ಟ್ರಾಯ್ ಆದೇಶದಂತೆ, ಜಿಯೋ ಮತ್ತು ಏರ್‌ಟೆಲ್ ಡೇಟಾ ಇಲ್ಲದ ವಾಯ್ಸ್-ಮಾತ್ರ ಪ್ಲಾನ್‌ಗಳನ್ನು ಬಿಡುಗಡೆ ಮಾಡಿವೆ. ಈ ಪ್ಲಾನ್‌ಗಳು 2G ಬಳಕೆದಾರರಿಗೆ ಮತ್ತು ಎರಡು ಸಿಮ್ ಬಳಸುವವರಿಗೆ ಅನುಕೂಲಕರವಾಗಿದೆ.

ನವದೆಹಲಿ: ಟೆಲಿಕಾಂ ರೆಗುಲೇಟರ್ TRAI ಆದೇಶದ ಮೇರೆಗೆ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಕೇವಲ ವಾಯ್ಸ್ ಪ್ಲಾನ್ ಲಾಂಚ್ ಮಾಡಿವೆ. ಈ ಎರಡು ಟೆಲಿಕಾಂ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲಿ ಓನ್ಲಿ ವಾಯ್ಸ್ ಪ್ಲಾನ್‌ಗಳ ಕುರಿತ ಮಾಹಿತಿಯನ್ನು ಪ್ರಕಟಿಸಿವೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಕೇವಲ ವಾಯ್ಸ್ ಕಾಲ್ ಮತ್ತು ಎಸ್‌ಎಂಎಸ್‌ಗಳ ಲಾಭ ಸಿಗಲಿದ್ದು, ಯಾವುದೇ ಇಂಟರ್‌ನೆಟ್‌ ಪ್ಯಾಕ್ ಆಕ್ಟಿವ್ ಆಗಲ್ಲ. ಈ ಪ್ಲಾನ್‌ಗಳು 2G ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ತರಲಾಗಿದೆ. ಬೇರೆ ಯಾವ ಆಯ್ಕೆಗಳಿಲ್ಲದೇ ಅನಿವಾರ್ಯವಾಗಿ ಡೇಟಾ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುತ್ತಿದ್ದ 2G ಬಳಕೆದಾರರಿಗೆ ಮತ್ತು ಎರಡು ಸಿಮ್ ಬಳಸುವ ಗ್ರಾಹಕರಿಗೆ ರಿಲೀಫ್ ಸಿಗಲಿದೆ. ದೇಶದಲ್ಲಿ ಕೋಟ್ಯಂತರ ಜನರು ಅದರಲ್ಲಿಯೂ ಗ್ರಾಮೀಣ ಭಾಗದ ಜನತೆ 2G ಸಿಮ್ ಬಳಕೆ ಮಾಡುತ್ತಿದ್ದಾರೆ. 

ಟೆಲಿಕಾಂ ರೆಗ್ಯುಲೇಟರ್ 23ನೇ ಡಿಸೆಂಬರ್, 2024ರಂದು ಬಿಎಸ್ಎನ್ಎಲ್ ಸೇರಿದಂತೆ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳಿಗೆ "ವಾಯ್ಸ್ ಓನ್ಲಿ" ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿತ್ತು. ಇದಕ್ಕಾಗಿ ಒಂದು ತಿಂಗಳ ಗಡವು ಸಹ ನೀಡಲಾಗಿತ್ತು. ಯಾರಿಗೂ ಡೇಟಾ ಅವಶ್ಯಕತೆ ಇಲ್ಲವೋ ಅಂತಹ ಬಳಕೆದಾರರು 2G ಪ್ಲಾನ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. 

Reliance Jio 84 And 365 Days Plan
ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ 458 ರೂಪಾಯಿ ಮತ್ತು 1,958 ರೂಪಾಯಿ ಪ್ಲಾನ್ ಬಿಡುಗಡೆಗೊಳಿಸಿದೆ. 458 ರೂಪಾಯಿ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ಅಡಿಯಲ್ಲಿ ಗ್ರಾಹಕರು ಯಾವುದೇ ನೆಟ್‌ವರ್ಕ್‌ಗೆ ದೇಶದಾದ್ಯಂತ ಅನ್‌ಲಿಮಿಟೆಡ್ ಕರೆ ಮಾಡಬಹುದಾಗಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರು ಉಚಿತವಾಗಿ 1,000 ಎಸ್‌ಎಂಎಸ್‌ಗಳನ್ನು ಕಳುಹಿಸಬಹುದಾಗಿದೆ. 

ಇದನ್ನೂ ಓದಿ: ಸ್ವದೇಶಿ ಕಂಪನಿ ಏರ್‌ಟೆಲ್‌ನಿಂದ ಉಪಗ್ರಹ ಆಧಾರಿತ ಇಂಟರ್ನೆಟ್‌?: ರಂಜನ್‌ ಮಿತ್ತಲ್‌ ಮಾಹಿತಿ

ಇನ್ನು 1,958 ರೂಪಾಯಿಯ ರೀಚಾರ್ಜ್ ಪ್ಲಾನ್ 365 ದಿನ (1 ವರ್ಷ) ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ್ರೆ ಒಂದು ವರ್ಷದವರೆಗೆ ಯಾವುದೇ ನೆಟ್‌ವರ್ಕ್‌ಗೆ ದೇಶದಾದ್ಯಂತ ಅನ್‌ಲಿಮಿಟೆಡ್ ಕರೆ ಮಾಡಬಹುದು. ಇದರ ಜೊತೆಯಲ್ಲಿ ಒಟ್ಟು 3,600 ಎಸ್‌ಎಂಎಸ್‌ಗಳನ್ನು ಉಚಿತವಾಗಿ ಕಳುಹಿಸಬಹುದು. ಆದ್ರೆ ಈ ಎರಡು ಪ್ಯಾಕ್‌ನಲ್ಲಿ ಯಾವುದೇ ಡೇಟಾ ಲಭ್ಯವಿರಲ್ಲ.

Airtel Voice Only Plan
ಏರ್‌ಟೆಲ್ 509 ರೂಪಾಯಿಯಲ್ಲಿ 84 ದಿನ ವ್ಯಾಲಿಡಿಟಿ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್‌ನಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು 900 ಫ್ರಿ ಎಸ್‌ಎಂಎಸ್ ಕಳುಹಿಸಬಹುದು. ಮತ್ತೊಂದು ಪ್ಲಾನ್‌ 365 ದಿನಗಳಾಗಿದ್ದು, ಇದಕ್ಕಾಗಿ ಗ್ರಾಹಕರು 1,999 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್ ಮತ್ತು 300 ಎಸ್‌ಎಂಎಸ್ ಆಫರ್ ನೀಡಲಾಗಿದೆ.

ಇದನ್ನೂ ಓದಿ: 26 ಸಾವಿರ ರಿಯಾಯಿತಿ, ₹9999ಕ್ಕೆ ಸ್ಮಾರ್ಟ್‌ಫೋನ್;ರಿಲಯನ್ಸ್ ಡಿಜಿಟಲ್ ಸೇಲ್‌ನಲ್ಲಿ ಭರ್ಜರಿ ಆಫರ್