Asianet Suvarna News Asianet Suvarna News

ಎಟಿಎಂನಿಂದ ಹಣ ಹೊರ ಬಂದರಷ್ಟೇ ವಹಿವಾಟು!

ತಾಂತ್ರಿಕ ತೊಂದರೆ, ಹಣದ ಅಲಭ್ಯತೆ ಇದ್ದಾಗ ಗ್ರಾಹಕರು ಎಟಿಎಂ ಬಳಸಿದರೆ ಅದನ್ನೂ 1 ವ್ಯವಹಾರ ಎಂದು ಬ್ಯಾಂಕುಗಳು ಪರಿಗಣಿಸುತ್ತಿದ್ದ ಬ್ಯಾಂಕ್| ಎಟಿಎಂನಿಂದ ಹಣ ಹೊರ ಬಂದರಷ್ಟೇ ವಹಿವಾಟು: ಆರ್‌ಬಿಐ| 

Failed ATM Transactions cannot be Counted as Valid says RBI
Author
Bangalore, First Published Aug 17, 2019, 9:09 AM IST

ನವದೆಹಲಿ[ಆ.17]: ಮಾಸಿಕ ಐದು ಬಾರಿ ಎಟಿಎಂ ಅನ್ನು ಉಚಿತವಾಗಿ ಬಳಸಲು ಗ್ರಾಹಕರಿಗಿರುವ ಅವಕಾಶವನ್ನು ಕೆಲ ಬ್ಯಾಂಕುಗಳು ಮೊಟಕುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸುತ್ತೋಲೆಯೊಂದನ್ನು ಹೊರಡಿಸಿದೆ.

ಎಟಿಎಂಗಳಲ್ಲಿ ಗ್ರಾಹಕರು ನಗದು ಪಡೆಯಲು ಯತ್ನಿಸಿ ವಿಫಲರಾದರೆ ಅಥವಾ ಬ್ಯಾಲೆನ್ಸ್‌ ವಿಚಾರಣೆ ಮಾಡಿದರೆ ಅಥವಾ ಚೆಕ್‌ ಪುಸ್ತಕಕ್ಕೆ ಕೋರಿಕೆ ಇಟ್ಟರೆ ಅದು 5 ಉಚಿತ ವ್ಯವಹಾರಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ತಾಂತ್ರಿಕ ಕಾರಣಗಳು ಅಥವಾ ಎಟಿಎಂನಲ್ಲಿ ಹಣದ ಅಲಭ್ಯತೆ, ಪಿನ್‌ ತಪ್ಪಾಗಿ ನಮೂದಿನಿಂದಾಗಿ ಗ್ರಾಹಕ ಎಟಿಎಂನಿಂದ ಹಣ ಪಡೆಯಲು ವಿಫಲನಾದರೆ ಅದನ್ನು ಉಚಿತ ವ್ಯವಹಾರಗಳ ಸಾಲಿಗೆ ಸೇರಿಸಕೂಡದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ತಾಂತ್ರಿಕ ತೊಂದರೆ, ಹಣದ ಅಲಭ್ಯತೆ ಇದ್ದಾಗ ಗ್ರಾಹಕರು ಎಟಿಎಂ ಬಳಸಿದರೆ ಅದನ್ನೂ 1 ವ್ಯವಹಾರ ಎಂದು ಬ್ಯಾಂಕುಗಳು ಪರಿಗಣಿಸುತ್ತಿದ್ದ ಕಾರಣ ಈ ಸುತ್ತೋಲೆ ಹೊರಡಿಸಲಾಗಿದೆ.

Follow Us:
Download App:
  • android
  • ios