MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Tata Share: 7 ಲಕ್ಷ ಕೋಟಿ ತೊಳೆದು ಹೋದ ದಿನದಲ್ಲಿ, ಶೇ.13ರಷ್ಟು ಏರಿಕೆ ಕಂಡ ಟಾಟಾ ಷೇರು!

Tata Share: 7 ಲಕ್ಷ ಕೋಟಿ ತೊಳೆದು ಹೋದ ದಿನದಲ್ಲಿ, ಶೇ.13ರಷ್ಟು ಏರಿಕೆ ಕಂಡ ಟಾಟಾ ಷೇರು!

ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರುಗಳು ಒಂದೇ ದಿನದಲ್ಲಿ ಶೇ. 13 ರಷ್ಟು ಏರಿಕೆ ಕಂಡಿವೆ. ಎನ್. ಚಂದ್ರಶೇಖರನ್ ಅವರ ಮರು ನೇಮಕಾತಿ ಸುದ್ದಿ ಮತ್ತು ಕಂಪನಿಯ ಡಿಸೆಂಬರ್ ತ್ರೈಮಾಸಿಕದಲ್ಲಿನ ಶೇ. 284.45 ರಷ್ಟು ಲಾಭದ ಹೆಚ್ಚಳವು ಈ ಜಿಗಿತಕ್ಕೆ ಪ್ರಮುಖ ಕಾರಣಗಳಾಗಿವೆ.

2 Min read
Author : Santosh Naik
Published : Feb 19 2026, 06:49 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : ‍

ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಷೇರುಗಳು ಗುರುವಾರ ಮಾರುಕಟ್ಟೆಯಲ್ಲಿ ಶೇ. 13 ರಷ್ಟು ಏರಿಕೆ ಕಂಡಿವೆ. ಇದು ಒಂದು ದಿನದ ಗರಿಷ್ಠ ಮಟ್ಟವಾಗಿದೆ. ಈ ಷೇರು ರೂ. 727.40 ತಲುಪಿದೆ. ಗುರುವಾರ ಮಾರುಕಟ್ಟೆಯಲ್ಲಿ ಹೂಡಿಕೆದಾರರ 7 ಲಕ್ಷ ಕೋಟಿ ರೂಪಾಯಿ ತೊಳೆದು ಹೋದರೂ, ಈ ಕಂಪನಿಯ ಒಂದೇ ಒಂದು ಸುದ್ದಿ ಮಾರುಕಟ್ಟೆಗೆ ಬಂದ ತಕ್ಷಣ ಷೇರುಗಳು ಜಿಗಿದವು. ಈ ಸುದ್ದಿ ಈ ಷೇರುಗಳಲ್ಲಿ ದೊಡ್ಡ ಜಿಗಿತಕ್ಕೆ ಕಾರಣವಾಯಿತು.

26
Image Credit : ‍

ಟಾಟಾ ಸನ್ಸ್ ಶೀಘ್ರದಲ್ಲೇ ತನ್ನ ನಿರ್ದೇಶಕರ ಮಂಡಳಿಯ ವಿಶೇಷ ಸಭೆಯನ್ನು ಕರೆಯಲು ಸಜ್ಜಾಗಿದೆ. ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮರು ನೇಮಕ ಮಾಡಬಹುದು ಅನ್ನೋ ಸುದ್ದಿ ವ್ಯಾಪಕವಾಗಿದೆ. 2ನೇ ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಅದಕ್ಕೂ ಮುನ್ನವೇ ಅವರನ್ನು ಮೂರನೇ ಬಾರಿಗೆ ಅದೇ ಹುದ್ದೆಯಲ್ಲಿ ಮುಂದುವರಿಸುವುದು ಖಚಿತವಾಗಿದೆ.

Related Articles

Related image1
ಒಂದೇ ದಿನ ಶೇ. 40ರಷ್ಟು ಕುಸಿದ ಟಾಟಾ ಮೋಟಾರ್ಸ್‌ ಷೇರು, ಆದ್ರೆ ಚಿಂತೆ ಪಡೋ ಅಗತ್ಯವಿಲ್ಲ!
Related image2
ಟಾಟಾ ಮೋಟಾರ್ಸ್ ಷೇರು ಕುಸಿತಕ್ಕೆ ಕಾರಣ ಸೈಬರ್‌ ದಾಳಿ: ವಾರಕ್ಕೆ 6,000 ಕೋಟಿ ನಷ್ಟ ಅನುಭವಿಸುತ್ತಿದೆ JLR!
36
Image Credit : ‍

ಎನ್. ಚಂದ್ರಶೇಖರನ್ ಅವರ ಮರು ನೇಮಕಾತಿ ಆಗುವ ಸುದ್ದಿಯಿಂದ ಹೂಡಿಕೆದಾರರಲ್ಲಿ ಸಂಭ್ರಮ ಮನೆ ಮಾಡಿದೆ. ಷೇರುಪೇಟೆ ಶೇ. 13 ರಷ್ಟು ಏರಿಕೆಯಾಗಿ ಒಂದೇ ದಿನದ ಗರಿಷ್ಠ ಮಟ್ಟವಾದ 727.40 ರೂಪಾಯಿ ತಲುಪಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಹೂಡಿಕೆದಾರರು ಮತ್ತು ಟ್ರೇಡರ್‌ಗಳು ಈ ಷೇರಿನ ಮೇಲೆ ಕಣ್ಣಿಡುವ ಸಾಧ್ಯತೆ ಇದೆ.

46
Image Credit : ‍

ಅದಲ್ಲದೆ, ಡಿಸೆಂಬರ್ 2025 ರ ತ್ರೈಮಾಸಿಕ ಫಲಿತಾಂಶಗಳು ಹೂಡಿಕೆದಾರರಿಗೆ ಸಂತೋಷ ತಂದಿವೆ. ಕಂಪನಿಯ ಒಟ್ಟು ಲಾಭವು ಶೇಕಡಾ 284.45 ರಷ್ಟು ಹೆಚ್ಚಾಗಿದೆ. ವಾರ್ಷಿಕ ಆಧಾರದ ಮೇಲೆ, ಕಂಪನಿಯ ಲಾಭವು 19.61 ಕೋಟಿ ರೂ.ಗಳಿಂದ 75.39 ಕೋಟಿ ರೂ.ಗಳಿಗೆ ಏರಿದೆ. ಆದಾಯದಲ್ಲಿಯೂ ದೊಡ್ಡ ಏರಿಕೆ ಕಂಡುಬಂದಿದೆ. ಆದಾಯವು ಶೇಕಡಾ 1,461 ರಷ್ಟು ಹೆಚ್ಚಾಗಿ 57.92 ಕೋಟಿ ರೂ.ಗಳಿಗೆ ತಲುಪಿದೆ.

56
Image Credit : ‍

ಹಾಗಾಗಿ ಈಗ ಹೂಡಿಕೆದಾರರು ಟಾಟಾ ಕ್ಯಾಪಿಟಲ್ ಐಪಿಒ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಹೂಡಿಕೆದಾರರಲ್ಲಿ ಈ ಐಪಿಒ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ, ಹೂಡಿಕೆದಾರರು ಹೊಸ ಅಪ್‌ಟೇಟ್‌ಗಳನ್ನು ನೋಡುತ್ತಿದ್ದಾರೆ.

66
Image Credit : Getty

Disclaimer: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಯಾವುದೇ ಷೇರು, ಮ್ಯೂಚುವಲ್ ಫಂಡ್, ಐಪಿಒಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡುವುದಿಲ್ಲ. ಇಲ್ಲಿ ಮಾಹಿತಿಯನ್ನು ಮಾತ್ರ ಒದಗಿಸಲಾಗಿದೆ. ಹೂಡಿಕೆ ಮಾಡುವ ಮೊದಲು ದಯವಿಟ್ಟು ತಜ್ಞರು ಅಥವಾ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಟಾಟಾ
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ
ವ್ಯವಹಾರ
ವ್ಯಾಪಾರ ಸುದ್ದಿ

Latest Videos
Recommended Stories
Recommended image1
ಮೊಬೈಲ್ ಡೇಟಾ ಕ್ರಾಂತಿ ರೀತಿ ಕಡಿಮೆ ಬೆಲೆಯಲ್ಲಿ ಎಐ, ₹10 ಲಕ್ಷ ಕೋಟಿ ಹೂಡಿಕೆ ಘೋಷಿಸಿದ ಅಂಬಾನಿ
Recommended image2
ತಮಿಳುನಾಡು ಯುವಕನಿಗೆ ದುಬಾರಿ ಜೀವನ ಪಾಠ ಮಾಡಿದ ಬೆಂಗಳೂರು; ಒಂದೇ ವಾರಕ್ಕೆ ₹30,000 ಖರ್ಚು ಮಾಡಿಕೊಂಡು ತೆಪ್ಪಗಾದ!
Recommended image3
ಭಾರತದ ಶ್ರೀಮಂತ, ಬಡ ರಾಜ್ಯಗಳ ಪಟ್ಟಿ: ಉತ್ತರ ಪ್ರದೇಶ, ಗುಜರಾತ್, ಕರ್ನಾಟಕದ ಸ್ಥಾನವೆಷ್ಟು?
Related Stories
Recommended image1
ಒಂದೇ ದಿನ ಶೇ. 40ರಷ್ಟು ಕುಸಿದ ಟಾಟಾ ಮೋಟಾರ್ಸ್‌ ಷೇರು, ಆದ್ರೆ ಚಿಂತೆ ಪಡೋ ಅಗತ್ಯವಿಲ್ಲ!
Recommended image2
ಟಾಟಾ ಮೋಟಾರ್ಸ್ ಷೇರು ಕುಸಿತಕ್ಕೆ ಕಾರಣ ಸೈಬರ್‌ ದಾಳಿ: ವಾರಕ್ಕೆ 6,000 ಕೋಟಿ ನಷ್ಟ ಅನುಭವಿಸುತ್ತಿದೆ JLR!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved