Asianet Suvarna News Asianet Suvarna News

ಭೂಕುಸಿತದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಸಂಕಷ್ಟ: ಸಾಲ ಕಟ್ಟುವಂತೆ ವಯನಾಡು ಸಂತ್ರಸ್ತರಿಗೆ ಬ್ಯಾಂಕ್‌ ಕಾಟ..!

ಹಣಕಾಸು ಸಂಸ್ಥೆಗಳ ಈ ವರ್ತನೆ ಬಗ್ಗೆ ಕಿಡಿಕಾರಿರುವ ಸಚಿವ ಮೊಹಮ್ಮದ್ ರಿಯಾಜ್, 'ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರನ್ನು ಸಾಲ ಮರುಪಾವತಿ ಮಾಡುವಂತೆ ಪೀಡಿಸುವಂತಿಲ್ಲ. ಈ ರೀತಿ ಮಾಡುವುದನ್ನು ಅಮಾನವೀಯ ಮತ್ತು ಖಂಡನೀಯ. ಇದನ್ನು ಸಹಿಸುವುದಿಲ್ಲ. ಪೀಡಿಸಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ' ಎಂದಿದ್ದಾರೆ.

banks notice to wayand landslide victims for pay loan amount in kerala grg
Author
First Published Aug 8, 2024, 8:03 AM IST | Last Updated Aug 8, 2024, 10:56 AM IST

ತಿರುವನಂತಪುರಂ(ಆ.08):  ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದಲ್ಲಿ ಆಸ್ತಿಪಾಸ್ತಿ, ತಮ್ಮವರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಜನರಿಗೆ ಇದೀಗ ಇನ್ನೊಂದು ವಿಪತ್ತು ಎದುರಾಗಿದೆ. ವಿವಿಧ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕುಗಳಿಂದ ಸಾಲ ಪಡೆದವರಿಗೆ, ತಕ್ಷಣವೇ ಹಣ ಪಾವತಿ ಮಾಡುವಂತೆ ದೂರವಾಣಿ ಕರೆ ಮಾಡಿ ಒತ್ತಾಯಿಸಲಾಗುತ್ತಿದೆ. ಇದು ಸಂತ್ರಸ್ತರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ.

ಈ ನಡುವೆ ಹಣಕಾಸು ಸಂಸ್ಥೆಗಳ ಈ ವರ್ತನೆ ಬಗ್ಗೆ ಕಿಡಿಕಾರಿರುವ ಸಚಿವ ಮೊಹಮ್ಮದ್ ರಿಯಾಜ್, 'ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರನ್ನು ಸಾಲ ಮರುಪಾವತಿ ಮಾಡುವಂತೆ ಪೀಡಿಸುವಂತಿಲ್ಲ. ಈ ರೀತಿ ಮಾಡುವುದನ್ನು ಅಮಾನವೀಯ ಮತ್ತು ಖಂಡನೀಯ. ಇದನ್ನು ಸಹಿಸುವುದಿಲ್ಲ. ಪೀಡಿಸಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ' ಎಂದಿದ್ದಾರೆ.

ನಮ್ಮವರು ಇರಬಹುದು ಮೆಲ್ಲನೆ ಅಗೆಯಿರಿ: ಯುವಕನ ಮನಮಿಡಿಯುವ ಮನವಿಗೆ ಹಿಟಾಚಿ ಚಾಲಕ ಭಾವುಕ

ಸಾವು 413ಕ್ಕೆ ಏರಿಕೆ, 152 ಜನ ನಾಪತ್ತೆ

ವಯನಾಡು: ವಯನಾಡು ಜಿಲ್ಲೆಯ 4 ಗ್ರಾಮಗಳ ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 413ಕ್ಕೆ ಏರಿಕೆಯಾಗಿದೆ. ಇನ್ನೂ 152 ಜನರು ನಾಪತ್ತೆಯಾಗಿದ್ದಾರೆ. ಈ ಗ್ರಾಮಗಳ ಜನರಿಗೆ 6 ತಿಂಗಳು ಉಚಿತ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದೆ. 

ಭೂಕುಸಿತದಿಂದ ಹಾನಿಗೊಳಗಾದ ಮೆಪ್ಪಾಡಿ ಪಂಚಾಯತ್ ವ್ಯಾಪ್ತಿಯ ಮೂರು ಪ್ರದೇಶಗಳಿಗೆ ಮುಂದಿನ ಆರು ತಿಂಗಳ ಕಾಲ ಉಚಿತ ವಿದ್ಯುತ್‌ ನೀಡುವಂತೆ ಸಚಿವ ಕೆ. ಕೃಷ್ಣನ್ ಕುಟ್ಟಿ ಕೇರಳ ರಾಜ್ಯ ವಿದ್ಯುತ್ ಮಂಡಳಿಗೆ ಮಂಗಳವಾರ ಸೂಚಿಸಿದ್ದಾರೆ. ಜೊತೆಗೆ 3 ಗ್ರಾಮಗಳ ವ್ಯಾಪ್ತಿಯ 1139 ಜನರು ಪಂಚಾಯಿ ತಿಗಳಿಗೆ ಉಳಿಸಿಕೊಂಡ ಬಾಕಿ ಪಾವತಿಯನ್ನೂ ಮನ್ನಾ ಮಾಡಲಾ ಗುವುದು ಎಂದು ತಿಳಿಸಿದ್ದಾರೆ. ಉಚಿತ ಪಡಿತರವೂ ಸಿಗಲಿದೆ.

Latest Videos
Follow Us:
Download App:
  • android
  • ios