ದೀಪಾವಳಿಗೆ ನೀತಾ ಅಂಬಾನಿಗೆ ದುಬಾರಿ ಕಾರು ಗಿಫ್ಟ್ ಮಾಡಿದ ಮುಕೇಶ್ ಅಂಬಾನಿ; ಅಬ್ಬಬ್ಬಾ ಬೆಲೆಯೆಷ್ಟು ಗೊತ್ತಾ?
ಅಂಬಾನಿ ಕುಟುಂಬದ ರಾಯಲ್ ಲೈಫ್‌ಸ್ಟೈಲ್ ಆಗಾಗ ಸುದ್ದಿಯಲ್ಲಿರುತ್ತದೆ. ಲಕ್ಸುರಿಯಸ್ ಬಂಗಲೆ, ಕಾರು, ಪಾರ್ಟಿಗಳು ಹೈಲೈಟ್ ಆಗುತ್ತವೆ. ಹಾಗೆಯೇ ಸದ್ಯ ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿಗೆ ದೀಪಾವಳಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 90 ಶತಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಕೋಟಿ ಕೋಟಿ ಬೆಲೆಬಾಳುವ ಬಂಗಲೆ, ವಿಲ್ಲಾ, ಕಾರುಗಳ ಮಾಲೀಕರೂ ಹೌದು. ಅಂಬಾನಿ ಕುಟುಂಬ ನಡೆಸುವ ಲಕ್ಸುರಿಯಸ್ ಪಾರ್ಟಿ ಆಗಾಗ ಸುದ್ದಿಯಲ್ಲಿರುತ್ತದೆ. ಬಾಲಿವುಡ್ ಸೆಲೆಬ್ರಿಟಿಗಳು, ಸ್ಟಾರ್ ಕ್ರಿಕೆಟಿಗರು, ಬೃಹತ್ ಉದ್ಯಮಿಗಳು ಇದರಲ್ಲಿ ಭಾಗವಹಿಸುತ್ತಾರೆ. ಅಂಬಾನಿ ಕುಟುಂಬದ ಸದಸ್ಯರು ಆಗಾಗ ಸ್ಟೈಲಿಶ್, ಕಾಸ್ಟ್ಲೀಯೆಸ್ಟ್ ಉಡುಪು, ಆಕ್ಸೆಸರೀಸ್ ಧರಿಸಿ ಮಿಂಚುತ್ತಾರೆ. ಲಕ್ಷ ಲಕ್ಷ ಮೌಲ್ಯದ ಹ್ಯಾಂಡ್‌ಬ್ಯಾಂಗ್, ಚಪ್ಪಲಿ ಎಲ್ಲರ ಗಮನ ಸೆಳೆಯುತ್ತದೆ.
ಮುಕೇಶ್ ಅಂಬಾನಿ ಕುಟುಂಬದ ವ್ಯವಹಾರಗಳು, ಪರೋಪಕಾರಿ ಮತ್ತು ಅತಿರಂಜಿತ ಜೀವನಶೈಲಿ ಆಗಾಗ ಸುದ್ದಿಯಲ್ಲಿರುತ್ತದೆ. ಅಂಬಾನಿ ಕುಟುಂಬವು ಭಾರತದ ಅತ್ಯಂತ ಶ್ರೀಮಂತ ಕುಟುಂಬವಾಗಿದೆ ಮತ್ತು ಆಂಟಿಲಿಯಾ ಎಂಬ 15000 ಕೋಟಿ ರೂ.ಗಳ ಮನೆಯಲ್ಲಿ ವಾಸಿಸುತ್ತದೆ. ಅಂಟಿಲಿಯಾದಲ್ಲಿ ಪ್ರಪಂಚದಾದ್ಯಂತ ಇರುವ ಕಾಸ್ಟ್ಲೀ ಕಾರು ಕಲೆಕ್ಷನ್‌ಗಳಿವೆ. 15.80 ಟ್ರಿಲಿಯನ್ ಕಂಪನಿಯನ್ನು ನಡೆಸುತ್ತಿರುವ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪಾರ್ಕಿಂಗ್ ಸ್ಥಳದಲ್ಲಿ ದೇಶದ ಕೆಲವು ಅತ್ಯಂತ ದುಬಾರಿ ಕಾರುಗಳನ್ನು ಕಾಣಬಹುದು.
ಅದ್ಧೂರಿ ಡ್ರೆಸ್, ಡೈಮಂಡ್ ನೆಕ್ಲೇಸ್ ಧರಿಸಿ ಮಿಂಚಿದ ಅಂಬಾನಿ ಸೊಸೆ; ಅಂಗೈಯಗಲದ ಪರ್ಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ!
ಪತ್ನಿ ನೀತಾ ಅಂಬಾನಿಗೆ ದುಬಾರಿ ಕಾರು ಉಡುಗೊರೆಯಾಗಿ ನೀಡಿದ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ, ಆಕಾಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಆಂಟಿಲಿಯಾವನ್ನು ಸೂಪರ್ ದುಬಾರಿ ಕಾರು ಬೆಂಗಾವಲುಗಳಲ್ಲಿ ಬಿಟ್ಟು ಹೋಗುವುದನ್ನು ಕಾಣಬಹುದು ಮತ್ತು ಆ ಬೆಂಗಾವಲು ಪಡೆಗೆ ಹೊಸ ಸೇರ್ಪಡೆಯೆಂದರೆ 10 ಕೋಟಿ ರೂ. ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿ. ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಪತ್ನಿ ನೀತಾ ಅಂಬಾನಿಗೆ ಈ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ನೀತಾ ಅಂಬಾನಿ ಯಾವಾಗಲೂ ಕಾಸ್ಟ್ಲೀ ಡಿಸೈನರ್ ಡ್ರೆಸ್, ಜ್ಯುವೆಲ್ಲರಿ, ಪರ್ಸ್ ಹಿಡಿದು ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ. ನೀತಾ ಕಾಸ್ಟ್ಲೀ ವಸ್ತುಗಳನ್ನು ನಿಸ್ಸಂದೇಹವಾಗಿ ಇಷ್ಟಪಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹೀಗಿರುವಾಗ, ದೀಪಾವಳಿಗೆ ಮುಂಚಿತವಾಗಿ ಮುಕೇಶ್ ಅಂಬಾನಿ ತನ್ನ ಪತ್ನಿ ನೀತಾ ಅಂಬಾನಿಗೆ 10 ಕೋಟಿ ರೂಪಾಯಿಗಳ ಎಸ್‌ಯುವಿ ಉಡುಗೊರೆಯಾಗಿ ನೀಡಿದ್ದಾರೆ. ಕಾರಿನ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ CS 12 Vlogs ಹಂಚಿಕೊಂಡಿದೆ. ನೀತಾ ಅಂಬಾನಿಯವರ ಹೊಸ ರೋಲ್ಸ್ ರಾಯ್ಸ್ ಈಗ ಭಾರತದ ಅತ್ಯಂತ ದುಬಾರಿ ಕಾರು ಎಂದು ಗುರುತಿಸಿಕೊಂಡಿದೆ.
ಜಗತ್ತಿನ 6ನೇ ಅತಿದೊಡ್ಡ ಶ್ರೀಮಂತರಾಗಿದ್ದ ಅನಿಲ್ ಅಂಬಾನಿ ದಿವಾಳಿಯಾಗಿದ್ದು ಆ ಒಂದು ತಪ್ಪಿನಿಂದ!
ದೇಶದ ಕೆಲವೇ ಸೆಲೆಬ್ರಿಟಿಗಳಲ್ಲಿದೆ ಈ ಕಾಸ್ಟ್ಲೀ ಕಾರು
ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಭಾರತದಲ್ಲಿನ ಅತ್ಯಂತ ದುಬಾರಿ ಎಸ್‌ಯುವಿಯಾಗಿದೆ.ದೇಶದಲ್ಲಿ ಕೆಲವೇ ಸೆಲೆಬ್ರಿಟಿಗಳು ಈ ಕಾಸ್ಟ್ಲೀ ಕಾರನ್ನು ಹೊಂದಿದ್ದಾರೆ. ಭಾರತದಲ್ಲಿನ ಜನಪ್ರಿಯ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಮಾಲೀಕರಲ್ಲಿ ಒಬ್ಬರು ಬಾಲಿವುಡ್ ಸ್ಟಾರ್ ಶಾರುಖ್ ಖಾನ್. ಮುಖೇಶ್ ಅಂಬಾನಿ ಒಡೆತನದ ಇತರ ರೋಲ್ಸ್ ರಾಯ್ಸ್ SUV ಗೆ ಹೋಲಿಸಿದರೆ ನೀತಾ ಅಂಬಾನಿಯವರ ಹೊಸ SUV ವಿಭಿನ್ನ ಕಿತ್ತಣೆ ಬಳ್ಳದಲ್ಲಿದೆ.
ರೋಲ್ಸ್ ರಾಯ್ಸ್ ಖರೀದಿದಾರರಿಗೆ ತಮ್ಮ ಆಯ್ಕೆಯ ಪ್ರಕಾರ ಕಾರನ್ನು ಕಸ್ಟಮೈಸ್ ಮಾಡಲು ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುತ್ತದೆ. ಹುಡ್ ಅಡಿಯಲ್ಲಿ, ಅಲ್ಟ್ರಾ-ಐಷಾರಾಮಿ SUV 6.75-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ನಿಂದ ಚಾಲಿತವಾಗಿದ್ದು ಅದು 600 Bhp ಮತ್ತು 900 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅದೇನೆ ಇರ್ಲಿ,ಒಟ್ನಲ್ಲಿ ಅಂಬಾನಿ ಫ್ಯಾಮಿಲಿಯ ಕಾಸ್ಟ್ಲೀ ಕಾರು ಕಲೆಕ್ಷನ್‌ಗೆ ಸದ್ಯ ಹೊಸ ಕಾರೊಂದು ಸೇರ್ಪಡೆಯಾಗಿದೆ.