MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ದೇಶದಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಹುಟ್ಟಿದ್ದು ಭಾರತದಲ್ಲಿ ಅಲ್ವಾ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ

ದೇಶದಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಹುಟ್ಟಿದ್ದು ಭಾರತದಲ್ಲಿ ಅಲ್ವಾ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ

ಖ್ಯಾತ ಭಾರತೀಯ ವಾಣಿಜ್ಯೋದ್ಯಮಿ ಮತ್ತು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಬಗ್ಗೆ ಪ್ರತ್ಯೇಕ ಪರಿಚಯದ ಅಗತ್ಯವಿಲ್ಲ. ಮುಕೇಶ್ ಅಂಬಾನಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಅವರ ಬಗ್ಗೆ ನೀವು ತಿಳಿದಿರದ ಇತರ ಹಲವಾರು ವಿಚಾರಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

2 Min read
Author : Vinutha Perla
Published : Nov 09 2023, 10:36 AM IST
Share this Photo Gallery
  • FB
  • TW
  • Linkdin
  • Whatsapp
18

ಖ್ಯಾತ ಭಾರತೀಯ ವಾಣಿಜ್ಯೋದ್ಯಮಿ ಮತ್ತು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಬಗ್ಗೆ ಪ್ರತ್ಯೇಕ ಪರಿಚಯದ ಅಗತ್ಯವಿಲ್ಲ. ಮುಕೇಶ್ ಅಂಬಾನಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. 1966ರಲ್ಲಿ ರಿಲಯನ್ಸ್‌ಗೆ ಅಡಿಪಾಯ ಹಾಕಿದ ಉದ್ಯಮಿ ಧೀರೂಭಾಯಿ ಅಂಬಾನಿ ಅವರ ಮಗ. ಪ್ರಸ್ತುತ ಅಂಬಾನಿಗಳ ಮೂರನೇ ತಲೆಮಾರಿನವರು ವ್ಯವಹಾರವನ್ನು ವಹಿಸಿಕೊಂಡಿದ್ದಾರೆ.

28

ಮುಕೇಶ್ ಅಂಬಾನಿ ಏಪ್ರಿಲ್ 19, 1957ರಂದು ಗುಜರಾತಿ ಕುಟುಂಬದಲ್ಲಿ ಜನಿಸಿದರು. ಭಾರತದ ಉದ್ಯಮ ಲೋಕದಲ್ಲಿ ಅತೀ ಕೋಟ್ಯಾಧಿಪತಿ ಎಂದು ಗುರುತಿಸಿಕೊಂಡಿದ್ದಾರೆ. ಮುಕೇಶ್ ಅಂಬಾನಿ ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್‌ನ್ನು ಮುನ್ನಡೆಸುತ್ತಾರೆ. ಇದು ಹಲವು ಬ್ರ್ಯಾಂಡ್‌ಗಳನ್ನು ಹೊಂದಿದ್ದು, ಕೋಟಿ ಕೋಟಿ ವ್ಯವಹಾರ ನಡೆಸುತ್ತಿದೆ.
 

38

ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ 2023ನೇ ಸಾಲಿನ ಟಾಪ್‌ 100 ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಯಾವತ್ತಿನಂತೆ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ನೀತಾ ಅಂಬಾನಿ, ಮುಕೇಶ್ ಅಂಬಾನಿಯ ಪತ್ನಿಯಾಗಿದ್ದು ದಂಪತಿಗೆ ಇಶಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ ಈ ಮೂವರು ಮಕ್ಕಳಿದ್ದಾರೆ.

48

ಆದರೆ ಮೇಲೆ ಹೇಳಿದ ಈ ಕೆಲವು ವಿಷಯಗಳು ಅಲ್ಲದೆಯೂ ಮುಕೇಶ್ ಅಂಬಾನಿ ಬಗ್ಗೆ ತಿಳಿದುಕೊಳ್ಳಬೇಕಾದ ಹಲವಾರು ಇತರ ಆಸಕ್ತಿಕರ ವಿಚಾರಗಳಿವೆ. ಅಂಬಾನಿ ಭಾರತದಲ್ಲಿ ಬೃಹತ್‌ ಉದ್ಯಮ ಹೊಂದಿರುವ ಕಾರಣ ಮೂಲತಃ ಭಾರತದವರೇ ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ ವಾಸ್ತವ ಅದಲ್ಲ. ಮುಕೇಶ್ ಅಂಬಾನಿ ವಿದೇಶದಲ್ಲಿ ಜನಿಸಿದರು. 

58

ಮುಕೇಶ್ ಅಂಬಾನಿ ಈಗಿನ ಯೆಮೆನ್‌ನ ಏಡೆನ್‌ನ ಬ್ರಿಟಿಷ್ ಕ್ರೌನ್ ಕಾಲೋನಿಯಲ್ಲಿ ಜನಿಸಿದರು. ಸ್ಪಲ್ಪ ಸಮಯದ ವರೆಗೆ ಅವರು ಇದೇ ನಗರದಲ್ಲಿ ವಾಸಿಸುತ್ತಿದ್ದರು. 1958ರಲ್ಲಿ, ಧೀರೂಭಾಯಿ ಅಂಬಾನಿ ಭಾರತಕ್ಕೆ ಮರಳಲು ನಿರ್ಧರಿಸಿದರು. ಕುಟುಂಬ ಸಮೇತರಾಗಿ ಮುಂಬೈಗೆ ಸ್ಥಳಾಂತರಗೊಂಡರು. 1970ರ ದಶಕದ ವರೆಗೆ ಮುಂಬೈನ ಬುಲೇಶ್ವರದಲ್ಲಿ ಎರಡು ಮಲಗುವ ಕೋಣೆಗಳ ಅಪಾರ್ಟ್‌ಮೆಂಟ್‌ನಲ್ಲಿ ಕಷ್ಟಪಟ್ಟು ಜೀವನ ನಡೆಸಿದರು. 

68

ಆ ನಂತರ ಮುಕೇಶ್ ಅಂಬಾನಿ ಮುಂಬೈನ ಪೆದ್ದಾರ್ ರಸ್ತೆಯಲ್ಲಿರುವ ಹಿಲ್ ಗ್ರೇಂಜ್ ಹೈಸ್ಕೂಲ್‌ಗೆ ಹೋದರು. ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದಿದರು.

78

ನಂತರ ಅವರು MBA ಮುಂದುವರಿಸಲು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಹೋದರು ಆದರೆ 1980ರಲ್ಲಿ ತಮ್ಮ ತಂದೆಯೊಂದಿಗೆ ವ್ಯಾಪಾರದಲ್ಲಿ ತೊಡಗಿಸಿಕೊಂಡರು.

88

ಮುಕೇಶ್ ಅಂಬಾನಿ ಅವರು ಸೇವ್ ಪುರಿ ಮತ್ತು ಚಾಟ್‌ಗಳಂತಹ ಬೀದಿ ಆಹಾರವನ್ನು ಇಷ್ಟಪಡುತ್ತಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಬಿಡುವಿನ ಸಮಯದಲ್ಲಿ ಮುಕೇಶ್ ಅಂಬಾನಿ ತಮ್ಮ ಪತ್ನಿಯ ಸಮೇತ ಸ್ಟ್ರೀಟ್‌ಫುಡ್‌ಗೆ ಹೋಗಿ ಆಹಾರ ಸವಿಯಲು ಇಷ್ಟಪಡುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

VP
Vinutha Perla
ಮುಕೇಶ್ ಅಂಬಾನಿ
ನೀತಾ ಅಂಬಾನಿ
ಜೀವನಶೈಲಿ

Latest Videos
Recommended Stories
Recommended image1
ಮನೆಯೊಳಗಿನ ಗಿಡಗಳು ಬಾಡಿ ಹೋಗುತ್ತಿವೆಯೇ?, ಹಾಗಿದ್ರೆ ಈ 6 ತಪ್ಪು ತಿದ್ಕೊಳ್ಳಿ
Recommended image2
Relationship Cheating: ಹಳೆಯ ಅಫೇರ್, ಅಬಾರ್ಷನ್ ಸತ್ಯ ಬಾಯ್ಬಿಟ್ಟಿದ್ದ ಗಂಡ ಅದಕ್ಕೂ ಮಿಗಿಲಾದ ಡೇಂಜರಸ್ ಸತ್ಯ ಮುಚ್ಚಿಟ್ಟಿದ್ದ!
Recommended image3
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved