Photos| ವಿಶ್ವ ಕುಬೇರ ಬಿಲ್ ಗೇಟ್ಸ್ ಖರೀದಿಸಿದ ಹೈಡ್ರೋಜನ್ ವಿಹಾರ ನೌಕೆ ಇದು!
ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್, ದ್ರವ ಹೈಡ್ರೋಜನ್ ಚಾಲಿತ ವಿಹಾರ ನೌಕೆಯೊಂದನ್ನು ಖರೀದಿಸಿದ್ದಾರೆ. ಬರೋಬ್ಬರಿ 500 ಮಿಲಿಯನ್ ಪೌಂಡ್ ಬೆಒಲೆಬಾಳುವ ಈ ನೌಕೆಯ ಒಂದು ನೋಟ ನಿಮಗಾಗಿ
ಚಿತ್ರ ಕೃಪೆ: ಸಿನೋಟ್ ಡಾಟ್ ಕಾಂ
ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್, ದ್ರವ ಹೈಡ್ರೋಜನ್ ಚಾಲಿತ ವಿಹಾರ ನೌಕೆಯೊಂದನ್ನು ಖರೀದಿಸಿದ್ದಾರೆ.
ತಮ್ಮ ಪರಿಸರ ಸ್ನೇಹಿ ಉಪಕ್ರಮದ ಭಾಗವಾಗಿ ದ್ರವ ಹೈಡ್ರೋಜನ್ ಚಾಲಿತ ವಿಹಾರ ನೌಕೆ ಖರೀದಿಸಿರುವ ಬಿಲ್ ಗೇಟ್ಸ್.
ಈ ವಿಹಾರ ನೌಕೆ ಖರೀದಿಸಿದ ಬಿಗ್‌ಗೇಟ್ಸ್ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡಚ್ ಮೂಲದ ಸಿನೋಟ್ ನೌಕಾ ತಯಾರಿಕಾ ಕಂಪನಿ ತಯಾರಿಸಿರುವ ಪರಿಸರ ಸ್ನೇಹಿ ಅಕ್ವಾ ಸೂಪರ್‌ಯಾಚ್ ಖರೀದಿಸುವ ಮೂಲಕ ಬಿಲ್ ಗೇಟ್ಸ್ ಗಮನ ಸೆಳೆದಿದ್ದಾರೆ.
ಸಿನೋಟ್ ಸಂಪೂರ್ಣವಾಗಿ ಹೈಡ್ರೋಜನ್‌ನಿಂದ ಚಲಿಸುವ ವಿಹಾರ ನೌಕೆಯನ್ನು ನಿರ್ಮಿಸುವುದರಲ್ಲಿ ಸಿದ್ಧ ಹಸ್ತ ಸಂಸ್ಥೆಯಾಗಿದೆ.
ಕೇವಲ ನೀರನ್ನು ಹೊರಸೂಸಿ ಚಲಿಸುವ ಈ ವಿಹಾರ ನೌಕೆ, ಬರೋಬ್ಬರಿ 3,750 ನಾಟಿಕಲ್ ಮೈಲುಗಳ ದೂರವನ್ನು ಕ್ರಮಿಸಬಹುದಾಗಿದೆ.
ಲ್ಯಾಟರಲ್ ನೇವಲ್ ಆರ್ಕಿಟೆಕ್ಟ್ಸ್ ಸಹಯೋಗದೊಂದಿಗೆ ರಚಿಸಲಾದ ಈ ವಿಹಾರ ನೌಕೆ, ಒಟ್ಟು 112 ಮೀಟರ್ ಉದ್ದವಿದೆ.
ಇಂಧನ ಕೋಶಗಳಿಗೆ ವಿದ್ಯುತ್ ಶಕ್ತಿಯನ್ನು ಒದಗಿಸುವ ದ್ರವ ಹೈಡ್ರೋಜನ್‌ನಿಂದ ಈ ವಿಹಾರ ನೌಕೆ ಚಲಿಸುತ್ತದೆ.
ಅಂದಹಾಗೆ ಅಕ್ವಾ ಸೂಪರ್‌ಯಾಚ್ ಬೆಲೆ 500 ಮಿಲಿಯನ್ ಪೌಂಡ್(ಅಂದಹಾಗೆ ಅಕ್ವಾ ಸೂಪರ್‌ಯಾಚ್ ಬೆಲೆ 500 ಮಿಲಿಯನ್ ಪೌಂಡ್(ಸುಮಾರು ನಲ್ವತ್ತಾರು ಸಾವಿರ ಕೋಟಿ.) ಆಗಿದೆ..) ಆಗಿದೆ.