Asianet Suvarna News Asianet Suvarna News

ಗ್ರಾಹಕರಿಗೆ ಬಿಸಿ: ಒಮ್ಮೆ ಹಣ ತೆಗೆದರೆ 12 ತಾಸು ಮತ್ತೆ ಎಟಿಎಂ ಬಳಸುವಂತಿಲ್ಲ?

ಒಮ್ಮೆ ಹಣ ತೆಗೆದರೆ 12 ತಾಸು ಮತ್ತೆ ಎಟಿಎಂ ಬಳಸುವಂತಿಲ್ಲ?| ಎಟಿಎಂ ವಂಚನೆ ತಡೆಗೆ ಬ್ಯಾಂಕುಗಳ ಸಲಹೆ

Banks suggest 6-12 hours limit between two ATM transactions to prevent fraud
Author
Bangalore, First Published Aug 28, 2019, 9:19 AM IST

ನವದೆಹಲಿ[ಆ.28]: ಹೆಚ್ಚುತ್ತಿರುವ ಎಟಿಎಂ ವಂಚನೆಯನ್ನು ತಡೆಗಟ್ಟಲು, ಗ್ರಾಹಕರು ಒಂದು ಬಾರಿ ಎಟಿಎಂ ಬಳಸಿದರೆ ಇನ್ನೊಂದು ಬಾರಿ ಉಪಯೋಗಿಸಲು 6ರಿಂದ 12 ತಾಸು ಆಗಿರಬೇಕು ಎಂಬ ನಿಯಮ ರೂಪಿಸುವಂತೆ ಬ್ಯಾಂಕುಗಳು ಸಲಹೆ ನೀಡಿವೆ.

5 ಸಾವಿರ ರೂ. ವಿತ್'ಡ್ರಾ ಮಾಡಲು OTP: ಇಲ್ಲಿದೆ ಬ್ಯಾಂಕ್‌ ರೂಲ್ಸ್ ಕಾಪಿ!

ಸಾಮಾನ್ಯವಾಗಿ ಎಟಿಎಂ ವಂಚನೆ ಪ್ರಕರಣಗಳು ಘಟಿಸುವುದು ರಾತ್ರಿ ವೇಳೆ. ಅದರಲ್ಲೂ ಮಧ್ಯರಾತ್ರಿಯಿಂದ ನಸುಕಿನ ಜಾವದ ಸಮಯದಲ್ಲಿ. ಈ ರೀತಿ ಕಾಲ ಮಿತಿ ಹೇರುವುದರಿಂದ ವಂಚನೆಯನ್ನು ತಡೆಗಟ್ಟಬಹುದಾಗಿರುತ್ತದೆ ಎಂದು ದೆಹಲಿ ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿ ಸಭೆಯಲ್ಲಿ ಓರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ನ ವ್ಯವಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕೇಶ್‌ ಕುಮಾರ್‌ ಜೈನ್‌ ಅವರು ಸಲಹೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಅಥವಾ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಈ ಸಲಹೆಯನ್ನೇನಾದರೂ ಸ್ವೀಕರಿಸಿದರೆ, ದೇಶಾದ್ಯಂತ ಎಟಿಎಂ ವ್ಯವಹಾರಕ್ಕೆ ಸಮಯದ ಮಿತಿ ಹೇರಲಾಗುತ್ತದೆ.

ದೇಶದಲ್ಲಿ 2017-18ರಲ್ಲಿ 911 ಎಟಿಎಂ ವಂಚನೆ ಪ್ರಕರಣಗಳು ವರದಿಯಾಗಿದ್ದವು. 2018-19ರಲ್ಲಿ ಇದು 980ಕ್ಕೆ ಜಿಗಿತ ಕಂಡಿದೆ. 233 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, 179 ಪ್ರಕರಣಗಳು ವರದಿಯಾಗಿರುವ ದೆಹಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಈ ಸಲಹೆ ಮಹತ್ವ ಪಡೆದುಕೊಂಡಿದೆ.

ಎಟಿಎಂನಿಂದ ಹಣ ಹೊರ ಬಂದರಷ್ಟೇ ವಹಿವಾಟು!

ಮತ್ತೊಂದೆಡೆ, ಎಟಿಎಂ ವಂಚನೆ ತಡೆಗಟ್ಟಲು ನಗದು ಪಡೆಯುವ ಮುನ್ನ ಒಟಿಪಿಯನ್ನು ನಮೂದಿಸುವ ವ್ಯವಸ್ಥೆ ರೂಪಿಸುವ ಸಲಹೆಯೂ ಬ್ಯಾಂಕರುಗಳಿಂದ ವ್ಯಕ್ತವಾಗಿದೆ. ಆನ್‌ಲೈನ್‌ ಮೂಲಕ ಹಣ ವರ್ಗಾವಣೆ ಮಾಡುವಾಗ ಒಟಿಪಿ ನಮೂದು ಮಾಡುವ ವ್ಯವಸ್ಥೆ ಈಗಾಗಲೇ ಇದೆ.

Follow Us:
Download App:
  • android
  • ios