Asianet Suvarna News Asianet Suvarna News

5 ಸಾವಿರ ರೂ. ವಿತ್'ಡ್ರಾ ಮಾಡಲು OTP: ಇಲ್ಲಿದೆ ಬ್ಯಾಂಕ್‌ ರೂಲ್ಸ್ ಕಾಪಿ!

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದಿನಕ್ಕೊಂದು ಹೊಸ ನಿಯಮ| ಬ್ಯಾಂಕಿಂಗ್ ವ್ಯವಸ್ಥೆಯ ಡಿಜಿಟಲೀಕರಣ ಹಾಗೂ ಆಧುನೀಕರಣದ ಪರಿಣಾಮ| ಕೆನರಾ ಬ್ಯಾಂಕ್‌ ಎಟಿಎಂ ಹಣ ವಿತ್'ಡ್ರಾ ನಿಯಮದಲ್ಲಿ ಬದಲಾವಣೆ |5 ಸಾವಿರ ರೂ. ವಿತ್'ಡ್ರಾ ಮಾಡಲು ಬೇಕು OTP| ಗ್ರಾಹಕರ ಖಾತೆ ಮತ್ತು ಹಣದ ಸುರಕ್ಷತೆಗಾಗಿ ಹೊಸ ನಿಯಮ ಜಾರಿಗೆ|

OTP For Cash Withdrawal Above 5 Thousand For Canara Bank Customer
Author
Bengaluru, First Published Aug 17, 2019, 3:34 PM IST

ಬೆಂಗಳೂರು(ಆ.17): ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದಿನಕ್ಕೊಂದು ಹೊಸ ನಿಯಮಾವಳಿಗಳು ಜಾರಿಯಾಗುವುದು ಇಂದು ಸಾಮಾನ್ಯವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಡಿಜಿಟಲೀಕರಣ ಹಾಗೂ ಆಧುನೀಕರಣದ ಪರಿಣಾಮ ಹೊಸ ಹೊಸ ನಿಯಮಾವಳಿಗಳು ಸಾಮಾನ್ಯವಾಗಿವೆ.

ಆದರೆ ಈ ನಿಯಮಾವಳಿಗಳು ಗ್ರಾಹಕರ ಸುರಕ್ಷತೆಗೆ ಅವಶ್ಯಕವೂ ಆಗಿದ್ದು, ಆಧುನೀಕರಣಕ್ಕೆ ತಕ್ಕಂತೆ ಈ ನಿಯಮಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುತ್ತಿವೆ.

ಅದರಂತೆ ಎಟಿಎಂನಿಂದ ಹಣ ವಿತ್'ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ ತಂದಿರುವ ಕೆನರಾ ಬ್ಯಾಂಕ್, 5 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್'ಡ್ರಾ ಮಾಡಲು OTP ವ್ಯವಸ್ಥೆಯನ್ನು ಜಾರಿಗೆ ತಂದಿದೆ.

5 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣ ವಿತ್'ಡ್ರಾ ಮಾಡುವ ಗ್ರಾಹಕನ ಅಧಿಕೃತ ಮೊಬೈಲ್ ನಂಬರ್‌ಗೆ OTP ಬರುತ್ತದೆ. ಆ OTPಯನ್ನು ಎಟಿಎಂ ಯಂತ್ರದಲ್ಲಿ ನಮೂದಿಸಿದಾಗ ಮಾತ್ರ ಹಣ ವಿತ್'ಡ್ರಾ ಆಗುತ್ತದೆ.

ದಿನಕ್ಕೆ 5 ಸಾವಿರ ರೂ. ವಿತ್'ಡ್ರಾ ಮಿತಿಯನ್ನು ಮತ್ತಷ್ಟು ಅಚ್ಚುಕಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಎನ್ನಲಾಗಿದೆ.

ಗ್ರಾಹಕರ ಖಾತೆ ಮತ್ತು ಹಣದ ಸುರಕ್ಷತೆಗಾಗಿ ಈ ಹೊಸ ನಿಯಮ ಜಾರಿಗೆ ತಂದಿದ್ದು, ಹೊಸ ನಿಯಮ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

Follow Us:
Download App:
  • android
  • ios