Asianet Suvarna News Asianet Suvarna News

70 ಗಂಟೆ ಕೆಲ್ಸ ಮಾಡೋ ಸಲಹೆ ನೀಡಿದ ನಾರಾಯಣ ಮೂರ್ತಿ, ನೀವೇನು ಮಾಡ್ತೀರಿ ಎಂದು ಪ್ರಶ್ನಿಸಿದ ಟ್ರೂಕಾಲರ್ ಸಿಇಒ!

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಯುವಕರಿಗೆ ವಾರದ 70 ಗಂಟೆಗಳ ಕೆಲಸ ಮಾಡುವ ಸಲಹೆಯಿಂದಾಗಿ ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಈ ಮಧ್ಯೆ ಟ್ರೂಕಾಲರ್ ಸಿಇಒ, ಕೆಲವು ವರ್ಷಗಳ ಹಿಂದೆ ಇನ್ಫೋಸಿಸ್ ಸಂಸ್ಥಾಪಕರಿಗೆ ನೀವೇನು ಮಾಡ್ತೀರಿ ಎಂದು ಪ್ರಶ್ನಿಸಿದ್ದಾಗಿ ತಿಳಿಸಿದ್ದಾರೆ.

Narayana Murthys epic response to what he does question from Truecaller CEO wins internet Vin
Author
First Published Nov 5, 2023, 9:37 AM IST

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಯುವಕರಿಗೆ ವಾರದ 70 ಗಂಟೆಗಳ ಕೆಲಸ ಮಾಡುವ ಸಲಹೆಯಿಂದಾಗಿ ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಇನ್ಫೋಸಿಸ್ ಪ್ರಸ್ತುತ 5.65 ಟ್ರಿಲಿಯನ್‌ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಆದ್ರೆ ವರ್ಷಗಳ ಹಿಂದೆ ಇನ್ಫೋಸಿಸ್ ಆರಂಭಿಸಿದ ರೀತಿ ಇಷ್ಟು ಸರಳವಾಗಿರಲ್ಲಿಲ್ಲ. ಟ್ರೂಕಾಲರ್ ಸಿಇಒ ಅಲನ್ ಮಾಮೆಡಿ ಅವರು ಇತ್ತೀಚೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗಿನ ಅನಿರೀಕ್ಷಿತ ಭೇಟಿಯ ಬಗ್ಗೆ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಯಾರೆಂಬುದಾಗಿ ಗೊತ್ತಿರಲ್ಲಿಲ್ಲ ಎಂದಿದ್ದಾರೆ.

ಟ್ರೂಕಾಲರ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಲನ್ ಮಮೆಡಿ ಅವರು ಖ್ಯಾತ ಬಿಲಿಯನೇರ್ ಮತ್ತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಅನಿರೀಕ್ಷಿತ ಭೇಟಿಯ ಹಳೆಯ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಎಂಟು ವರ್ಷಗಳ ಹಿಂದೆ ನಡೆದ ಭೇಟಿ ಇದಾಗಿದ್ದು, ಕಾರ್ಪೊರೇಟ್ ಜಗತ್ತಿನಲ್ಲಿ ಮೂರ್ತಿಯವರ ಮಹತ್ವದ ಪಾತ್ರದ ಬಗ್ಗೆ ನನಗೆ ತಿಳಿದಿರಲ್ಲಿಲ್ಲ ಎಂದು ಮಮೆಡಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸ ಮಾಡಲು ಸೂಚಿಸಿದ ನಾರಾಯಣ ಮೂರ್ತಿ; ಮಗ ಇನ್ಫೋಸಿಸ್ ಬಿಟ್ಟು ಹೋಗಿದ್ಯಾಕೆ?

ಮಮೆಡಿ ಟ್ವಿಟರ್‌ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, 'ನಾರಾಯಣ ಮೂರ್ತಿ ನಂಬಲಾಗದಷ್ಟು ವಿನಮ್ರ ವ್ಯಕ್ತಿ' ಎಂದು ವಿವರಿಸಿದರು. ಅವರ ಆರಂಭಿಕ ಭೇಟಿಯ ಸಮಯದಲ್ಲಿ, ಇಬ್ಬರೂ ಜೀವನದ ವಿವಿಧ ಅಂಶಗಳ ಬಗ್ಗೆ ಒಂದು ಗಂಟೆಗಳ ಕಾಲ ಮಾತನಾಡಿದ್ದಾಗಿ ತಿಳಿಸಿದರು. 'ನಾನು ನಾರಾಯಣ ಮೂರ್ತಿಯವರ ಬಳಿ ಹೋಗಿ ನೀವು ಯಾರು ಎಂದು ಪ್ರಶ್ನಿಸಿದ್ದೆ' ಎಂದು ಮಮೆಡಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾರಾಯಣ ಮೂರ್ತಿ ಪ್ರತಿಕ್ರಿಯಿಸಿದ ರೀತಿ ನನಗೆ ತುಂಬಾ ಮೆಚ್ಚುಗೆಯಾಯಿತು ಎಂದಿದ್ದಾರೆ.

ಮೂರ್ತಿ ತನ್ನನ್ನು ಟೆಕ್ ದೈತ್ಯ, ಇನ್ಫೋಸಿಸ್ ಸಂಸ್ಥಾಪಕ ಎಂದು ಪರಿಚಯಿಸಿಕೊಳ್ಳುವ ಬದಲು,ತನ್ನನ್ನು ಒಬ್ಬ ಸಾಮಾನ್ಯ ವ್ಯಕ್ತಿ ಎಂದು ವಿವರಿಸಿದರು, 'ನಾವು ಏನನ್ನೋ ಪಡೆದುಕೊಂಡರೂ. ಅದನ್ನು ಯಾವಾಗಲೂ ಸಮಾಜಕ್ಕೆ ಹಿಂತಿರುಗಿಸಬೇಕು ಎಂದು ನನ್ನ ಹೆಂಡತಿ ಯಾವಾಗಲೂ ಹೇಳುತ್ತಿದ್ದಳು. ಅದೃಷ್ಟವಿರುವ ಕಾರಣ ನಾನು ಇಂದು ಅದನ್ನು ಮಾಡುತ್ತಿದ್ದೇನೆ' ಎಂದು ತಿಳಿಸಿದ್ದಾಗಿ ಮಮೆಡಿ ಹೇಳಿದ್ದಾರೆ.

ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ನಂತರವೇ ಅಲನ್ ಮಮೆಡಿ ತನ್ನ ಮುಂದಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಎಂದು ಅರಿತುಕೊಂಡರು. ಇನ್ಫೋಸಿಸ್ ಕುರಿತಾಗಿದ್ದ ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದಾಗಿ ತಿಳಿಸಿದರು. ಮಮೆಡಿ ಅವರು ಬಾಲ್ಯದಲ್ಲಿ ಇನ್ಫೋಸಿಸ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರು ಎಂದು ಬಹಿರಂಗಪಡಿಸಿದರು, ಇದು ಇನ್ಫೋಸಿಸ್ ತಂತ್ರಜ್ಞರೊಬ್ಬರು ತಮ್ಮ ಕಂಪ್ಯೂಟರ್ ಅನ್ನು ದುರಸ್ತಿ ಮಾಡಲು ಅವರ ಮನೆಗೆ ಬಂದ ಘಟನೆಯಿಂದ ಹುಟ್ಟಿಕೊಂಡಿತು ಎಂದು ತಿಳಿಸಿದರು.

ರಾಷ್ಟ್ರದ ಒಳಿತಿಗಾಗಿ ಯುವಕರು ವಾರಕ್ಕೆ 70 ಗಂಟೆ ದುಡಿಯಲು ಸಿದ್ಧರಾಗಿರಬೇಕು ಎಂದು ಸ್ವತಃ ನಾರಾಯಣ ಮೂರ್ತಿ ಅವರೇ ಇತ್ತೀಚೆಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಈ ಹೇಳಿಕೆಯು ಕೆಲಸದ ನೀತಿಗಳು ಮತ್ತು ಸಮರ್ಪಣೆಯ ಬಗ್ಗೆ ಮಹತ್ವದ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿತ್ತು.

Follow Us:
Download App:
  • android
  • ios