷ್ಟು ಸಡಿಲಿಕೆ ಮಾಡಲಿದೆ ಎಂಬ ದೊಡ್ಡ ನಿರೀಕ್ಷೆಯನ್ನು ತೆರಿಗೆದಾರರು(Tax payers) ಹೊಂದಿದ್ದಾರೆ. ಕೆಪಿಎಂಜಿ (KPMG)ಇತ್ತೀಚೆಗೆ ನಡೆಸಿದ ಬಜೆಟ್ ಪೂರ್ವಭಾವಿ ಸಮೀಕ್ಷೆಯಲ್ಲಿ (Survey) ಮೂಲ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಸರ್ಕಾರ 2.5 ಲಕ್ಷ ರೂ.ನಿಂದ ಹಚ್ಚಳ ಮಾಡೋ ನಿರೀಕ್ಷೆಯನ್ನು ಬಹುತೇಕ ಪ್ರತಿಕ್ರಿಯೆದಾರರು ಹೊಂದಿರೋದು ಕಂಡುಬಂದಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರು 10 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಆದಾಯ ಮಿತಿಗೆ (Income Limit) ಸಂಬಂಧಿಸಿದ ತೆರಿಗೆಯಲ್ಲಿ ಏರಿಕೆಗೆ ಬೆಂಬಲ ಸೂಚಿಸಿದ್ದಾರೆ. ಸೆಕ್ಷನ್ 80 ಸಿ (Section 80C) ಅಡಿಯಲ್ಲಿ ಪ್ರಸ್ತುತವಿರೋ 1.5ಲಕ್ಷ ರೂ. ತೆರಿಗೆ ಕಡಿತದ ಮಿತಿಯನ್ನು ಇನ್ನಷ್ಟು ಹೆಚ್ಚಳ ಮಾಡೋ ಬಗ್ಗೆಯೂ ಆಸಕ್ತಿ ತೋರಿದ್ದಾರೆ ಎಂದು ಸಮೀಕ್ಷೆ ವರದಿ ತಿಳಿಸಿದೆ.
ಆದಾಯ ತೆರಿಗೆ ಮೂಲ ವಿನಾಯ್ತಿ ಮಿತಿಯನ್ನು 2017-18ರಲ್ಲಿ ಪರಿಷ್ಕರಿಸಲಾಗಿತ್ತು. ಆ ಬಳಿಕ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಮೂಲ ವಿನಾಯ್ತಿ ಮಿತಿಯನ್ನು ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಳ ಮಾಡಬಹುದೆಂಬ ದೊಡ್ಡ ನಿರೀಕ್ಷೆಯಿದೆ. ಇದ್ರಿಂದ ಮಧ್ಯಮ ವರ್ಗದ ತೆರಿಗೆದಾರರ ತೆರಿಗೆ ಹೊರೆ ಸ್ವಲ್ಪ ಮಟ್ಟಿಗೆ ತಗ್ಗುತ್ತದೆ ಎನ್ನುತ್ತಾರೆ ಟ್ಯಾಕ್ಸ್ 2ವಿನ್ (Tax2win) ಸಹಸಂಸ್ಥಾಪಕ ಹಾಗೂ ಸಿಇಒ(CEO) ಅಭಿಷೇಕ್ ಸೋನಿ (Abhishek Soni).
Budget 2022: ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಸಮೀಕ್ಷೆ ವರದಿ ಏನಿದೆ?
ಸಮೀಕ್ಷೆಯಲ್ಲಿ ವೈಯಕ್ತಿಕವಾಗಿ ತೆರಿಗೆ ಪಾವತಿದಾರರು ಯಾವೆಲ್ಲ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂಬ ಪ್ರಶ್ನೆಗೆ ದೊರೆತ ಪ್ರತಿಕ್ರಿಯೆಗಳು ಹೀಗಿವೆ:
-ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.36ರಷ್ಟು ಜನರು ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂ. ತೆರಿಗೆ ಕಡಿತದ ಮಿತಿ ಹೆಚ್ಚಳವಾಗೋ ಭರವಸೆ ವ್ಯಕ್ತಪಡಿಸಿದ್ದಾರೆ.
-ಶೇ.19ರಷ್ಟು ಜನರು ವೇತನ ಪಡೆಯುತ್ತಿರೋ ವರ್ಗಕ್ಕೆ ಪ್ರಸ್ತುತವಿರೋ 50,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆಯಾಗೋ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
-ವರ್ಕ್ ಫ್ರಂ ಹೋಮ್ ಮಾಡುತ್ತಿರೋ ಉದ್ಯೋಗಿಗಳ ಭತ್ಯೆಗಳ ಮೇಲೆ ಸರ್ಕಾರ ಈ ಬಾರಿ ತೆರಿಗೆ ವಿಧಿಸೋದಿಲ್ಲ ಎಂಬ ನಿರೀಕ್ಷೆಯನ್ನು ಶೇ.16 ಜನರು ವ್ಯಕ್ತಪಡಿಸಿದ್ದಾರೆ.
ಸೆಕ್ಷನ್ 80ಸಿ ಹಾಗೂ 80ಡಿ ಮಿತಿ ಹೆಚ್ಚಳ?
'ಗೃಹಸಾಲಗಳ ಪ್ರಧಾನ ಮರುಪಾವತಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಪ್ರತ್ಯೇಕ ತೆರಿಗೆ ಕಡಿತದ ಅವಕಾಶ ಕಲ್ಪಿಸಬೇಕು. ಇನ್ನು ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತದ ಮಿತಿಯನ್ನು ಅನೇಕ ವರ್ಷಗಳಿಂದ ಪರಿಷ್ಕರಿಸಿಲ್ಲ. ಅಲ್ಲದೆ, ಪ್ರಸ್ತುತ ನೀಡಿರೋ 1,50,000 ರೂ. ಮಿತಿಯಲ್ಲಿ ಅನೇಕ ವಿಷಯಗಳು ಸೇರಿರೋ ಕಾರಣ, ಬಹುತೇಕ ತೆರಿಗೆದಾರರಿಗೆ ಇದ್ರಿಂದ ವಿಶೇಷ ಪ್ರಯೋಜನವೇನೂ ಸಿಗುತ್ತಿಲ್ಲ. ಹೀಗಾಗಿ ಈ ಬಾರಿ ಬಜೆಟ್ ನಲ್ಲಿ ಈ ಮಿತಿಯನ್ನು ಹೆಚ್ಚಳಗೊಳಿಸೋ ಬಗ್ಗೆ ವಿಪರೀತ ನಿರೀಕ್ಷೆಯಿದೆ' ಎಂದು ಅಭಿಷೇಕ್ ಸೋನಿ ಹೇಳಿದ್ದಾರೆ.
Budget 2022 Expectations: ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಯಾವೆಲ್ಲ ಘೋಷಣೆಗಳಾಗಬಹುದು? ನಿರೀಕ್ಷೆಗಳೇನು?
ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ?
ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ (Income Tax Slab) ಈ ಬಾರಿಯ ಬಜೆಟ್ ನಲ್ಲಿ ಬದಲಾವಣೆಯಾಗಬಹುದೆಂಬ ನಿರೀಕ್ಷೆಯಂತೂ ಇದ್ದೇಇದೆ. ಅತ್ಯಧಿಕ ತೆರಿಗೆ ವಿಧಿಸಲ್ಪಡೋ ವೈಯಕ್ತಿಕ ಆದಾಯದ ಮಿತಿಯನ್ನು 15ಲಕ್ಷ ರೂ.ನಿಂದ 20ಲಕ್ಷ ರೂ.ಗೆ ಏರಿಕೆ ಮಾಡೋ ಸಾಧ್ಯತೆಯಿದೆ. ಅಥವಾ ಕೆಲವು ನಿರ್ದಿಷ್ಟ ತೆರಿಗೆ ಕಡಿತದ ಸೌಲಭ್ಯಗಳನ್ನು ಕಲ್ಪಿಸೋ ಮೂಲಕ ನೌಕರರ ವರ್ಗಕ್ಕೆ ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಸಿಹಿ ಸುದ್ದಿ ನೀಡೋ ಸಾಧ್ಯತೆಯಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ?
ಹಣದುಬ್ಬರ ಹೆಚ್ಚಳ ಹಾಗೂ ಉದ್ಯೋಗಿಗಳ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡೋ ಉದ್ದೇಶದಿಂದ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000ರೂ.ನಿಂದ 1,00,000ರೂ.ಗೆ ಏರಿಕೆ ಮಾಡೋ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.