Asianet Suvarna News Asianet Suvarna News

ಇಶಾ ಅಂಬಾನಿಯ 8.4 ಲಕ್ಷ ಕೋಟಿ ಮೌಲ್ಯದ ಸಂಸ್ಥೆಯ ಸಕ್ಸಸ್‌ಗೆ ಕಾರಣವಾಗಿರೋ ಭಕ್ತಿ ಮೋದಿ ಯಾರು?

ಮುಕೇಶ್ ಅಂಬಾನಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. ಕೋಟಿಗಟ್ಟಲೆ ವ್ಯವಹಾರವನ್ನು ನಿರ್ವಹಿಸುತ್ತಾರೆ. ಹಾಗೆಯೇ ಅವರ ಮಗಳು ಇಶಾ ಅಂಬಾನಿ ಸಹ ಉದ್ಯಮದಲ್ಲಿ ಸೋಲಿಲ್ಲದೆ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಆದರೆ ಇವರ ಬಿಸಿನೆಸ್ ಸಕ್ಸಸ್‌ಗೆ ಕಾರಣವಾಗಿದ್ದು ಯಾವುದೇ ಬಿಸಿನೆಸ್ ಎಕ್ಸ್‌ಪರ್ಟ್‌ ಸಜೆಶನ್ಸ್ ಅಲ್ಲ ಬದಲಿಗೆ ಭಕ್ತಿ ಮೋದಿ ಅನ್ನೋ ಯುವತಿ. ಯಾರಾಕೆ?

Bhakti Modi, Mukesh Ambanis right hands daughter, helps Isha Ambani run Rs 8.4 lakh crore firm Vin
Author
First Published Nov 15, 2023, 12:34 PM IST

ಏಷ್ಯಾ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ. ಮುಕೇಶ್ ಅಂಬಾನಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. ಕೋಟಿಗಟ್ಟಲೆ ವ್ಯವಹಾರವನ್ನು ನಿರ್ವಹಿಸುತ್ತಾರೆ. ಈ ಉದ್ಯಮದಲ್ಲಿ ಅವರ ಕುಟುಂಬ ಸದಸ್ಯರು ಸಹ ಅವರಿಗೆ ನೆರವಾಗುತ್ತಾರೆ.  ಉದ್ಯಮದ  ಯಶಸ್ಸಿಗಾಗಿ, ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಸ್ನೇಹಿತ ಆನಂದ್ ಜೈನ್, ಮಗಳು ಇಶಾ ಅಂಬಾನಿ, ಮಗ ಆಕಾಶ್ ಅಂಬಾನಿ, ಅನಂತರ್ ಅಂಬಾನಿ ಮತ್ತು ಇತರರು ಕೈ ಜೋಡಿಸುತ್ತಾರೆ. 

ಮುಕೇಶ್ ಅಂಬಾನಿ ತಮ್ಮ ಬಿಸಿನೆಸ್‌ನಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಅವರ ಮನೋಜ್ ಮೋದಿ. ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದ ಆಪ್ತರಲ್ಲಿ ಮನೋಜ್‌ ಮೋದಿ ಸಹ ಒಬ್ಬರು. ರಿಲಯನ್ಸ್ ಇಂಡಸ್ಟ್ರೀಸ್‌ನ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಇವರನ್ನು ಮುಕೇಶ್ ಅಂಬಾನಿ ಬಲಗೈ ಎಂದು ಕರೆಯಲಾಗುತ್ತದೆ. 

ದೇಶದಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಹುಟ್ಟಿದ್ದು ಭಾರತದಲ್ಲಿ ಅಲ್ವಾ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ

ಮುಕೇಶ್ ಅಂಬಾನಿ ಬಲಗೈ ಮನೋಜ್ ಮೋದಿ ಮಗಳು ಭಕ್ತಿ ಮೋದಿ
ಬಿಸಿನೆಸ್‌ನಲ್ಲಿ ಮುಕೇಶ್‌ ಅಂಬಾನಿ ಮತ್ತು ಮನೋಜ್ ಮಂದಿ ನಂಟು ನೆಕ್ಸ್ಟ್ ಪೀಳಿಗೆಗೂ ಮುಂದುವರಿದಿದೆ. ಮನೋಜ್ ಮೋದಿ ಅವರ ಪುತ್ರಿ ಭಕ್ತಿ ಮೋದಿ ಈಗ ಇಶಾ ಅಂಬಾನಿಯವರ ರಿಲಯನ್ಸ್ ರಿಟೇಲ್‌ನಲ್ಲಿ ಪ್ರಮುಖ ಕಾರ್ಯನಿರ್ವಾಹಕರಾಗಿದ್ದಾರೆ. ಕಂಪನಿಯು 8.4 ಲಕ್ಷ ಕೋಟಿ ಮೌಲ್ಯ ಲಾಭವನ್ನು (Profit) ಗಳಿಸಲು ಸಹಾಯ ಮಾಡಿದ್ದಾರೆ.

ಇತ್ತೀಚೆಗೆ ರಿಲಯನ್ಸ್ ರಿಟೇಲ್‌ನ ಸೌಂದರ್ಯ ವ್ಯವಹಾರಗಳಲ್ಲಿ ಭಕ್ತಿ ಮೋದಿ ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿದೆ. ಅವರನ್ನು ಕಳೆದ ವರ್ಷ ರಿಲಯನ್ಸ್ ಬ್ರಾಂಡ್ಸ್‌ನಲ್ಲಿ ನಿರ್ದೇಶಕಿ ಎಂದು ಘೋಷಿಸಲಾಯಿತು. ರಿಲಯನ್ಸ್ ಬ್ರಾಂಡ್‌ಗಳು ಪಾಲುದಾರಿಕೆ ಮತ್ತು ಜಾಗತಿಕ ಐಷಾರಾಮಿ ಬ್ರಾಂಡ್‌ಗಳನ್ನು ಭಾರತಕ್ಕೆ ತರುತ್ತದೆ.  Balenciaga, Armani, Hugo Boss, Versace, Michael Kors ಮತ್ತು ಇತರರು ರಿಲಯನ್ಸ್ ರೀಟೇಲ್‌ನ ಪಾಲುದಾರ ಬ್ರಾಂಡ್ ಆಗಿ ಭಾರತದಲ್ಲಿದ್ದಾರೆ.

ದೀಪಾವಳಿಗೆ ನೀತಾ ಅಂಬಾನಿಗೆ ದುಬಾರಿ ಕಾರು ಗಿಫ್ಟ್‌ ಮಾಡಿದ ಮುಕೇಶ್ ಅಂಬಾನಿ; ಅಬ್ಬಬ್ಬಾ ಬೆಲೆಯೆಷ್ಟು ಗೊತ್ತಾ?

ಭಕ್ತಿ ಮೋದಿ ಅವರು ಸೌಂದರ್ಯ ಉತ್ಪನ್ನಗಳ (Beauty products) ವೇದಿಕೆ ತೀರಾದ ಸಹ ಸಂಸ್ಥಾಪಕರಾಗಿದ್ದಾರೆ. ಬ್ರ್ಯಾಂಡ್‌ನ ಕಾರ್ಯತಂತ್ರ ಮತ್ತು ಕಾರ್ಯಗತಗೊಳಿಸುವಿಕೆಯನ್ನು ನೋಡಿಕೊಳ್ಳುತ್ತಾರೆ. ತೀರಾವನ್ನು ಇಶಾ ಅಂಬಾನಿಯವರು ನೋಡಿಕೊಳ್ಳುತ್ತಾರೆ ಮತ್ತು ಇದು Nykaa, Tata Cliq Palette, Myntra ಮತ್ತು ಇತರರ ವಿರುದ್ಧ ಸ್ಪರ್ಧಿಸುತ್ತದೆ. 

ಭಕ್ತಿ ಮೋದಿ ಆರಂಭದಲ್ಲಿ  ರಿಲಯನ್ಸ್ ಬ್ರ್ಯಾಂಡ್‌ನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಉದ್ಯೋಗ ಪ್ರಾರಂಭಿಸಿದರು. ಆ ನಂತರ ಹಲವು ವರ್ಷಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಠಿಣ ಪರಿಶ್ರಮ, ಜ್ಞಾನ, ಕೌಶಲ್ಯ ಮತ್ತು ದೃಢಸಂಕಲ್ಪದಿಂದ ಭಕ್ತಿ ರಿಲಯನ್ಸ್‌ನ ಉನ್ನತ ಕಾರ್ಯನಿರ್ವಾಹಕರ ಹುದ್ದೆಯನ್ನು ಏರಿದ್ದಾರೆ.

Follow Us:
Download App:
  • android
  • ios