Asianet Suvarna News Asianet Suvarna News

ಇನ್ಫೋಸಿಸ್‌ ನಾರಾಯಣ ಮೂರ್ತಿ ವಾದಕ್ಕೆ ಉಲ್ಟಾ, 'ವಾರಕ್ಕೆ ಮೂರೇ ದಿನ ಕೆಲಸ ಸಾಧ್ಯ' ಎಂದ ಬಿಲ್‌ ಗೇಟ್ಸ್‌!

ಒಂದೆಡೆ ನಾರಾಯಣಮೂರ್ತಿ ಭಾರತದಲ್ಲಿ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದಿದ್ದರೆ, ಇನ್ನೊಂದೆಡೆ, ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌, ಭವಿಷ್ಯದಲ್ಲಿ ಎಐಅನ್ನು ಸಮರ್ಪಕವಾಗಿ ಬಳಕೆ ಮಾಡಿದರೆ, ಮನುಷ್ಯರು ವಾರಕ್ಕೆ 3 ದಿನ ಮಾತ್ರವೇ ಕೆಲಸ ಮಾಡೋದು ಸಾಧ್ಯವಿದೆ ಎಂದಿದ್ದಾರೆ.
 

Bill Gates says a 3 day work week is possible with AI san
Author
First Published Nov 24, 2023, 1:43 PM IST

ನವದೆಹಲಿ (ನ.24): ಕಾಮೆಡಿಯನ್‌ ಟ್ರೆವರ್ ನೋಹ್ ಅವರ ವಾಟ್ ನೌ? ಪಾಡ್‌ಕಾಸ್ಟ್‌ನಲ್ಲಿ ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ನಿಂದ ಆಗಬಹುದಾದ ಅಪಾಯದ ಬಗ್ಗೆ ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರಿಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ಕಂಪನಿಗಳ ದೈನಂದಿನ ಕೆಲಸಗಳನ್ನು ಇಂಥ ಎಐ ಯಂತ್ರಗಳೇ ಮಾಡಬಹುದು. ಹಾಗೇನಾದರೂ ಆದಲ್ಲಿ ಮನುಷ್ಯನ ಮೇಲಿರುವ ಕೆಲಸದ ಹೊರೆ ಇನ್ನಷ್ಟು ಕಡಿಮೆಯಾಗಲಿದೆ ಎನ್ನುವ ಐಡಿಯಾವನ್ನು ಮುಂದಿಟ್ಟಿದ್ದಾರೆ. ಇದಕ್ಕೆ ತಮ್ಮ ಜೀವನದ ಉದಾಹರಣೆಯನ್ನೇ ಅವರು ನೀಡಿದರು. ತಮ್ಮ ಜೀವದ ಎರಡು ದಶಕ ಅಂದರೆ 18 ರಿಂದ 40 ವರ್ಷಗಳ ಕಾಲ ತಮ್ಮ ಕಂಪನಿಯನ್ನು ನಿರ್ಮಾಣ ಮಾಡುವ ಬಗ್ಗೆ ಮೋನೋ ಮ್ಯಾನಿಕಲ್‌ (ಒಂದು ಕಂಪನಿಯನ್ನು ಕಷ್ಟುವ ಉದ್ದೇಶ ಹೊರತಾಗಿ ಬೇರೆಯದರ ಬಗ್ಗೆ ಯೋಚಿಸದೇ ಕೆಲಸ ಮಾಡೋದು) ಆಗಿದ್ದರು. ಈಗ ತಮಗೆ 68 ವರ್ಷವಾಗಿದೆ. ಈ ಹಂತದಲ್ಲಿ ನನಗೆ ಜೀವದ ಉದ್ದೇಶ ಕೇವಲ ಉದ್ಯೋಗ ಮಾಡುವುದು ಕಂಪನಿ ಕಟ್ಟುವುದು ಮಾತ್ರವಲ್ಲ ಎನ್ನುವುದು ಅರಿವಾಗಿದೆ ಎಂದು ಮಾತನಾಡಿದ್ದಾರೆ.

ಬಹುಶಃ ನೀವು ಅಂತಿಮವಾಗಿ ವಾರದಲ್ಲಿ ಮೂರು ದಿನಗಳು ಅಥವಾ ಅದರ ಆಸುಪಾಸಿನಲ್ಲಿ ಕೆಲಸ ಮಾಡಬೇಕಾದ ಸಮಾಜವನ್ನು ಪಡೆಯಬಹುದು. ಅದೇ ಸರಿ ಎಂದು ಮೈಕ್ರೋಸಾಫ್ಟ್‌ನ ಬಿಲಿಯನೇರ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌, ನೋಹ್‌ ಅವರಿಗೆ ತಿಳಿಸಿದ್ದಾರೆ. ಎಐ ಯಂತ್ರಗಳೇ ನಿಮಗೆ ಎಲ್ಲಾ ರೀತಿಯ ಆಹಾರ ಸೇರಿದಂತೆ ಇತರ ದೈನಂದಿನ ಕೆಲಸಗಳನ್ನು ಮಾಡಿಕೊಡುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾದ ಅನಿವಾರ್ಯತೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಬಿಲ್‌ ಗೇಟ್ಸ್ ತಮ್ಮ ಹಿಂದಿನ ಸಂದರ್ಶನಗಳು ಮತ್ತು ಬ್ಲಾಗ್ ಪೋಸ್ಟ್‌ಗಳಲ್ಲಿ ಎಐನ ಅಪಾಯಗಳು ಮತ್ತು ಪ್ರಯೋಜನಗಳೆರಡನ್ನೂ ಎತ್ತಿ ತೋರಿಸಿದ್ದಾರೆ. ಗೇಟ್ಸ್‌ನೋಟ್ಸ್‌ನಲ್ಲಿ, ಅವರು ಜುಲೈನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಎಐ ಯ ಅಪಾಯಗಳನ್ನು ಉದ್ದೇಶಿಸಿ, ಅವುಗಳನ್ನು "ಅತ್ಯಂತ ನೈಜ ಆದರೆ ನಿರ್ವಹಿಸಬಹುದಾದ ಅಪಾಯಗಳು' ಎಂದು ಕರೆದಿದ್ದರು. ಎಐನ ಸಂಭಾವ್ಯ ಅಪಾಯಗಳ ಪೈಕಿ, ಅವರು "ತಪ್ಪು ಮಾಹಿತಿ ಮತ್ತು ಡೀಪ್‌ಫೇಕ್‌ಗಳು, ಭದ್ರತಾ ಬೆದರಿಕೆಗಳು, ಉದ್ಯೋಗ ಮಾರುಕಟ್ಟೆಯ ಬದಲಾವಣೆಗಳು ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುವುದು" ಸೇರಿದಂತೆ ಹಲವು ಅಪಾಯಗಳನ್ನು ಪಟ್ಟಿ ಮಾಡಿದ್ದಾರೆ.

 

ದೀಪಾವಳಿ ಮುನ್ನವೇ ಮತ್ತೊಮ್ಮೆ ಅಜ್ಜ-ಅಜ್ಜಿ ಆದ ನಾರಾಯಣ ಮೂರ್ತಿ, ಸುಧಾ ಮೂರ್ತಿ!

"ಹೊಸ ತಂತ್ರಜ್ಞಾನವು ಕಾರ್ಮಿಕ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡಿರುವುದು ಇದು ಮೊದಲ ಬಾರಿಗೆ ಅಲ್ಲ. ಎಐ ಪ್ರಭಾವವು ಕೈಗಾರಿಕಾ ಕ್ರಾಂತಿಯಂತೆ ನಾಟಕೀಯವಾಗಿರುತ್ತದೆ ಎಂದು ನಾನು ಭಾವಿಸುವುದಿಲ್ಲ, ಆದರೆ ಇದು ಖಂಡಿತವಾಗಿಯೂ ಪರ್ಸನಲ್‌ ಕಂಪ್ಯೂಟರ್‌ನ ಪರಿಚಯದಷ್ಟು ದೊಡ್ಡದಾಗಿರುತ್ತದೆ, " ಎಂದು ಬರೆದಿದ್ದಾರೆ. ನನಗೆ ಸ್ಪಷ್ಟವಾದ ಇನ್ನೊಂದು ವಿಷಯವೆಂದರೆ, ಎಐ ಭವಿಷ್ಯವು ಕೆಲವು ಜನರು ಯೋಚಿಸುವಷ್ಟು ಕಠಿಣವಾಗಿರುವುದಿಲ್ಲ, ಅಥವಾ ಇತರರು ಯೋಚಿಸುವಂತೆ ಸುಲಭವೂ ಆಗಿರೋದಿಲ್ಲ. ಅಪಾಯಗಳು ನಿಜ, ಆದರೆ ಅವುಗಳನ್ನು ನಿರ್ವಹಿಸಬಹುದೆಂದು ನಾನು ಆಶಾವಾದಿಯಾಗಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

70 ಗಂಟೆ ಕೆಲ್ಸ ಮಾಡೋ ಸಲಹೆ ನೀಡಿದ ನಾರಾಯಣ ಮೂರ್ತಿ, ನೀವೇನು ಮಾಡ್ತೀರಿ ಎಂದು ಪ್ರಶ್ನಿಸಿದ ಟ್ರೂಕಾಲರ್ ಸಿಇಒ!

Follow Us:
Download App:
  • android
  • ios