Asianet Suvarna News Asianet Suvarna News

ಸಹಕಾರ ಬ್ಯಾಂಕ್‌ ನಿರ್ದೇಶಕರ ಅವಧಿ 8 ರಿಂದ 10 ವರ್ಷಕ್ಕೆ ಏರಿಕೆ, ಬ್ಯಾಂಕ್‌ ಖಾತೆಗೆ ನಾಲ್ವರು ನಾಮಿನಿ!

nominee For Bank account four Members ಸಹಕಾರಿ ಬ್ಯಾಂಕ್ ನಿರ್ದೇಶಕರ (ಅಧ್ಯಕ್ಷರು ಮತ್ತು ಪೂರ್ಣ ಸಮಯದ ನಿರ್ದೇಶಕರನ್ನು ಹೊರತುಪಡಿಸಿ) ಅಧಿಕಾರಾವಧಿಯನ್ನು ಪ್ರಸ್ತುತ 8 ವರ್ಷಗಳಿಂದ 10 ವರ್ಷಗಳಿಗೆ ಹೆಚ್ಚಿಸಲು ಬ್ಯಾಂಕಿಂಗ್‌ ನಿಯಮ ತಿದ್ದುಪಡಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.

Banking Law Amendment four nominees to an account cooperative bank director tenure san
Author
First Published Aug 10, 2024, 8:27 PM IST | Last Updated Aug 10, 2024, 8:27 PM IST

ನವದೆಹಲಿ (ಆ.10):ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ ಮಂಡನೆ ಮಾಡಿದ್ದಾರೆ. ಇದರಲ್ಲಿ ಬ್ಯಾಂಕಿಂಗ್‌ ವಲಯದಲ್ಲಿ ಹಲವಾದು ಬದಲಾವಣೆಗಳನ್ನು ಅವರು ಪ್ರಸ್ತಾಪ ಮಾಡಿದ್ದಾರೆ. ಸದ್ಯ ಬ್ಯಾಂಕ್ ಖಾತೆಗೆ ಇರುವ ನಾಮಿನಿಗಳ ಪ್ರಮಾಣವನ್ನು ನಾಲ್ಕಕ್ಕೆ ಏರಿಕೆ ಮಾಡುವುದರೊಂದಿಗೆ ಮಹತ್ತರವಾದ ಕೆಲವು ಬದಲಾವಣೆಗಳನ್ನು ಶಿಫಾರಸು ಮಾಡಲಾಗಿದೆ. ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ಅವಧಿಯನ್ನು ಹೆಚ್ಚಳ ಮಾಡುವ ಪ್ರಸ್ತಾಪ ಮಾಡಲಾಗಿದೆ. ಪ್ರಸ್ತುತ ಒಂದು ಬ್ಯಾಂಕ್‌ ಖಾತೆಗೆ ಒಬ್ಬರನ್ನು ಮಾತ್ರವೇ ನಾಮಿನಿಯಾಗಿ ಇರಿಸಲು ಸಾಧ್ಯವಿದೆ. ಮೂಲಗಳ ಪ್ರಕಾರ, ಹೊಸ ಕಾನೂನು ಏಕಕಾಲಿಕ ಮತ್ತು ಅನುಕ್ರಮ ನಾಮನಿರ್ದೇಶನಗಳಿಗೆ ನಿಬಂಧನೆಗಳನ್ನು ಹೊಂದಿರುತ್ತದೆ, ಠೇವಣಿದಾರರಿಗೆ ಮತ್ತು ಅವರ ಕಾನೂನು ಉತ್ತರಾಧಿಕಾರಿಗಳಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ, ವಿಶೇಷವಾಗಿ ಠೇವಣಿಗಳು, ಸುರಕ್ಷಿತ ಕಸ್ಟಡಿಯಲ್ಲಿರುವ ಚಿನ್ನಾಭರಣಗಳು, ಸುರಕ್ಷತಾ ಲಾಕರ್‌ಗಳಿಗೆ ಸಂಬಂಧಿಸಿದಂತೆ ಅವರಿಗೆ ಸಹಾಯ ಮಾಡಲಿದೆ.

ಹಕ್ಕು ಪಡೆಯದ ಲಾಭಾಂಶಗಳು, ಷೇರುಗಳು ಮತ್ತು ಬಡ್ಡಿ ಅಥವಾ ಬಾಂಡ್‌ಗಳ ವಿಮೋಚನೆಯನ್ನು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ (IEPF) ವರ್ಗಾಯಿಸಲು ಮಸೂದೆಯು ಪ್ರಸ್ತಾಪಿಸುತ್ತದೆ. ಇದು ವ್ಯಕ್ತಿಗಳು ನಿಧಿಯಿಂದ ವರ್ಗಾವಣೆ ಅಥವಾ ಮರುಪಾವತಿಯನ್ನು ಕ್ಲೈಮ್ ಮಾಡಲು ಅನುಮತಿಸುತ್ತದೆ, ಹೀಗಾಗಿ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ.

ಪ್ರಸ್ತಾವಿತ ತಿದ್ದುಪಡಿಗಳು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ಸೇರಿದಂತೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಮುಖ ಕಾಯಿದೆಗಳ ಮೇಲೆ ಪರಿಣಾಮ ಬೀರುತ್ತವೆ; ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯಿದೆ, 1955 ಮತ್ತು ಬ್ಯಾಂಕಿಂಗ್ ಕಂಪನಿಗಳ (ಅಂಡರ್‌ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆಗಳು 1970 ಮತ್ತು 1980. ಕೇಂದ್ರ ಸಚಿವ ಸಂಪುಟವು ಕಳೆದ ವಾರ ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ, 2024 ಅನ್ನು ಅನುಮೋದಿಸಿತು.

3 ದಿನ ಅಲ್ಲ ಇನ್ಮುಂದೆ ಮೂರೇ ತಾಸಲ್ಲಿ ಚೆಕ್‌ ಕ್ಲಿಯರೆನ್ಸ್‌..!

ಈ ಮಸೂದೆಯು ಆಡಳಿತದ ಗುಣಮಟ್ಟವನ್ನು ಸುಧಾರಿಸಲು, ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಬ್ಯಾಂಕ್‌ಗಳು ವರದಿ ಮಾಡುವಲ್ಲಿ ಸ್ಥಿರತೆಯನ್ನು ಒದಗಿಸಲು, ಠೇವಣಿದಾರರು ಮತ್ತು ಹೂಡಿಕೆದಾರರಿಗೆ ಉತ್ತಮ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಆಡಿಟ್ ಗುಣಮಟ್ಟವನ್ನು ಸುಧಾರಿಸಲು ಮತ್ತು ನಿರ್ದೇಶಕರು ಅಧಿಕಾರಾವಧಿಯಲ್ಲಿ ಹೆಚ್ಚಳ ಪಡೆಯಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಳಿಸಿವೆ. ಪ್ರಸ್ತುತ ಸಹಕಾರಿ ಬ್ಯಾಂಕ್ ನಿರ್ದೇಶಕರ (ಅಧ್ಯಕ್ಷರು ಮತ್ತು ಪೂರ್ಣ ಸಮಯದ ನಿರ್ದೇಶಕರನ್ನು ಹೊರತುಪಡಿಸಿ) ಅಧಿಕಾರಾವಧಿಯನ್ನು ಪ್ರಸ್ತುತ 8 ವರ್ಷಗಳಿಂದ 10 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ಭೂಕುಸಿತದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಸಂಕಷ್ಟ: ಸಾಲ ಕಟ್ಟುವಂತೆ ವಯನಾಡು ಸಂತ್ರಸ್ತರಿಗೆ ಬ್ಯಾಂಕ್‌ ಕಾಟ..!

Latest Videos
Follow Us:
Download App:
  • android
  • ios