ಏರ್‌ಟೆಲ್ 50 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 5 ಡೇಟಾ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಪ್ಲಾನ್‌ಗಳು ವಿಭಿನ್ನ ಡೇಟಾ ಮತ್ತು ವ್ಯಾಲಿಡಿಟಿ ಆಯ್ಕೆಗಳನ್ನು ಒಳಗೊಂಡಿವೆ.
ನವದೆಹಲಿ: ದೇಶದ 2ನೇ ಅತಿದೊಡ್ಡ ಖಾಸಗಿ ಟೆಲಿಕಾಂ ಕಂಪನಿಯಾಗಿರವ ಏರ್‌ಟೆಲ್, 50 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 5 ಸೂಪರ್ ಡೇಟಾ ಪ್ಲಾನ್‌ಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಡೇಟಾ ಪ್ಲಾನ್‌ಗಳ ಮೂಲಕ ಬಳಕೆದಾರರು ತಮಗೆ ಅಗತ್ಯವಿದ್ದಾಗ, ಈ ರೀಚಾರ್ಜ್‌ಗಳನ್ನು ಮಾಡಿಕೊಳ್ಳಬಹುದು. ಟ್ರಾಯ್ ಸೂಚನೆ ಬೆನ್ನಲ್ಲೇ ಎಲ್ಲಾ ಟೆಲಿಕಾಂ ಕಂಪನಿಗಳು ವಾಯ್ಸ್ ಓನ್ಲಿ ಪ್ಲಾನ್ ತಂದಿವೆ. ಇದರ ಜೊತೆಯಲ್ಲಿಯೇ ಏರ್‌ಟೆಲ್ ಕೈಗೆಟುಕುವ ಬೆಲೆಯಲ್ಲಿ ಡೇಟಾ ಪ್ಲಾನ್‌ಗಳನ್ನು ಪ್ರಿಪೇಯ್ಡ್ ಬಳಕೆದಾರರಿಗಾಗಿ ತಂದಿದೆ. ಈ 5 ಡೇಟಾ ಪ್ಲಾನ್‌ಗಳು ಕೇವಲ 11 ರೂಪಾಯಿಯಿಂದ ಆರಂಭವಾಗುತ್ತವೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಸಿಗುವ ಡೇಟಾ ಮತ್ತು ವ್ಯಾಲಿಡಿಟಿ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
Airtel Prepaid Plans Under Rs 50
Rs 11 Plan: ಈ ಪ್ಲಾನ್‌ನಡಿ ಬಳಕೆದಾರರು ಅನಿಯಮಿತವಾಗಿ ಡೇಟಾ ಬಳಕೆಮಾಡಬಹುದು. ಆದ್ರೆ ವಾಸ್ತವವಾಗಿ 10GB ಆಗಿದೆ. 11 ರೂಪಾಯಿ ಪ್ಲಾನ್ ವ್ಯಾಲಿಡಿಟಿ ಕೇವಲ 1 ಗಂಟೆಯಾಗಿದೆ.
RS 22 Plan: ಭಾರ್ತಿ ಏರ್‌ಟೆಲ್ ಬಳಕೆದಾರರು 22 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಈ ಪ್ಲಾನ್ ಆಕ್ಟಿವೇಟ್ ಆಗುತ್ತದೆ. ಈ ಪ್ಲಾನ್‌ನಡಿ ಗ್ರಾಹಕರಿಗೆ 1GB ಡೇಟಾ ಸಿಗುತ್ತದೆ. ಈ ಪ್ಲಾನ್ 1 ದಿನದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
RS 26 Plan: 26 ರೂಪಾಯಿ ಪ್ಲಾನ್‌ನಲ್ಲಿ ಬಳಕೆದಾರರಿಗೆ 1.5GB ಡೇಟಾ ಸಿಗುತ್ತದೆ. ಈ ಪ್ಲಾನ್ ಸಹ ಒಂದು ದಿನದ ವ್ಯಾಲಿಡಿಟಿಯನ್ನು ಹೊಂದಿದೆ.
Rs 33 Plan: ಏರ್‌ಟೆಲ್ ಬಳಕೆದಾರರು 33 ರೂಪಾಯಿ ರೀಚಾರ್ಜ್ ಮಾಡಿಕೊಂರೆ 2GB ಡೇಟಾ ಸಿಗುತ್ತದೆ. ಈ ಪ್ಲಾನ್ ಸಹ ಒಂದು ದಿನ ವ್ಯಾಲಿಡಿಟಿಯನ್ನು ಹೊಂದಿದೆ.
Rs 49 Plan: ಈ ಪ್ಲಾನ್ ಸಹ ಅನ್‌ಲಿಮಿಟೆಡ್ ಡೇಟಾ ಸಿಗುತ್ತೆ ಅಂತಾರೆ. ಆದ್ರೆ ವಾಸ್ತವವಾಗಿ ಇದು 20GB ಡೇಟಾ ಸಿಗುತ್ತದೆ. ಇದು ಸಹ ಒಂದು ದಿನದ ವ್ಯಾಲಿಡಿಟಿಯನ್ನು ಸಹ ಹೊಂದಿರುತ್ತದೆ.
ವಾಯ್ಸ್ ಓನ್ಲಿ ಪ್ರಿಪೇಯ್ಡ್ ಪ್ಲಾನ್
ಟ್ರಾಯ್ ಸೂಚನೆ ಮೇರೆಗ ಏರ್‌ಟೆಲ್ ಎರಡು ವಾಯ್ಸ್ ಓನ್ಲಿ ಪ್ಲಾನ್ ಬಿಡುಗಡೆ ಮಾಡಿದೆ. ಈ ಎರಡು ಪ್ಲಾನ್‌ಗಳಲ್ಲಿ ಗ್ರಾಹಕರು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು ಮತ್ತು ಸೀಮಿತ ಎಸ್ಎಂಎಸ್ ಕಳುಹಿಸಲು ಅವಕಾಶವಿದೆ. ವಾಯ್ಸ್ ಓನ್ಲಿ ಪ್ಲಾನ್‌ನಲ್ಲಿ ಯಾವುದೇ ಡೇಟಾ ಪ್ಯಾಕ್ ಲಭ್ಯವಿರುವದಿಲ್ಲ.
ಇದನ್ನೂ ಓದಿ: ಜಿಯೋ, ಏರ್‌ಟೆಲ್‌ನಿಂದ ಡೇಟಾ ಇಲ್ಲದ 90 ದಿನದ ಪ್ಲಾನ್ ಬಿಡುಗಡೆ; ಬೆಲೆ ಎಷ್ಟು? ಗ್ರಾಹಕರಿಗೆ ಲಾಭವೋ? ನಷ್ಟವೋ?
1. ಏರ್‌ಟೆಲ್ 469 ರೂಪಾಯಿ: ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದು ಹಾಗೂ ಉಚಿತವಾಗಿ 900 ಎಸ್‌ಎಂಎಸ್ ಕಳುಹಿಸಬಹುದು. 84 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲಾನ್ ಹೊಂದಿದೆ.
2. ಏರ್‌ಟೆಲ್ 1,849 ರೂಪಾಯಿ: ಏರ್‌ಟೆಲ್ ಬಳಕೆದಾರರು ಒಂದು ವರ್ಷಕ್ಕಾಗಿ (365 ದಿನಗಳು) 1,849 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು. ಈ ಯೋಜನೆಯಡಿ ಗ್ರಾಹಕರು ಉಚಿತವಾಗಿ 3,600 ಎಸ್‌ಎಂಎಸ್‌ಗಳನ್ನು ಕಳುಹಿಸಬಹುದು.
ಇದನ್ನೂ ಓದಿ: ಜಿಯೋ, ಏರ್ಟೆಲ್‌ಗಿಂತ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಘೋಷಿಸಿದ BSNL
