ಜಿಯೋ, ಏರ್ಟೆಲ್‌ಗಿಂತ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಘೋಷಿಸಿದ BSNL
ಬಿಎಸ್ಎನ್ಎಲ್ ಈಗಾಗಲೇ ಹಲವು ರೀಚಾರ್ಜ್ ಪ್ಲಾನ್ ಘೋಷಿಸಿದೆ. ಇದೀಗ ಹೊಸ ಪ್ಲಾನ್ ಜಾರಿಗೊಳಿಸಿದೆ. ಈ ರೀಚಾರ್ಜ್ ಪ್ಲಾನ್ ಏರ್ಟೆಲ್, ಜಿಯೋಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಬಿಎಸ್ಎನ್ಎಲ್ ಬಳಕೆದಾರರಿಗೆ ಜಾಕ್ ಪಾಟ್
ಭಾರತದಲ್ಲಿ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಖಾಸಗಿ ಕಂಪನಿಗಳು ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ದೂರಸಂಪರ್ಕ ಸೇವೆ ಒದಗಿಸುತ್ತಿವೆ. ಈ ಮೊಬೈಲ್ ರೀಚಾರ್ಜ್ ಕಂಪನಿಗಳು ಕರೆ, SMS ಮತ್ತು ಡೇಟಾ ಸೌಲಭ್ಯವಿರುವ ಪ್ಯಾಕೇಜ್ ರೀಚಾರ್ಜ್ ಯೋಜನೆಗಳನ್ನು ಜಾರಿಗೊಳಿಸಿವೆ.
ಕರೆ ಮತ್ತು SMSಗಳಿಗೆ ಪ್ರತ್ಯೇಕ ಯೋಜನೆಗಳಿಲ್ಲ. ಹೀಗಾಗಿ ಡೇಟಾ ಬಳಕೆ ಅಗತ್ಯವಿಲ್ಲದ ಗ್ರಾಹಕರು ಕೂಡ ಕರೆ, SMS ಮತ್ತು ಡೇಟಾ ಸೌಲಭ್ಯವಿರುವ ಪ್ಯಾಕೇಜ್‌ಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಈ ಪ್ಯಾಕೇಜ್‌ಗಳಿಗೆ ಶುಲ್ಕ ಹೆಚ್ಚಾಗಿದೆ. ಆದರೆ ಟ್ರಾಯ್ ಸೂಚನೆಯಂತೆ ಇದೀಗ ಎಲ್ಲಾ ಟೆಲಿಕಾಂ ಕಂಪನಿಗಳು ಹೊಸ ಕರೆ ಹಾಗೂ ಎಸ್ಎಂಎಸ್ ಪ್ಲಾನ್ ಘೋಷಿಸಿದೆ.
ಟ್ರಾಯ್ ಆದೇಶ
ಕರೆ ಮತ್ತು SMSಗಳಿಗೆ ಪ್ರತ್ಯೇಕ ಯೋಜನೆಗಳನ್ನು ತರಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಆದೇಶಿಸಿದೆ. ಇದರ ನಂತರ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕರೆ ಮತ್ತು SMSಗಳಿಗೆ ಪ್ರತ್ಯೇಕ ಯೋಜನೆಗಳನ್ನು ತಂದಿವೆ.
ಆದರೆ ಬಿಎಸ್ಎನ್ಎಲ್ ಈ ಎರಡೂ ಕಂಪನಿಗಳಿಗಿಂತ ಕಡಿಮೆ ಬೆಲೆಯಲ್ಲಿ ಕರೆ ಮತ್ತು SMSಗಳಿಗೆ ಪ್ರತ್ಯೇಕ ಯೋಜನೆಯನ್ನು ತಂದಿದೆ.
ಬಿಎಸ್ಎನ್ಎಲ್ ಪ್ಲಾನ್
ಬಿಎಸ್ಎನ್ಎಲ್ ₹439 ಬೆಲೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಪ್ಲಾನ್ 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು 700 SMSಗಳು ನಿಮಗೆ ಸಿಗುತ್ತವೆ. ಜಿಯೋ ಇದೇ ಯೋಜನೆಯನ್ನು ₹448 ಬೆಲೆಯಲ್ಲಿ ನೀಡುತ್ತಿದೆ, ಆದರೆ ವ್ಯಾಲಿಟಿಡಿ ದಿನ ಕೂಡ ಕಡಿಮೆ. ಆದರೆ ಬಿಎಸ್ಎನ್ಎಲ್ ₹439 ಪ್ಲಾನ್ ಅದಕ್ಕಿಂತ ಕಡಿಮೆ ಬೆಲೆಯಲ್ಲಿದೆ.
ಬಿಎಸ್ಎನ್ಎಲ್ ಬೆಸ್ಟ್ ಪ್ಲಾನ್
ಏರ್ಟೆಲ್‌ನ ಇದೇ ಯೋಜನೆ ₹469 ಇರುವಾಗ, ಬಿಎಸ್ಎನ್ಎಲ್ ₹439 ಪ್ಲಾನ್ ಇದಕ್ಕಿಂತ ₹30 ಕಡಿಮೆ ಇದೆ. ಈ ಪ್ಲಾನ್‌ನಲ್ಲಿ ಜಿಯೋ ಮತ್ತು ಏರ್ಟೆಲ್ 84 ದಿನಗಳ ವ್ಯಾಲಿಡಿಟಿ ನೀಡುತ್ತಿರುವಾಗ, ಬಿಎಸ್ಎನ್ಎಲ್ 90 ದಿನಗಳ ವ್ಯಾಲಿಡಿಟಿ ನೀಡುತ್ತದೆ.
SMSಗಳ ವಿಷಯದಲ್ಲಿ ಜಿಯೋ (900 SMS), ಏರ್ಟೆಲ್ (1000 SMS) ಗಿಂತ ಬಿಎಸ್ಎನ್ಎಲ್ (700 SMS) ಕಡಿಮೆ ನೀಡುತ್ತದೆ. ಆದರೆ ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿ ನೀಡುವುದರಿಂದ ಜಿಯೋ, ಏರ್ಟೆಲ್‌ಗಿಂತ ಬಿಎಸ್ಎನ್ಎಲ್ ಪ್ಲಾನ್ ಉತ್ತಮವಾಗಿದೆ.